12 ವರ್ಷಗಳ ನಂತರ ಸ್ಯಾಂಡಲ್ ವುಡ್ ಚಿತ್ರರಂಗಕ್ಕೆ ಮರಳಿದ ದಕ್ಷಿಣ ಭಾರತದ ಸುಪ್ರಸಿದ್ದ ನಟಿ

90ರ ದಶಕದಲ್ಲಿ ತಮ್ಮ ವಿನೂತನ ಪ್ರಯೋಗದಿಂದ ಕನ್ನಡದ ಸಿನಿ ಲೋಕದಲ್ಲಿ ಪ್ರೇಮಲೋಕವನ್ನೇ ಸೃಷ್ಟಿ ಮಾಡಿದವರು ಕ್ರೇಜಿ ಸ್ಟಾರ್ ರವಿಚಂದ್ರನ್. ಆಗಿನ ಕಾಲದಲ್ಲಿ ಪ್ರೇಮಲೋಕ ಕಂಡಂತಹ ಯಶಸ್ಸು ಇದುವರೆಗೆ ಯಾವ ಕನ್ನಡದ ಸಿನಿಮಾ ಕಾಣಲು ಸಾಧ್ಯವಿಲ್ಲ ಎನ್ನಬಹುದು. ಹಂಸಲೇಖ ಅವರ ಸಂಗೀತ, ರವಿಚಂದ್ರನ್ ಅವರ ನಟನೆ ಹೊಸ ಲೋಕವನ್ನೇ ಸೃಷ್ಟಿಸಿತ್ತು. ಇಂದಿಗೂ ಪ್ರೇಮಲೋಕ ಎಲ್ಲರ ಫೆವರೇಟ್. ರವಿಚಂದ್ರನ್ ಅವರು ಬೇರೆ ಬೇರೆ ಭಾಷೆಗಳಿಂದ ನಟಿಯರನ್ನು ಕನ್ನಡಕ್ಕೆ ಕರೆತರುತ್ತಿದ್ದರು. ನಮ್ಮ ಸ್ಯಾಂಡಲ್ವುಡ್ ನಲ್ಲಿ ಬೆಸ್ಟ್ ಪೇರ್ ಗಳ ಸಾಲಿನಲ್ಲಿ ನಿಲ್ಲುವುದು ರವಿಚಂದ್ರನ್ ಹಾಗೂ ಖುಷ್ಬು ಜೋಡಿ. ಖುಷ್ಬೂ ಎಂದಾಕ್ಷಣ ನೆನಪಿಗೆ ಬರುವುದು ರಣಧೀರ ಚಿತ್ರ. ರಣಧೀರ ಚಿತ್ರದ ರವಿಚಂದ್ರನ್ ಮತ್ತು ಖುಷ್ಬೂ ಜೋಡಿಯನ್ನು ಮರೆಯುವುದುಂಟೆ.

ರಣಧೀರ ಚಿತ್ರದ ನಂತರ ಜೊತೆಯಾಗಿ ಮತ್ತೆ ಎರಡು ಚಿತ್ರಗಳಲ್ಲಿ ಈ ಜೋಡಿ ಕಾಣಿಸಿಕೊಂಡಿತ್ತು. ಇವರಿಬ್ಬರು ಜತೆಯಾಗಿ ನಟಿಸಿದ ಸಿನಿಮಾಗಳು ಸೂಪರ್ ಹಿಟ್ ಆಗಿದ್ದರಿಂದ ಈ ಜೋಡಿಯನ್ನು ಸ್ಯಾಂಡಲ್ವುಡ್ ನ ಬೆಸ್ಟ್ ಜೋಡಿ ಎಂದೇ ಕರೆಯಲಾಗುತ್ತಿತ್ತು. ಇದಾದ ಬಳಿಕ ಖುಷ್ಬು ಅವರು ಬೇರೆ ಬೇರೆ ಚಿತ್ರಗಳಲ್ಲಿ ನಟಿಸಿದರೂ ಕ್ರೇಜಿಸ್ಟಾರ್ ಅವರೊಂದಿಗೆ ನಟಿಸಲು ಅವಕಾಶ ಸಿಕ್ಕಿರಲಿಲ್ಲ. ಯುಗಪುರುಷ ಸಿನಿಮಾ ಇವರಿಬ್ಬರು ಒಟ್ಟಾಗಿ ಅಭಿನಯಿಸಿದ ಕೊನೆಯ ಸಿನಿಮಾ ಆಗಿತ್ತು. ಆದರೆ ಇದೀಗ ಮತ್ತೆ ಈ ಜೋಡಿ ಒಂದಾಗುವ ಅವಕಾಶ ಬಂದಿದೆ. ಹೌದು ಯುಗಪುರುಷ ಸಿನಿಮಾದ ನಂತರ ಮತ್ತೆ ಈ ಜೋಡಿ ತೆರೆಯ ಮೇಲೆ ಮೋಡಿ ಮಾಡಲು ಸಜ್ಜಾಗುತ್ತಿದೆ. ಮದುವೆಯಾದ ಬಳಿಕ ಚಿತ್ರರಂಗದಿಂದ ಸ್ವಲ್ಪ ದೂರವೇ ಉಳಿದಿದ್ದ ಖುಷ್ಬು ಅವರು 2005ರಲ್ಲಿ ಮ್ಯಾಜಿಕ್ ಅಜ್ಜಿ ಸಿನಿಮಾದಲ್ಲಿ ನಟಿಸಿದ್ದೆ ಕೊನೆ.

ಮ್ಯಾಜಿಕ್ ಅಜ್ಜಿ ಸಿನಿಮಾದಲ್ಲಿ ಖುಷ್ಬೂ ಪೂರ್ಣಪ್ರಮಾಣದಲ್ಲಿ ಕಾಣಿಸಿಕೊಂಡರು. ಇದಾದ ಬಳಿಕ 2010ರಲ್ಲಿ ಜನನಿ ಸಿನಿಮಾದಲ್ಲಿ ಒಂದು ಗೆಸ್ಟ್ ರೋಲನ್ನು ಮಾಡಿದ್ದರು. ಬರೋಬ್ಬರಿ 12 ವರ್ಷಗಳ ನಂತರ ಖುಷ್ಬು ಸ್ಯಾಂಡಲ್ ವುಡ್ ಗೆ ಮತ್ತೆ ವಾಪಸ್ಸಾಗಿದ್ದಾರೆ. ಇತ್ತೀಚೆಗೆ ಸುದ್ದಿಯಲ್ಲಿರುವ ಗಾಲಿ ಜನಾರ್ದನ ರೆಡ್ಡಿ ಅವರ ಪುತ್ರ ಕಿರೀಟಿ ರೆಡ್ಡಿ ಅವರ ಮೊದಲ ಸಿನಿಮಾದ ಮಹೂರ್ತ ಮಾರ್ಚ್ 4ರಂದು ಗುರುಹಿರಿಯರ ಸಮ್ಮುಖದಲ್ಲಿ ನೆರವೇರಿದೆ. ಈ ಚಿತ್ರದಲ್ಲಿ ಅವರಿಗೆ ನಾಯಕಿಯಾಗಿ ಶ್ರೀಲೀಲಾ ಅವರು ಆಯ್ಕೆಯಾಗಿದ್ದು, ಕಿರೀಟಿ ರೆಡ್ಡಿಯವರ ಸಹೋದರಿಯ ಪಾತ್ರದಲ್ಲಿ ನಟಿ ಜೆನಿಲಿಯಾ ರಿತೇಶ್ ದೇಶ್ ಮುಖ್ ನಟಿಸುತ್ತಿರುವುದು ನಮಗೆಲ್ಲಾ ತಿಳಿದಿದೆ.

ಹಾಗೆಯೇ ಈ ಸಿನಿಮಾದಲ್ಲಿ ಕಿರೀಟಿ ರೆಡ್ಡಿ ಅವರ ತಂದೆಯಾಗಿ ರವಿಚಂದ್ರನ್ ನಟಿಸುತ್ತಿದ್ದಾರೆ. ತಾಯಿಯಾಗಿ ಖುಷ್ಬೂ ನಟಿಸುತ್ತಿದ್ದಾರೆ. ಈ ಮೂಲಕ ಮತ್ತೆ ರವಿಚಂದ್ರನ್ ಹಾಗೂ ಖುಷ್ಬು ಜೋಡಿಯನ್ನು ತೆರೆಯಮೇಲೆ ಕಾಣಲು ಸಾಧ್ಯವಾಗಿದೆ. ಹಲವಾರು ಚಿತ್ರಗಳಲ್ಲಿ ಒಟ್ಟಿಗೆ ನಟಿಸದಿದ್ದರೂ ರವಿಚಂದ್ರನ್ ಹಾಗೂ ಖುಷ್ಬು ಅವರು ಒಳ್ಳೆಯ ಸ್ನೇಹಿತರು. ಕುಶುಬು ಅವರು ಯಾವಾಗ ಬೆಂಗಳೂರಿಗೆ ಬಂದರು ರವಿಚಂದ್ರನ್ ಅವರನ್ನು ಭೇಟಿಯಾಗದೆ ಹೊರಡುವುದಿಲ್ಲ. ರವಿಚಂದ್ರನ್ ಅವರ ಮನೆಯಲ್ಲಿ ಏನೇ ಕಾರ್ಯಕ್ರಮವಾದರೂ ಕುಶುಬು ಅವರು ಬಂದೇ ಬರುತ್ತಾರೆ. ಒಳ್ಳೆಯ ಸ್ನೇಹಿತರಾಗಿರುವ ಈ ಜೋಡಿಯನ್ನು ದಶಕಗಳ ನಂತರ ಮತ್ತೆ ತೆರೆಯ ಮೇಲೆ ನೋಡಲು ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ.

%d bloggers like this: