ಚಿತ್ರರಂಗಕ್ಕೆ ಎಂಟ್ರಿ ಕೊಡುತ್ತಿದ್ದಾರೆ ಶಾಸಕ ಜಮೀರ್ ಖಾನ್ ಅವರ ಪುತ್ರ

ರಾಜಕೀಯದಲ್ಲಿ ಜನಪ್ರಿಯರಾಗಿರುವ ಮತ್ತೊಬ್ಬ ಶಾಸಕರ ಮಗ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡುತ್ತಿದ್ದು ಈ ಚಿತ್ರಕ್ಕೆ ಜಯತೀರ್ಥ ನಿರ್ದೇಶನ ಮಾಡುತ್ತಿದ್ದಾರೆ. ರಾಜಕಾರಣಿಯ ಮಕ್ಕಳು ಸಾಮಾನ್ಯವಾಗಿ ತಂದೆಯ ಉತ್ತರಾಧಿಕಾರಿಯಾಗಿ ಅವರ ಮಕ್ಕಳು ಸಹ ರಾಜಕೀಯದ ಹಾದಿ ಹಿಡಿಯುತ್ತಾರೆ. ಆದರೆ ಕೆಲವು ರಾಜಕಾರಣಿ ಮಕ್ಕಳು ಆ ಸಹವಾಸವೇ ಬೇಡ ಎಂದು ಚಿತ್ರರಂಗಕ್ಕೆ ಮುಖ ಮಾಡುತ್ತಾರೆ, ರಾಜಕೀಯ ಮಕ್ಕಳು ಬಣ್ಣದ ಲೋಕಕ್ಕೆ ಹೆಜ್ಜೆ ಹಾಕುವುದು ಹೊಸದೇನಲ್ಲ.

ಈಗಾಗಲೇ ಶಾಸಕ ಚೆಲುವನಾರಾಯಣ ಸ್ವಾಮಿಯವರ ಮಗ ಸಚಿನ್ ಅವರು ಹ್ಯಾಪಿ ಬರ್ತಡೆ ಚಿತ್ರದ ಮೂಲಕ ಮತ್ತು ಎಚ್. ಎಂ. ರೇವಣ್ಣ ಅವರ ಮಗ ಅನೂಪ್ ರೇವಣ್ಣ ಲಕ್ಷ್ಮಣ ಚಿತ್ರದ ಮೂಲಕ ಹೀಗೆ ಮಾಜಿ ಮುಖ್ಯ ಮಂತ್ರಿ ಎಚ್.ಡಿ. ಕುಮಾರಸ್ವಾಮಿಯವರ ಸುಪುತ್ರ ನಿಖಿಲ್ ಕುಮಾರ್ ಕೂಡ ಜಾಗ್ವಾರ್ ಸಿನಿಮಾದ ಮೂಲಕ ಕನ್ನಡ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದರು ಹೀಗೆ ರಾಜಕಾರಣಿಯ ಮಕ್ಕಳು ಸಹ ಬಣ್ಣದ ಲೋಕವನ್ನು ಅರಸಿ ಬಂದಿದ್ದಾರೆ. ಇದೀಗ ಇವರ ಸಾಲಿಗೆ ಬೆಂಗಳೂರಿನ ಚಾಮರಾಜಪೇಟೆಯ ಜನಪ್ರಿಯ ಶಾಸಕರಾಗಿರುವ ಜಮೀರ್ ಅಹಮ್ಮದ್ ಖಾನ್ ಅವರ ಸುಪುತ್ರ ಜೈದ್ ಖಾನ್ ಅವರು ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡುತ್ತಿದ್ದಾರೆ.

ಜೈದ್ ಖಾನ್ ನಟನಿಗೆ ಬೇಕಾದ ಅಭಿನಯ, ನೃತ್ಯ, ಸಾಹಸ ಹೀಗೆ ಎಲ್ಲಾ ರೀತಿಯ ತಯಾರಿಯನ್ನು ಪಡೆದುಕೊಂಡು ಸಿನಿಮಾ ಕ್ಷೇತ್ರದ ಅಖಾಡಕ್ಕೆ ಇಳಿದಿದ್ದಾರೆ. ಇವರ ಜೊತೆಗೆ ನಾಯಕಿಯಾಗಿ ಸೋನಾಲ್ ಮೊಂಟೀರೋ ಅವರು ನಾಯಕಿಯಾಗಿ ಬಣ್ಣ ಹಚ್ಚಿದ್ದಾರೆ. ಇವರ ಜೊತೆಗೆ ಹಿರಿಯ ಕಲಾವಿದರಾದ ಡೈನಾಮಿಕ್ ಪ್ರಿನ್ಸ್ ದೇವರಾಜ್, ಅಚ್ಯುತ್ ಕುಮಾರ್, ಸ್ವಪ್ನರಾಜ್ ರಂತಹ ಅನುಭವಿ ಕಲಾವಿದರು ಕೂಡ ಈ ಚಿತ್ರದಲ್ಲಿ ನಟಿಸಿದ್ದಾರೆ. ಇನ್ನು ಸಂಗೀತ ನಿರ್ದೇಶಕರಾಗಿ ಅನೂಪ್ ಸೀಳೀನ್ ಅವರು ಕೆಲಸ ಮಾಡಿದ್ದು, ಚಿತ್ರದ ಜವಾಬ್ದಾರಿಯನ್ನು ಒಲವೇ ಮಂದಾರ, ಬ್ಯುಟಿಪುಲ್ ಮನಸುಗಳು ಚಿತ್ರದ ಖ್ಯಾತಿಯ ಜಯತೀರ್ಥ ಅವರು ನಿರ್ದೇಶನ ಜವಾಬ್ದಾರಿಯನ್ನು ಹೊತ್ತಿದ್ದಾರೆ.

ಇನ್ನು ಚಿತ್ರಕ್ಕೆ ತಿಲಕ್ ರಾಜ್ ಬಲ್ಲಾಳ್ ಅವರು ಬಂಡವಾಳ ಹೂಡಿದ್ದು ನ್ಯಾಷನಲ್ ಖಾನ್ ಪ್ರೋಡಕ್ಷನ್ ನಲ್ಲಿ ಈ ಚಿತ್ರವು ನಿರ್ಮಾಣಗೊಂಡಿದೆ. ಚಿತ್ರಕ್ಕೆ “ಬನಾರಸ್” ಎಂದು ಟೈಟಲ್ ಫಿಕ್ಸ್ ಮಾಡಿದ್ದು ಈ ಬನಾರಸ್ ಟೈಟಲ್ ವಾರಾಣಾಸಿಗೆ ಸಂಬಂದಿಸಿದ್ದಾಗಿದೆ ಎಂದು ಚಿತ್ರದ ನಿರ್ದೇಶಕರು ತಿಳಿಸಿದ್ದಾರೆ. ಇನ್ನು ಈ ಚಿತ್ರದ ಶೂಟಿಂಗ್ ನ ಎಲ್ಲಾ ಕೆಲಸ ಕಾರ್ಯಗಳು ಮುಕ್ತಾಯಗೊಂಡು ಪೋಸ್ಟ್ ಪ್ರೋಡಕ್ಷನ್ ಕೆಲಸದಲ್ಲಿ ಚಿತ್ರತಂಡ ಬಿಝಿಯಾಗಿದ್ದಾರೆ. ಇತ್ತೀಚೆಗೆ ವಾಡಿಕೆಯಂತೆ ಬಸವನಗುಡಿಯ ದೊಡ್ಡ ಗಣಪತಿಯ ದೇವಾಲಯದಲ್ಲಿ ಕುಂಬಳಕಾಯಿ ಒಡೆದು ಪೂಜೆ ನೆರವೇರಿಸಿದ್ದಾರೆ. ಒಟ್ಟಾರೆಯಾಗಿ ಈ ಬನಾರಸ್ ಚಿತ್ರ ಅದ್ದೂರಿಯಾಗಿ ಮೂಡಿಬಂದಿದ್ದು ಜೈದ್ ಖಾನ್ ಅವರು ಸ್ಯಾಂಡಲ್ ವುಡ್ ಗೆ ಭರ್ಜರಿಯಾಗಿ ಎಂಟ್ರಿ ಕೊಡುತ್ತಿದ್ದಾರೆ.

%d bloggers like this: