119 ಕೋಟಿ ಬೆಲೆಯ ಹೊಸ ಮನೆ ಖರೀದಿಸಿದ ನಟಿ ದೀಪಿಕಾ ಪಡುಕೋಣೆ ಹಾಗೂ ರಣವೀರ್ ಸಿಂಗ್

ಸಾಮಾನ್ಯವಾಗಿ ಸಿನಿಮಾ ಸೆಲೆಬ್ರಿಟಿಗಳಿಗೆ ಹಣಕ್ಕೇನೋ ಕೊರತೆ ಇರಲ್ಲ ಬಿಡಿ. ಇದು ಎಲ್ಲಾ ಕಲಾವಿದರಿಗೆ ಅನ್ವಯಿಸುತ್ತದೆ ಅಂತ ಅಲ್ಲ‌ . ಬಾಲಿವುಡ್ ಸ್ಟಾರ್ಸ್ ಅಂದ್ರೆ ಅವರ ಲೈಫ್ ಸ್ಟೈಲೇ ಬೇರೆಯದ್ದೇ ಆಗಿರುತ್ತದೆ. ಅಷ್ಟು ವೈಭವದ ಬದುಕನ್ನ ಅವರು ಅನುಭವಿಸುತ್ತಾರೆ. ಬಾಲಿವುಡ್ ನಲ್ಲಿ ಕ್ಯೂಟ್ ಜೋಡಿಗಳಲ್ಲಿ ಪ್ರಮುಖವಾಗಿ ಕೇಳಿ ಬರುವ ಜೋಡಿ ಅಂದ್ರೆ ಅದು ರಣ್ ವೀರ್ ಸಿಂಗ್ ಮತ್ತು ದೀಪಿಕಾ ಪಡುಕೋಣೆ ಜೋಡಿ. ಈ ತಾರಾಜೋಡಿ ಒಟ್ಟಾಗೇ ಅನೇಕ ಸಿನಿಮಾಗಳಲ್ಲಿ ನಟಿಸಿದ್ದಾರೆ. ಇತ್ತೀಚೆಗೆ ಈ ಜೋಡಿಯ ಸದ್ದು ಅಷ್ಟಿಷ್ಟಲ್ಲ. ಹಾಗಂತ ಸ್ಟಾರ್ ನಟಿ ದೀಪಿಕಾ ಪಡುಕೋಣೆ ಅಥವಾ ಸ್ಟಾರ್ ನಟ ರಣ್ ವೀರ್ ಸಿಂಗ್ ಅವರ ಸಿನಿಮಾಗಳು ಯಾವ್ದು ಕೂಡ ಬಿಡುಗಡೆ ಆಗ್ತಿಲ್ಲ. ಇದೀಗ ಈ ಬಾಲಿವುಡ್ ಸ್ಟಾರ್ ಕಪಲ್ ಸುದ್ದಿಯಾಗಿರೋದು ಪ್ರಾಪರ್ಟಿ ಖರೀದಿ ಮಾಡುವ ಮೂಲಕ.

ಮೂಲತಃ ಕರ್ನಾಟಕದವರಾದ ದೀಪಿಕಾ ಪಡುಕೋಣೆ ಅವರು ಕೆಲವು ತಿಂಗಳ ಹಿಂದೆಯಷ್ಟೇ ಗಾರ್ಡನ್ ಸಿಟಿ ಬೆಂಗಳೂರಿನಲ್ಲಿ ಬರೋಬ್ಬರಿ ಏಳು ಕೋಟಿ ವೆಚ್ಚದ ಐಷಾರಾಮಿ ಫ್ಲ್ಯಾಟ್ ವೊಂದನ್ನ ಖರೀದಿ ಮಾಡಿದ್ರು. ಇದು ಆ ಸಂಧರ್ಭದಲ್ಲಿ ಭಾರಿ ಸುದ್ದಿಯಾಗಿತ್ತು. ಇದೀಗ ಮತ್ತೇ ಬಾಲಿವುಡ್ ಈ ತಾರಾಜೋಡಿ ಪ್ರಾಪರ್ಟಿ ಕೊಳ್ಳುವ ಮೂಲಕ ಸುದ್ದಿಯಾಗಿದ್ದಾರೆ. ಇತ್ತೀಚೆಗೆ ಬಾಲಿವುಡ್ ನ ಒಂದಷ್ಟು ಸ್ಟಾರ್ ನಟರು ಮುಂಬೈನಲ್ಲಿ ಮನೆ ಖರೀದಿ ಮಾಡಿದ್ದರು. ಅದರಂತೆ ಇದೀಗ ದೀಪಿಕಾ ಪಡುಕೋಣೆ ಕೂಡ ಮುಂಬೈನಲ್ಲಿ ನೂರಾರು ಕೋಟಿ ಮೌಲ್ಯದ ಪ್ರಾಪರ್ಟಿ ಖರೀದಿ ಮಾಡಿದ್ದಾರೆ. ಹೌದು ಮುಂಬೈನಲ್ಲಿ ನೆಲೆಸಿರುವ ದೀಪಿಕಾ ಪಡುಕೋಣೆ ಮುಂಬೈನ ಬಾಂದ್ರಾದಲ್ಲಿ ಬರೋಬ್ಬರಿ 119 ಕೋಟಿ ಮೌಲ್ಯದ ಐಷಾರಾಮಿ ಮನೆಯನ್ನ ಖರೀದಿ ಮಾಡಿದ್ದಾರೆ.

ಈ ಮನೆ ಇರೋದು ಬಾಲಿವುಡ್ ಬಾದ್ ಶಾ ಶಾರುಖ್ ಖಾನ್ ಮತ್ತು ಬಾಲಿವುಡ್ ಬಾಕ್ಸ್ ಆಫೀಸ್ ಸುಲ್ತಾನ್ ಸಲ್ಮಾನ್ ಖಾನ್ ಮನೆಯ ನಡುವೆ. ಇದು ದೀಪಿಕಾ ಪಡುಕೋಣೆ ಮತ್ತು ರಣ್ ವೀರ್ ಸಿಂಗ್ ಇವರಿಬ್ಬರಿಗೆ ಸಖತ್ ಖುಷಿ ತಂದಿದೆಯಂತೆ. ನಟಿ ದೀಪಿಕಾ ಪಡುಕೋಣೆ ಅವರು ಸಿನಿಮಾಗಳಲ್ಲಿ ಎಷ್ಟು ಸ್ಮಾರ್ಟ್ ಆಗಿ ಕಾಣುತ್ತಾರೋ, ಅದೇ ರೀತಿಯಾಗಿ ತಮ್ಮ ವೈಯಕ್ತಿಕ ಬದುಕಿನ ಆರ್ಥಿಕ ವಿಚಾರವಾಗಿಯೂ ಕೂಡ ಅಷ್ಟೇ ಸ್ಮಾರ್ಟ್ ಅಂತ ಹೇಳ್ಬೋದು. ಹಾಗಾಗಿಯೇ ನಟಿ ದೀಪಿಕಾ ಪಡುಕೋಣೆ ಅವರು ತಾವು ದುಡಿದ ಹಣವನ್ನ ಆದಷ್ಟು ಪ್ರಾಪರ್ಟಿಗಳ ಮೇಲೆ ಹೂಡಿಕೆ ಮಾಡುತ್ತಿದ್ದಾರೆ. ಸದ್ಯಕ್ಕೆ ರಣ್ ವೀರ್ ಸಿಂಗ್ ಮತ್ತು ದೀಪಿಕಾ ಪಡುಕೋಣೆ ಯು.ಎಸ್ ದೇಶಕ್ಕೆ ಪ್ರವಾಸ ಹೋಗಿದ್ದಾರೆ.

%d bloggers like this: