ಅಮ್ಮನ ಆಸೆಯಂತೆ ಧಾರಾವಾಹಿಯಲ್ಲಿ ಅವಕಾಶ ಪಡೆದುಕೊಂಡ ಕನ್ನಡ ಕಿರುತೆರೆ ನಟ

ಕಲರ್ಸ್ ಕನ್ನಡದ ನಮ್ಮನೆ ಯುವರಾಣಿ ಧಾರಾವಾಹಿ ಎಲ್ಲರ ಅಚ್ಚುಮೆಚ್ಚಿನ ಸೀರಿಯಲ್ ಆಗಿತ್ತು. 2019 ರಿಂದ ತನ್ನ ಪ್ರಸಾರವನ್ನು ಶುರುಮಾಡಿದ ಈ ಸೀರಿಯಲ್ ಗೆ ಆರಂಭದಿಂದಲೂ ಜನರಿಂದ ಉತ್ತಮ ಪ್ರತಿಕ್ರಿಯೆ ಸಿಕ್ಕಿತ್ತು. ತುಂಬು ಕುಟುಂಬದ ಕಥೆ ಹೊಂದಿದ್ದ ಈ ಸೀರಿಯಲ್ ನಲ್ಲಿ ಅನಿಕೇತ್ ಮತ್ತು ಮೀರಾ, ಸಾಕೇತ್ ಮತ್ತು ಅಹಲ್ಯ ಎಲ್ಲರ ಅಚ್ಚುಮೆಚ್ಚಿನ ಜೋಡಿಯಾಗಿತ್ತು. ಆದರೆ ಈಗ ಅನಿಕೇತ್ ಮತ್ತು ಮೀರಾ ಪಾತ್ರಗಳು ಅಂತ್ಯವಾಗುತ್ತಿರುವುದು ಅನೇಕರಿಗೆ ಬೇಸರ ತಂದಿದೆ. ಈ ಎರಡು ಪಾತ್ರಗಳು ಅಂತ್ಯವಾದರೆ, ಈ ಸೀರಿಯಲ್ ಇರಲ್ಲ ಎಂದು ಹಲವರು ಅಭಿಪ್ರಾಯ ಪಟ್ಟಿದ್ದರು. ಆದರೆ ಹಾಗಾಗಲಿಲ್ಲ, ಅನಿಕೇತ್ ಹಾಗೂ ಮೀರಾ ಅವರ ಜಾಗದಲ್ಲಿ ಹೊಸ ಪಾತ್ರವೊಂದನ್ನು ಸೃಷ್ಟಿ ಮಾಡಿ ಅವರಿಬ್ಬರ ಜಾಗಕ್ಕೆ ಹೊಸ ಪಾತ್ರಗಳನ್ನು ನಮ್ಮನೆ ಯುವರಾಣಿ ಸೀರಿಯಲ್ ತಂಡ ತಂದಿದೆ.

ಹೌದು ನಮ್ಮನೆ ಯುವರಾಣಿ ಸೀರಿಯಲ್ ಕಥೆ ಏಳು ವರ್ಷ ಮುಂದಕ್ಕೆ ಹೋಗಿದೆ. ಮೀರಾ ಮತ್ತು ಅನಿಕೇತ್ ಕಣ್ಮರೆಯಾಗಿದ್ದಾರೆ ಹಾಗೂ ಅವರಿಬ್ಬರ ಜಾಗಕ್ಕೆ ಹೊಸಬರು ಎಂಟ್ರಿಕೊಟ್ಟಿದ್ದಾರೆ. ಅನಿಕೇತ್ ಬದಲಾಗಿ ಬಂದಿರುವ ಹೊಸ ಪಾತ್ರಧಾರಿಯೇ ಪ್ರಣವ್ ರಾಜಗುರು. ಪ್ರಣವ್ ರಾಜಗುರು ಈಗ ನಮ್ಮನೆ ಯುವರಾಣಿ ಸೀರಿಯಲ್ ನ ಲೀಡ್ ರೋಲ್ ಆಗಿ ಕಾರ್ಯನಿರ್ವಹಿಸಲಿದ್ದಾರೆ.
ಪ್ರಣವ್ ರಾಜಗುರು ಪಾತ್ರದಲ್ಲಿ ಅಭಿನಯಿಸುತ್ತಿರುವ ಹುಡುಗನ ಹೆಸರು ಸ್ನೇಹಿತ್ ಗೌಡ. ಸ್ನೇಹಿತ ಗೌಡ ಅವರು ಕಿರುತೆರೆಗೆ ಕಾಲಿಡಲು ಒಂದು ಎಮೋಷನಲ್ ಸ್ಟೋರಿ ಇದೆಯಂತೆ.

