10 ಕೆಜಿಎಫ್ = 1 ಪುಷ್ಪ ಎಂದು ಬೊಬ್ಬೆ ಹೊಡೆದಿದ್ದ ತೆಲುಗು ಜನ, ಆದರೆ ಚಿತ್ರದಲ್ಲಿ ಏನ್ ಮಣ್ಣು ಇಲ್ವಂತೆ, ಸ್ವತಃ ತೆಲುಗು ಅಭಿಮಾನಿಗಳೇ ಬೇಸರ

ತೆಲುಗಿನ ಸ್ಟೈಲೀಶ್ ಸ್ಟಾರ್ ನಟ ಅಲ್ಲು ಅರ್ಜುನ್ ನಟನೆಯ ಪುಷ್ಪ ಸಿನಿಮಾವೊಂದು ಕನ್ನಡದ ಕೆಜಿಎಫ್ ಅಂತಹ ಸಿನಿಮಾಗಳಿಗೆ ಸಮ ಎಂದಿದ್ದ ಖ್ಯಾತ ನಿರ್ದೇಶಕನ ಭವಿಷ್ಯ ನಿಜವಾಯ್ತಾ ಎಂದು ಕೇಳುತ್ತಿದ್ದಾರೆ ಪುಷ್ಪ ಸಿನಿಮಾ ನೋಡಿದ ಪ್ರೇಕ್ಷಕರು. ಹೌದು ಭಾರತೀಯ ಚಿತ್ರರಂಗದ ಬಹು ನಿರೀಕ್ಷಿತ ಸಿನಿಮಾ ಬಿಡುಗಡೆಗೂ ಮುನ್ನ ಸಾಕಷ್ಟು ಕ್ರೇಜ಼್ ಹುಟ್ಟು ಹಾಕಿತ್ತು. ಈ ಚಿತ್ರದ ಟೀಸರ್ ಪೋಸ್ಟರ್ ರಿಲೀಸ್ ಆದ ತಕ್ಷಣ ಟಾಲಿವುಡ್ ಮಂದಿ ಪುಷ್ಪ ಸಿನಿಮಾದ ಮೇಕಿಂಗ್ ಬಗ್ಗೆ ಹಾಡಿ ಹೊಗಳಿದ್ದರು. ಅದರಲ್ಲಿಯೂ ತೆಲುಗಿನ ಸೂಪರ್ ಹಿಟ್ ಉಪ್ಪೇನಾ ಸಿನಿಮಾದ ನಿರ್ದೇಶಕ ಬುಚಿ ಬಾಬು ಅವರು ಪುಷ್ಪ ಸಿನಿಮಾದ ಮೊದಲ ಭಾಗ ನೋಡಿ ಅಪಾರ ಮೆಚ್ಚುಗೆ ವ್ಯಕ್ತಪಡಿಸಿದ್ದರು. ಅಷ್ಟೇ ಅಲ್ಲದೆ ಒಂದ್ಹೆಜ್ಜೆ ಮುಂದೆ ಹೋಗಿ ನಿರ್ದೇಶಕ ಬುಚಿ ಬಾಬು ಅವರು ಪುಷ್ಪಾ ಚಿತ್ರ ಕೆಜಿಎಫ್ ಚಿತ್ರದಂತಹ ಹತ್ತು ಸಿನಿಮಾಗಳಿಗೆ ಸಮ ಎಂದು ತಿಳಿಸಿದರು.

ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಪುಷ್ಪ ಚಿತ್ರದ ಪೋಸ್ಟರ್ ಶೇರ್ ಮಾಡಿಕೊಂಡು ಅಲ್ಲಿಯೂ ಕೂಡ ನೈಜ ಕಥೆಯಾಧಾರಿತ ಪುಷ್ಪ ಸಿನಿಮಾ ಮುಂದೆ ಕನ್ನಡದ ಕೆಜಿಎಫ್ ಏನೂ ಅಲ್ಲ ಎಂಬಂತೆ ಬರೆದುಕೊಂಡಿದ್ದರು. ಪುಷ್ಪ ಚಿತ್ರ ಈಗಾಗಲೇ ರಿಲೀಸ್ ಆಗಿದೆ. ಅಲ್ಲು ಅರ್ಜುನ್ ಅವರ ಸ್ಟೈಲ್, ಅಭಿನಯ ಹೊರತು ಪಡಿಸಿದರೆ ಪುಷ್ಪ ಸಿನಿಮಾ ನಿರ್ದೇಶಕ ಬುಚ್ಚಿಬಾಬು ಹೇಳಿದಾಗೆ ಅಂತೂ ಇಲ್ಲ ಎಂಬುದನ್ನ ಸಿನಿಮಾ ನೋಡಿದ ವೀಕ್ಷಕರು ಅಭಿಪ್ರಾಯ ಪಟ್ಟಿದ್ದಾರೆ. ಅದಲ್ಲದೆ ಬುಚ್ಚಿಬಾಬು ಅವರನ್ನ ವ್ಯಂಗ್ಯವಾಗಿ ಪುಷ್ಪ ಸಿನಿಮಾದ ಬಗ್ಗೆ ಭವಿಷ್ಯ ನುಡಿದಿದ್ದ ನಿರ್ದೇಶಕ ಬುಚ್ಚಿಬಾಬು ಅವರ ಭವಿಷ್ಯ ನಿಜವಾಗೋಯ್ತು ಎಂದು ಅವರನ್ನ ವ್ಯಂಗ್ಯ ಮಾಡುತ್ತಿದ್ದಾರೆ. ಶೇಷಾಚಲಂ ಅರಣ್ಯದಲ್ಲಿ ನಡೆಯುತ್ತಿದ್ದ ಅಕ್ರಮ ರಕ್ತ ಚಂದನ ಕಳ್ಳ ಸಾಗಣೆ ಕುರಿತು ಕಥೆ ಮಾಡಿರುವ ಸುಕುಮಾರ್ ಅವರು ಈ ಪುಷ್ಪ ಸಿನಿಮಾದಲ್ಲಿ ಅದನ್ನ ನಿರೂಪಣೆ ಮಾಡುವ ದಾರಿಯಲ್ಲಿ ಎಡವಿದ್ದಾರೆ ಎನ್ನಬಹುದು.

ಮೊದಲನಿಂದಾನೂ ಪುಷ್ಪ ಚಿತ್ರದ ಪ್ಲಸ್ ಪಾಯಿಂಟ್ ಅಂದರೆ ಅದು ದೇವಿಶ್ರೀ ಪ್ರಸಾದ್ ಅವರ ಸಂಗೀತ ಎಂದು ಹೇಳಲಾಗುತ್ತಿತ್ತು. ಅದರಂತೆ ಶ್ರೀವಲ್ಲಿ ಸಾಂಗ್, ಸಮಂತಾ ಹಾಟ್ ಆಗಿ ಕಾಣಿಸಿಕೊಂಡಿರುವ ಐಟಂ ಸಾಂಗ್ ಆದಂತಹ ಹ್ಞೂ ಅಂಟೆ ವಾ ಮಾವ ಸಾಂಗ್ ಪಡ್ಡೆ ಹುಡುಗರಿಗೆ ನಿದ್ದೆ ಗೆಡಿಸಿತ್ತು. ಆದರೆ ಇದೀಗ ದೇವಿ ಶ್ರೀ ಪ್ರಸಾದ್ ಅವರ ಬ್ಯಾಕ್ ಗ್ರೌಂಡ್ ಮ್ಯೂಸಿಕ್ ಬಗ್ಗೆಯೂ ಕೂಡ ಅಲ್ಲು ಅರ್ಜುನ್ ಅವರ ಅಭಿಮಾನಿಗಳು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಒಟ್ಟಾರೆಯಾಗಿ ಬಿಡುಗಡೆಗೂ ಮುಂಚೆ ಭಾರತೀಯ ಚಿತ್ರರಂಗದಲ್ಲಿ ಭಾರಿ ಸೌಂಡ್ ಮಾಡಿದ್ದ ಪುಷ್ಪ ಸಿನಿಮಾ ಇದೀಗ ರಿಲೀಸ್ ಆದ ನಂತರ ತನ್ನ ವ್ಯಾಲ್ಯೂಮ್ ಅನ್ನು ಕಡಿಮೆ ಮಾಡಿಕೊಂಡಿದೆ ಎನ್ನಬಹುದು.

%d bloggers like this: