ಆಂಜನೇಯ ಹನುಮಂತ ಭಜರಂಗಿ ವಾಯುಪುತ್ರ ಮಾರುತಿರಾಯ ಹೀಗೆ ನಾನಾ ಹೆಸರುಗಳಿಂದ ಆರಾಧಿಸಲ್ಪಡುವ ದೇವರೆಂದರೆ ಅದು ಎಲ್ಲರ ನೆಚ್ಚಿನ ಆಂಜನೇಯ ಸ್ವಾಮಿ. ಅದರಲ್ಲೂ ಯುವಕರಿಗೆ ಭಜರಂಗಿಯ ಮೇಲೆ ಇನ್ನು ವಿಶೇಷ ಪ್ರೀತಿ ಮತ್ತು ಭಕ್ತಿ ಎನ್ನಬಹುದು. ಮನಸ್ಪೂರ್ವಕವಾಗಿ ಮಾರುತಿರಾಯನನ್ನು ಬೇಡಿಕೊಂಡರೆ ಎಲ್ಲ ಇಷ್ಟಾರ್ಥಗಳು ಈಡೇರುತ್ತವೆ ಮತ್ತು ಎಲ್ಲಾ ಕಷ್ಟಗಳು ದೂರವಾಗುತ್ತವೆ ಹಾಗಾಗಿ ಇಷ್ಟೊಂದು ಸಂಖ್ಯೆಯ ಭಕ್ತರನ್ನು ಹೊಂದಿದ್ದಾರೆ ಆಂಜನೇಯ ಸ್ವಾಮಿ. ಅದರಲ್ಲೂ ವಿಶೇಷವಾಗಿ ದೇಹದರ್ಡ್ಯದ ಬಗ್ಗೆ ಒಲವು ಹೊಂದಿರುವವರಿಗೆ ಮೊದಲನೆಯ ಸ್ಪೂರ್ತಿ ಅಂದರೆ ಆಂಜನೇಯಸ್ವಾಮಿ.

ಹೀಗಾಗಿ ಬಹುತೇಕ ಜಿಮ್ ಗಳಲ್ಲಿ ಹನುಮಂತನ ಭಾವಚಿತ್ರವನ್ನು ಹಾಕಿರುವುದನ್ನು ನಾವು ಗಮನಿಸುತ್ತೇವೆ. ದೇಶವಿದೇಶಗಳಲ್ಲಿ ಆಂಜನೇಯನಿಗೆ ಕೋಟಿ ಕೋಟಿ ಭಕ್ತರು ಇರುವುದು ನಮಗೆ ಗೊತ್ತೇ ಇದೆ. ಆದರೆ ಎಷ್ಟೋ ಸಾವಿರ ಮೈಲಿ ದೂರದಲ್ಲಿರುವ ದಕ್ಷಿಣ ಆಫ್ರಿಕಾದ ಒಬ್ಬ ಖ್ಯಾತ ನಟ ಹಾಗೂ ವಿಶ್ವದ ಶ್ರೇಷ್ಠ ಬಾಡಿಬಿಲ್ಡರ್ ಗಳಲ್ಲಿ ಒಬ್ಬನಾದ ಆತ ಆಂಜನೇಯ ಸ್ವಾಮಿಯ ಕಟ್ಟಾ ಅಭಿಮಾನಿ ಎಂದರೆ ನೀವು ನಂಬಲೇಬೇಕು. ಹೌದು ಆ ವ್ಯಕ್ತಿಯ ಹೆಸರು ದಕ್ಷಿಣಾಫ್ರಿಕಾದ ನಟ ಜಾನ್ ಲುಕಸ್.

ಜಾನ್ ಲೋಕಸ್ ನ ದೇಹದಾರ್ಢ್ಯಕ್ಕೆ ಹಿಂದೂ ದೇವರಾದ ಆಂಜನೇಯಸ್ವಾಮಿಯೇ ಮುಖ್ಯ ಸ್ಪೂರ್ತಿಯಂತೆ. ಈ ವಿಷಯವನ್ನು ಸ್ವತಃ ಜಾನ್ ಲುಕಸ್ ಆಂಜನೇಯ ಸ್ವಾಮಿಯ ಭಾವಚಿತ್ರ ಮುಂದೆ ನಿಂತಿರುವ ಫೋಟೋವನ್ನು ಹಾಕಿ ಬರೆದುಕೊಂಡಿದ್ದಾನೆ. ಈಗ ಇದು ಎಲ್ಲೆಡೆ ವೈರಲ್ ಆಗಿದ್ದು ಸಾಕಷ್ಟು ಚರ್ಚೆಗಳು ನಡೆದಿವೆ. ಅಷ್ಟಕ್ಕು ಮತ್ತೊಂದು ವಿಶೇಷವೆಂದರೆ ಜಾನ್ ಲುಕಾಸ್ ಕನ್ನಡದ ಬಹುನಿರೀಕ್ಷಿತ ಚಿತ್ರವಾದ ಧ್ರುವ ಸರ್ಜಾ ಅಭಿನಯದ ಪೊಗರು ಚಿತ್ರದಲ್ಲಿ ಅಭಿನಯಿಸುತ್ತಿದ್ದಾರೆ.

ಹೌದು ಪೊಗರು ಚಿತ್ರದಲ್ಲಿ ಕಟ್ಟುಮಸ್ತಾದ ಧ್ರುವ ಸರ್ಜಾ ಅವರೊಂದಿಗೆ ಕಾದಾಡಲು ವಿಶ್ವದ ಶ್ರೇಷ್ಠ ಬಾಡಿ ಬಿಲ್ಡರ್ ಗಳನ್ನು ಕರೆತರಲಾಗಿತದ್ದು ಎಲ್ಲರಿಗೂ ಗೊತ್ತೆ ಇದೆ. ಆ ವಿಶ್ವಶ್ರೇಷ್ಠ ಬಾಡಿ ಬಿಲ್ಡರ್ ಗಳಲ್ಲಿ ಜಾನ್ ಲುಕಾಸ್ ಕೂಡ ಒಬ್ಬ. ಈ ಹಿಂದೆಯೂ ಹಲವು ಬಾರಿ ಭಾರತಕ್ಕೆ ಭೇಟಿ ನೀಡಿದ ಜಾನ್ ಲುಕಾಸ್ ಮಲಯಾಳಂ ಚಿತ್ರರಂಗದ ಮೋಹನ್ ಲಾಲ್ ಅವರ ಪಕ್ಕ ಅಭಿಮಾನಿ ಎಂದು ಹೇಳಿಕೊಂಡಿದ್ದನು. ಇದೀಗ ಆಂಜನೇಯಸ್ವಾಮಿ ಯನ್ನು ನೆನೆದು ಮತ್ತೊಮ್ಮೆ ಭಾರತೀಯರಿಗೆ ಹತ್ತಿರವಾಗಿದ್ದಾನೆ.