ಹಳ್ಳಿಯಲ್ಲಿ ಹುಟ್ಟಿ ಬೆಳೆದ ಸ್ನೇಹಿತ ಗೌಡ ಅವರು ಇದ್ದದ್ದು ಅವರ ತಾಯಿಯ ಊರಿನಲ್ಲಿ. ಹಾಗೂ ಅವರ ತಾಯಿಯ ಊರಿನಲ್ಲಿ ಇದ್ದದ್ದು ಒಂದೇ ಟಿವಿ. ಆ ಟಿವಿಯಲ್ಲಿ ದೂರದರ್ಶನದ ಕಾರ್ಯಕ್ರಮಗಳನ್ನು ವೀಕ್ಷಿಸಲು ಪೈಪೋಟಿ ನಡೆಸುತ್ತಿದ್ದರಂತೆ. ನಟನಾಗಬೇಕು ಎನ್ನುವ ಮಹತ್ವಾಕಾಂಕ್ಷೆ ಸ್ನೇಹಿತ ಗೌಡ ಅವರಿಗೆ ಇದ್ದರೂ ಕೂಡ ಅವರಿಗಿಂತ ಅವರ ತಾಯಿಗೆ ತಮ್ಮ ಮಗನನ್ನು ಟಿವಿಯಲ್ಲಿ ನೋಡಬೇಕು ಎಂಬ ಆಸೆ ಮತ್ತು ಕನಸು. ತಮ್ಮ ತಾಯಿಯ ಕನಸನ್ನು ನೆರವೇರಿಸಲು ಸ್ನೇಹಿತ್ ಅವರು ಎಷ್ಟೋ ವರ್ಷ ಕಷ್ಟ ಪಟ್ಟಿದ್ದರ ಪ್ರತಿಫಲ ಈಗ ದೊರೆತಿದೆ.

ಡಿಸೆಂಬರ್ 25ರಂದು ನಾನು ಟಿವಿಯಲ್ಲಿ ಬರ್ತೀನಿ ನೋಡಮ್ಮ ಅಂತ ಸ್ನೇಹಿತ ಗೌಡ ಅವರು ತಮ್ಮ ತಾಯಿಗೆ ಹೇಳಿದಾಗ ಅವರ ಸಂತೋಷಕ್ಕೆ ಪಾರವೇ ಇರಲಿಲ್ಲ. ನನ್ನನ್ನು ಟಿವಿಯಲ್ಲಿ ನೋಡುವ ನನ್ನ ತಾಯಿಯ ಕನಸು ನಿಜವಾಗಿದೆ. ನನ್ನ ತಾಯಿ ಅತಿ ಹೆಚ್ಚು ಸಂತೋಷಪಟ್ಟ ಕ್ಷಣವಿದು ಎಂದು ಸ್ನೇಹಿತ ಗೌಡ ಅವರು ಭಾವುಕರಾಗಿ ತಮ್ಮ ಇನ್ಸ್ಟಾಗ್ರಾಮ್ ಪೇಜ್ ನಲ್ಲಿ ಬರೆದುಕೊಂಡಿದ್ದಾರೆ. ತಮ್ಮ ತಾಯಿಯ ಕನಸು ಈಡೇರಿಸಿದ ಸಂತೃಪ್ತಿಯ ಭಾವ ಅವರಲ್ಲಿ ಇದ್ದರೂ ಕೂಡ ಇನ್ನಷ್ಟು ಸಾಧನೆ ಮಾಡಬೇಕು ಎನ್ನುವ ಉತ್ಸಾಹವು ಕೂಡ ಇದೆ ಎಂದು ಸ್ನೇಹಿತ್ ಗೌಡ ವ್ಯಕ್ತಪಡಿಸಿದ್ದಾರೆ.

%d bloggers like this: