ಬಾಲಿವುಡ್ ಬಾದ್ ಷಾ ಸಲ್ಮಾನ್ ಖಾನ್ ಮೋಸ್ಟ ಎಲಿಜಿಬಲ್ ಬ್ಯಾಚುಲರ್ ಅಲ್ಲದೇ ಪಕ್ಕ ಫ್ಯಾಮಿಲಿ ಮ್ಯಾನ್. ಸಲ್ಮಾನ್ ಖಾನ್ ಅವರಿಗೆ ತಮ್ಮ ಫ್ಯಾಮಿಲಿ ಎಂದರೆ ಎಲ್ಲಿಲ್ಲದ ಪ್ರೀತಿ. ಅದರಲ್ಲೂ ಸಲ್ಮಾನ್ ಅವರಿಗೆ ತಂಗಿ ಅರ್ಪಿತಾ ಮೇಲೆ ಎಷ್ಟು ಪ್ರೀತಿ ಎಂಬುದು ಎಲ್ಲರಿಗೂ ತಿಳಿದಿದೆ. ಅರ್ಪಿತಾ ಖಾನ್ ಅವರು ಒಡಹುಟ್ಟಿದವರಲ್ಲಿ ಕಿರಿಯವರು. ಸಲ್ಮಾನ್ ಖಾನ್ ಅವರ ತಂದೆಗೆ ಮಕ್ಕಳಲ್ಲಿ ಸಲ್ಮಾನ್ ಖಾನ್ ಹಿರಿಯವರು. ನಂತರ ಅರ್ಬಾಜ್ ಖಾನ್, ಸುಹೇಲ್ ಖಾನ್, ಅಲ್ವಿರಾ ಖಾನ್ ಮತ್ತು ಕಿರಿಯವರು ಅರ್ಪಿತಾ. ಅರ್ಪಿತಾ ಅವರು ಲಂಡನ್ ಕಾಲೇಜ್ ಆಫ್ ಫ್ಯಾಷನ್ ನಿಂದ ಫ್ಯಾಷನ್ ಮಾರ್ಕೆಟಿಂಗ್ ಮತ್ತು ಮ್ಯಾನೇಜ್ಮೆಂಟ್ ನಲ್ಲಿ ಪದವಿ ಪಡೆದಿದ್ದಾರೆ.

ಅರ್ಪಿತಾ ಅವರು ಆಯುಷ್ ಅವರೊಂದಿಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. 2013ರಲ್ಲಿ ಪಾರ್ಟಿಯಲ್ಲಿ ಭೇಟಿಯಾದ ಇವರಿಬ್ಬರು ಕಾಮನ್ ಫ್ರೆಂಡ್ ಮೂಲಕ ಪರಿಚಯವಾದರು. ಹಲವಾರು ಬಾರಿ ಇವರಿಬ್ಬರೂ ಭೇಟಿಯಾದ ನಂತರ ಒಂದು ಪಾರ್ಟಿಯ ಸಮಯದಲ್ಲಿ ಆಯುಷ್ ಎಲ್ಲರ ಮುಂದೆ ಮೊಣಕಾಲೂರಿ ಅರ್ಪಿತಾ ಅವರಿಗೆ ಪ್ರೊಪೋಸ್ ಕೂಡ ಮಾಡಿದ್ದರು. ನಂತರ ಹೈದರಾಬಾದಿನ ಫಲಕ್ ನುಮಾ ಪ್ಯಾಲೆಸ್ ಹೋಟೆಲಿನಲ್ಲಿ ಇವರಿಬ್ಬರು ಮದುವೆಯಾಗಿದ್ದರು. ಅರ್ಪಿತಾ ಅವರ ಪತಿ ಆಯುಷ್ ಶರ್ಮ ಒಬ್ಬ ನಟರಾಗಿದ್ದು ಕೆಲವು ತಿಂಗಳ ಹಿಂದೆ ಬಂದ ಅಂತಿಮ್ ಚಿತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

ಅರ್ಪಿತ ಖಾನ್ ಮತ್ತು ಆಯುಷ್ ಅವರಿಗೆ ಆಹಿಲ್ ಮತ್ತು ಆಯತ್ ಎಂಬ ಇಬ್ಬರು ಮಕ್ಕಳಿದ್ದಾರೆ. ವಿಶೇಷವೆಂದರೆ ಸಲ್ಮಾನ್ ಖಾನ್ ಅವರ ಹುಟ್ಟುಹಬ್ಬದಂದು ಆಯತ್ ಜನಿಸಿದ್ದನು. ವಾಸ್ತವವಾಗಿ ಅರ್ಪಿತಾ ಅವರನ್ನು ಸಲ್ಮಾನ್ ಖಾನ್ ಅವರ ತಂದೆ ಸಲೀಮ್ ಅವರು 1981 ರಲ್ಲಿ ದತ್ತು ಪಡೆದಿದ್ದರು. ಸಲೀಮ್ ಅವರು ಅವರ ಹೆಂಡತಿಯೊಂದಿಗೆ ಪ್ರತಿದಿನ ಬೆಳಿಗ್ಗೆ ವಾಕಿಂಗ್ ಹೋಗುವ ಅಭ್ಯಾಸ ಹೊಂದಿದ್ದರು. ಒಂದು ದಿನ ವಾಕಿಂಗ್ ನಿಂದ ಹಿಂದಿರುಗುತ್ತಿದ್ದಾಗ ರಸ್ತೆಯ ಬದಿಯಲ್ಲಿ ಒಬ್ಬ ಮಹಿಳೆ ಸತ್ತು ಬಿದ್ದಿದ್ದರು. ಅವಳ ಪಕ್ಕದಲ್ಲಿ ಒಂದು ಹುಡುಗಿ ಅಳುತ್ತಿರುವುದನ್ನು ನೋಡಿದರು.

ಆ ಹುಡುಗಿಯನ್ನು ನೋಡಿದ ಸಲೀಮ್ ಅವರು ಅವಳನ್ನು ತಮ್ಮ ಮನೆಗೆ ಕರೆದುಕೊಂಡು ಬಂದರು. ನಂತರ ಅವರು ಮತ್ತು ಅವರ ಪತ್ನಿ ಹೆಲೆನ್ ಆ ಮಗುವನ್ನು ದತ್ತು ಪಡೆದರು. ಈ ಸಮಯದಲ್ಲಿ ಇಂದೋರಿನ ಹೋಳ್ಕರ್ ಕಾಲೇಜಿನಲ್ಲಿ ಸಹಪಾಠಿಯಾಗಿದ್ದ ಶರದ್ ಜೋಶಿ ಕೂಡ ಸಲೀಂ ಖಾನ್ ಅವರ ಜೊತೆಯಲ್ಲಿದ್ದರು. ಆಗ ಸಲೀಮ್ ಅವರು ಮಗಳಿಗೆ ಒಂದು ಹೆಸರನ್ನು ಸೂಚಿಸುವಂತೆ ಕೇಳಿದಾಗ, ಶರದ್ ಅವರು ಈ ಹುಡುಗಿಯನ್ನು ದೇವರು ನಿಮಗೆ ಅರ್ಪಿಸಿದ್ದಾರೆ ಆದ್ದರಿಂದ ಅವಳ ಹೆಸರನ್ನು ಅರ್ಪಿತಾ ಎಂದು ಇಡಬೇಕು ಎಂದಿದ್ದರಂತೆ. ಹೀಗೆ ಅರ್ಪಿತಾ ಸಲ್ಮಾನ್ ಅವರ ತಂಗಿಯಾಗಿ ಬೆಳೆದರು.

ತಮ್ಮ ಸ್ವಂತ ತಂಗಿ ಆಗಿರದಿದ್ದರೂ ಸಹ, ಸಲ್ಮಾನ್ ಅವರು ಅರ್ಪಿತಾ ಅವರಿಗೆ ಯಾವ ಕೊರತೆಯನ್ನು ಬಾರದ ಹಾಗೆ ನೋಡಿಕೊಂಡಿದ್ದಾರೆ. ಈಗ ಅರ್ಪಿತ ಅವರು ಮುಂಬೈನಲ್ಲಿ ಸುಮಾರು 10 ಕೋಟಿ ರೂಪಾಯಿ ಮೌಲ್ಯದ ಸ್ವಂತ ಮನೆಯನ್ನು ಖರೀದಿಸಿದ್ದಾರೆ. ಈ ಆಸ್ತಿ ಕಟ್ಟಡದ 12ನೇ ಮಹಡಿಯಲ್ಲಿದೆ. ಅಪಾರ್ಟ್ಮೆಂಟ್ 1750 ಚದರ ಅಡಿಯಲ್ಲಿ ಇದೆ. ಇದು 4ಕಾರ್ ಪಾರ್ಕಿಂಗ್ ಸ್ಥಳವನ್ನು ಹೊಂದಿದ್ದು, ಫೆಬ್ರುವರಿ 4ರಂದು ಆಸ್ತಿ ನೋಂದಣಿಯಾಗಿದೆ. ಅರ್ಪಿತಾ ಅವರು ರೆಜಿಸ್ಟ್ರೇಷನ್ ಫೀಸ್ 40 ಲಕ್ಷ ರೂಪಾಯಿಯನ್ನು ಈಗಾಗಲೇ ಪಾವತಿಸಿದ್ದಾರೆ.