100 ಕೋಟಿ ಬೆಲೆಯ ಐಷಾರಾಮಿ ಹೆಲಿಕಾಪ್ಟರ್ ಖರೀದಿಸಿದ ದಕ್ಷಿಣ ಭಾರತದ ಉದ್ಯಮಿ 

ತಮಿಳುನಾಡಿನ ಖ್ಯಾತ ಉದ್ಯಮಿಯೊಬ್ಬರು ಏರ್ ಬಸ್ ಖರೀದಿ ಮಾಡಿ ಭಾರತ ದೇಶದಲ್ಲಿ ಏರ್ ಬಸ್ ಖರೀದಿ ಮಾಡಿದ ಮೊದಲ ಉದ್ಯಮಿ ಎಂಬ ಹೆಸರಿಗೆ ಪಾತ್ರರಾಗಿದ್ದಾರೆ. ಹೌದು ಜಗತ್ತಿನ ವಿವಿಧ ಕ್ಷೇತ್ರಗಳಲ್ಲಿ ಭಾರತದ ಅನೇಕ ಉದ್ಯಮಿಗಳು ಸಾಧನೆಗೈದು ಭಾರತಕ್ಕೆ ಕೀರ್ತಿ ತಂದಿದ್ದಾರೆ. ಅದು ಅವರ ಉದ್ಯಮ ಅವರ ವೈಯಕ್ತಿಕ ಯಶಸ್ಸು ಆದರು ಕೂಡ ಒಟ್ಟಾರೆಯಾಗಿ ಜಗತ್ತಿನ ಉದ್ಯಮ ಕ್ಷೇತ್ರದಲ್ಲಿ ಭಾರತ ದೇಶದ ಪ್ರತಿನಿಧಿಯಾಗಿ ತಮ್ಮ ಚಾಕ ಚಕ್ಯತೆ ಕೌಶಲ್ಯದ ಮೂಲಕ ವ್ಯಾಪಾರ ವ್ಯವಹಾರಗಳಲ್ಲಿ ಯಶಸ್ಸು ಗಳಿಸಿದ್ದಾರೆ. ಇದು ಅವರ ಬೆಳವಣಿಗೆ ಜೊತೆಗೆ ದೇಶದ ಅಭಿವೃದ್ಧಿಗೆ ಕೂಡ ಉತ್ತಮವಾದ ಕೊಡುಗೆ ಎಂದು ಹೇಳಬಹುದು. ಅಂತೆಯೇ ಇದೀಗ ತಮಿಳುನಾಡಿನ ಆರ್ಪಿ ಗ್ರೂಪ್ ಆಫ್ ಕಂಪನೀಸ್ ನ ಪ್ರೆಸಿಡೆಂಟ್ ಆದ ರವಿ ಪಿಳ್ಳೈ ಎಂಬುವವರು ಬರೋಬ್ಬರಿ ನೂರು ಕೋಟಿ ಬೆಲೆಯ ಏರ್ ಬಸ್ ಎಚ್145 ಹೆಲಿಕಾಪ್ಟರ್ ಖರೀದಿ ಮಾಡಿದ್ದಾರೆ.

ಇದು ಭಾರತೀಯ ಉದ್ಯಮ ಕ್ಷೇತ್ರದಲ್ಲಿ ಯಾವ ಉದ್ಯಮಿ ಕೂಡ ನೂರು ಕೋಟಿ ಮೌಲ್ಯದ ಹೆಲಿಕಾಪ್ಟರ್ ಖರೀದಿ ಮಾಡಿರಲಿಲ್ಲ. ಆದರೆ ಆರ್ಪಿ ಗ್ರೂಪ್ ಮಾಲೀಕರಾದ ರವಿ ಪಿಳ್ಳೈ ಅವರು ಈ ದುಬಾರಿ ಬೆಲೆಯ ಎಚ್ 145 ಹೆಲಿಕಾಪ್ಟರ್ ಖರೀದಿ ಮಾಡಿ ವಾಣಿಜ್ಯ ಕ್ಷೇತ್ರದಲ್ಲಿ ಭಾರಿ ಸುದ್ದಿ ಆಗಿದ್ದಾರೆ. ಅರವತ್ತೆಂಟು ವರ್ಷದ ರವಿ ಪಿಳ್ಳೈ ಅವರು ಎರಡು ವರೆ ಸಾವಿರ ಕೋಟಿ ಆಸ್ತಿ ಮೌಲ್ಯ ಹೊಂದಿದ್ದಾರಂತೆ. ಇವರು ಭಾರತ ಸೇರಿದಂತೆ ಹೊರ ದೇಶಗಳಲ್ಲಿ ಅನೇಕ ಐಷಾರಾಮಿ ಪ್ರತಿಷ್ಟಿತ ಹೋಟೆಲ್ ಮತ್ತು ಕಂಪನಿಗಳನ್ನ ಹೊಂದಿದ್ದು, ಇವರ ಕಂಪನಿಗಳಲ್ಲಿ ಬರೋಬ್ಬರಿ ಎಪ್ಪತ್ತು ಸಾವಿರಕ್ಕೂ ಅಧಿಕ ಮಂದಿ ಉದ್ಯೋಗ ಮಾಡುತ್ತಿದ್ದಾರೆ. ಹೊರ ದೇಶಗಳಲ್ಲಿ ಇರುವ ತಮ್ಮ ಉದ್ಯಮದ ವ್ಯವಹಾರದ ತುರ್ತು ಸಭೆಗಳಿಗೆ ಹಾಜರಾಗಲು ಈ ಎಚ್ 145 ಏರ್ ಬಸ್ ಖರೀದಿ ಮಾಡಿದ್ದಾರೆ ಎಂದು ಅವರ ಆಪ್ತ ಮೂಲಗಳು ತಿಳಿಸಿವೆ. ಬರೋಬ್ಬರಿ ನೂರು ಕೋಟಿ ಮೌಲ್ಯ ಹೊಂದಿರುವ ಈ ದುಬಾರಿ ಐಷಾರಾಮಿ ಎಚ್ 145 ಹೆಲಿಕಾಪ್ಟರ್ ಏನೆಲ್ಲಾ ವಿಶೇಷತೆಗಳ ಒಳಗೊಂಡಿದೆ ಎಂದು ತಿಳಿಯುವುದಾದರೆ.

ಈ ಹೆಲಿಕಾಪ್ಟರ್ ನಲ್ಲಿ ಪೈಲಟ್ ಒಳಗೊಂಡಂತೆ ಒಟ್ಟು ಎಂಟು ಮಂದಿ ಪ್ರಯಾಣ ಮಾಡಬಹುದಾಗಿರುತ್ತದೆ. ಸಮುದ್ರ ಮಟ್ಟದಿಂದ ಸರಿ ಸುಮಾರು ಇಪ್ಪತ್ತು ಸಾವಿರ ಅಡಿಯಷ್ಟು ಅಂತರದಲ್ಲಿ ಲ್ಯಾಂಡಿಂಗ್ ಮತ್ತು ಟೇಕ್ ಆಫ್ ಆಗುತ್ತದೆಯಂತೆ ಈ ಎಚ್ 145 ಹೆಲಿಕಾಪ್ಟರ್. ಇದರಲ್ಲಿ ಅತ್ಯಾಧುನಿಕ ಸುರಕ್ಷತಾ ಮೆಟಿರಿಯಲ್ ಅಳವಡಿಸಲಾಗಿದೆಯಂತೆ. ಈ ಹೆಲಿಕಾಪ್ಟರ್ ಬರೋಬ್ಬರಿ ನಾಲ್ಕು ಸಾವಿರ ಕೆ.ಜಿ ಯಷ್ಟು ತೂಕವನ್ನು ಹೊಂದಿದೆಯಂತೆ. ಇನ್ನು ಈ ನೂರು ಕೋಟಿ ಮೌಲ್ಯದ ಎಚ್ 145 ಹೆಲಿಕಾಪ್ಟರ್ ಖರೀದಿ ಮಾಡಿರುವ ರವಿ ಪಿಳ್ಳೈ ಅವರ ಒಡೆತನದ ಆರ್ ಪಿ ಗ್ರೂಪ್ ಕೋಯಿಕ್ಕೋಡ್ ನ ದಿ ರಾಜ್ ಕಡು, ಕೊಲ್ಲಂ ನ ದಿ ರವಿಜ್ ಅಷ್ಟಮುಡಿ ಇದರ ಜೊತೆಗೆ ತಿರುವನಂತಪುರಂನ ದಿ ರಾಜ್ ಕೌಶಲದ ನಲ್ಲಿ ಹೆಲಿಪ್ಯಾಡ್ ಗಳನ್ನ ಹೊಂದಿದ್ದಾರೆ. ಇವರಿಗೆ ದೇಶದ ಪ್ರಮುಖ ರಾಜಕೀಯ ಗಣ್ಯರ ಜೊತೆಗೆ ಉತ್ತಮ ಒಡನಾಟ ಸಂಪರ್ಕ ಕೂಡ ಇದ್ದು, ಎಲ್ಲರೊಟ್ಟಿಗೆ ಉತ್ತಮ ಬಾಂಧವ್ಯ ಹೊಂದಿದ್ದಾರೆ.

%d bloggers like this: