ನಮ್ಮ ದೇಶದಲ್ಲಿ ಯಾವುದಾದರೂ ಒಂದು ಸುದ್ದಿ ಅದು ಸತ್ಯವಿರಲಿ ಅಥವಾ ಸುಳ್ಳಾಗಿರಲಿ ಒಮ್ಮೆ ಟ್ರೆಂಡ್ ಆದರೆ ಸಾಕು ದೇಶಾದ್ಯಂತ ಕೆಲವೇ ಸಮಯದಲ್ಲಿ ಅದರ ಬಗ್ಗೆ ಚರ್ಚೆಗಳು ಶುರುವಾಗಿಬಿಡುತ್ತವೆ. ಕೆಲವು ದಿನಗಳಿಂದ ಇಂತಹದೆ ಒಂದು ಸುದ್ದಿ ಸಾಕಷ್ಟು ಬಾರಿ ಕೇಳಿ ಬರುತ್ತಿದೆ. ಹೌದು ಅದೇನೆಂದರೆ ನಮ್ಮ ದೇಶದಲ್ಲಿ ಮತ್ತೊಂದು ಸಲ ನೋಟ್ ಬ್ಯಾನ್ ಆಗುತ್ತದೆ ಸದ್ಯ ಚಾಲ್ತಿಯಲ್ಲಿರುವ ಅನೇಕ ನೋಟುಗಳು ಬಂದ್ ಆಗುತ್ತದೆ ಮತ್ತು ಈ ಕುರಿತು ಪ್ರಧಾನಿ ಮೋದಿಯವರು ಘೋಷಣೆ ಹೊರಡಿಸುತ್ತಾರೆ ಎಂಬೆಲ್ಲ ಸುದ್ದಿಗಳು ಕೇಳಿ ಬರುತ್ತಿದ್ದವು.

ಆದರೆ ಇದಕ್ಕೆ ಇದೀಗ ಖಚಿತವಾದ ಸ್ಪಷ್ಟನೆ ಒಂದು ಸಿಕ್ಕಿದೆ. ದೇಶದ ಅಗ್ರ ಬ್ಯಾಂಕ್ ಆದ ಭಾರತೀಯ ರಿಸರ್ವ್ ಬ್ಯಾಂಕ್ ಈ ಕುರಿತು ಸ್ಪಷ್ಟನೆ ನೀಡಿದ್ದು ದೇಶದಲ್ಲಿ ಯಾವುದೇ ಕಾರಣಕ್ಕೂ ನೋಟ್ ಬ್ಯಾನ್ ಆಗುವುದಿಲ್ಲ, ಏಪ್ರಿಲ್ ತಿಂಗಳ ಬಳಿಕವೂ ಹಳೆಯ ನೋಟುಗಳು ಯಥಾರೀತಿ ಚಾಲ್ತಿಯಲ್ಲಿರುತ್ತವೆ ಹಾಗಾಗಿ ಈ ಕುರಿತು ದೇಶದ ಜನತೆ ಯಾವುದೇ ಊಹಾಪೋಹಗಳಿಗೆ ಕಿವಿಗೊಡಬೇಡಿ ಎಂದು ಹೇಳಿದೆ.

2016 ರಲ್ಲಿ ಮೋದಿ ಸರ್ಕಾರ ಮಾಡಿದ ನೋಟ್ ಬ್ಯಾನ್ ಇಂದ ಇನ್ನೂ ದೇಶದ ಜನತೆ ಚೇತರಿಸಿಕೊಂಡಿಲ್ಲ. ಅದರಲ್ಲೂ ದೇಶವನ್ನು ಆರ್ಥಿಕವಾಗಿ ಮತ್ತು ಎಲ್ಲಾ ರೀತಿಯಲ್ಲಿ ಮುದ್ದಿ ಮಾಡಿದ ಕೋರೋಣ ಎಂಬ ಹೆಮ್ಮಾರಿ ಕಾಡುತ್ತಿರುವ ಸಮಯದ ನಡುವೆ ಮತ್ತೊಂದು ನೋಟ್ ಬ್ಯಾನ್ ಆದರೆ ಹೇಗೆ ಜೀವನ ಎಂದು ಭಯಭೀತರಾಗಿದ್ದ ಜನತೆಗೆ ಇದೀಗ ನಿರಾಳತೆ ಸಿಕ್ಕಿದೆ, ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ನೀಡಿದ ಈ ಸ್ಪಷ್ಟನೆಯಿಂದ ಜನತೆ ನೆಮ್ಮದಿಯ ನಿಟ್ಟುಸಿರು ಬಿಟ್ಟಂತಾಗಿದೆ.