13.8 ಕೋಟಿ ರೂಪಾಯಿಗೆ ಪುನೀತ್ ಅವರ ಜೇಮ್ಸ್ ಚಿತ್ರವನ್ನು ಖರೀದಿಸಿದ ಕನ್ನಡ ಚಾನೆಲ್

ಸ್ಯಾಂಡಲ್ ವುಡ್ ಬಹು ನಿರೀಕ್ಷಿತ ಪುನೀತ್ ರಾಜ್ ಕುಮಾರ್ ಅಭಿನಯದ ಜೇಮ್ಸ್ ಚಿತ್ರ ಸ್ಯಾಟಲೈಟ್ ರೈಟ್ಸ್ ನಲ್ಲಿ ದಾಖಲೆ ಮಟ್ಟದಲ್ಲಿ ಮಾರಾಟ ವಾಗಿದೆ. ಹೌದು ಬಹದ್ದೂರ್, ಭರ್ಜರಿ, ಭರಾಟೆ ಅಂತಹ ಸೂಪರ್ ಹಿಟ್ ಚಿತ್ರ ನಿರ್ದೇಶನ ಮಾಡಿರುವ ನಿರ್ದೇಶಕ ಚೇತನ್ ಕುಮಾರ್ ಸಾರಥ್ಯದಲ್ಲಿ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ನಾಯಕತ್ವದಲ್ಲಿ ಮೂಡಿ ಬಂದಿರುವ ಜೇಮ್ಸ್ ಸಿನಿಮಾ ನಿನ್ನೆ ಅಂದರೆ ಮಾರ್ಚ್ 17ರಂದು ರಾಜ್ಯದಾದ್ಯಂತ ಅದ್ದೂರಿಯಾಗಿ ರಿಲೀಸ್ ಆಗಿ ಅಮೋಘ ಪ್ರದರ್ಶನ ಕಾಣುತ್ತಿದೆ. ಜೇಮ್ಸ್ ಸಿನಿಮಾಗೆ ಕಳೆದ ಮೂರು ದಶಕಗಳಲ್ಲಿ ಯಾವ ಚಿತ್ರಕ್ಕೂ ಸಿಗದಂತಹ ಅಧ್ಭುತ ಸ್ವಾಗತ ಕಂಡು ಬಂದು ನಾಡಿನಾದ್ಯಂತ ಜೇಮ್ಸ್ ಜಾತ್ರೆ ಅದ್ದೂರಿಯಾಗಿ ನಡೆದಿದೆ. ಪುನೀತ್ ರಾಜಕುಮಾರ್ ಅವರು ಅಭಿನಯಿಸಿದ ಕೊನೆಯ ಚಿತ್ರವಾದ ಕಾರಣ ಜೇಮ್ಸ್ ಸಿನಿಮಾ ಕೇವಲ ಸಿನಿಮಾವಾಗಿ ಕಾಣದೆ ಕನ್ನಡಿಗರಿಗೆ ಇದೊಂದು ಹಬ್ಬದ ದಿನದಂತೆ ಅಭಿಮಾನಿಗಳು ಸಂಭ್ರಮಿಸಿದ್ದಾರೆ.

ರಿಲೀಸ್ ಆದ ಥಿಯೇಟರ್ ಗಳಲ್ಲಿ ಮತ್ತು ರಸ್ತೆ ಉದ್ದಗಲಕ್ಕೂಅಪ್ಪು ಅವರ ಫೋಟೋ ಕಟೌಟ್ ಹಾಕಿ ಅಪ್ಪು ಅಭಿಮಾನಿಗಳು ತಮ್ಮ ನೆಚ್ಚಿನ ನಟನಿಗೆ ಸ್ಮರಿಸಿ ಹಾರ ಜೈಕಾರ ಕೂಗಿದ್ದಾರೆ. ವಿಶೇಷ ಅಂದರೆ ಮಾರ್ಚ್17 ಪುನೀತ್ ರಾಜ್ ಕುಮಾರ್ ಅವರ ಜನ್ಮದಿನ ಕೂಡ ಆದ ಕಾರಣ ಜೇಮ್ಸ್ ಚಿತ್ರ ರಿಲೀಸ್ ಆಗಿರುವ ಎಲ್ಲಾ ಚಿತ್ರ ಮಂದಿರಗಳಲ್ಲಿ ಅಭಿಮಾನಿಗಳು ಅನ್ನ ಸಂತರ್ಪಣೆ ಕಾರ್ಯಕ್ರಮ ಕೂಡ ಹಮ್ಮಿಕೊಂಡಿದ್ದರು. ಇದೆಲ್ಲ ಹೊರತು ಪಡಿಸಿ ಜೇಮ್ಸ್ ಸಿನಿಮಾ ನೋಡಿದ ಪ್ರೇಕ್ಷಕರು ಚಿತ್ರಕ್ಕೆ ಫುಲ್ ಮಾರ್ಕ್ಸ್ ಕೊಟ್ಟಿದ್ದಾರೆ. ಪಂಚ ಭಾಷೆಗಳಲ್ಲಿ ತೆರೆ ಕಂಡಿರುವ ಜೇಮ್ಸ್ ಸಿನಿಮಾ ಮೂಲಗಳ ಪ್ರಕಾರ ಒಂದೇ ದಿನದಲ್ಲಿ ಬರೋಬ್ಬರಿ ಹತ್ತು ಕೋಟಿಗೂ ಅಧಿಕ ಕಲೆಕ್ಷನ್ ಮಾಡಿದೆ ಎಂದು ಹೇಳಲಾಗುತ್ತಿದೆ. ಇದರ ನಡುವೆ ಟಿವಿ ಸ್ಯಾಟಲೈಟ್ ರೈಟ್ಸ್ ಅನ್ನ ಕನ್ನಡ ಕಿರುತೆರೆಯ ಪ್ರಸಿದ್ದ ವಾಹಿನಿ ಆಗಿರುವ ಸ್ಟಾರ್ ಸುವರ್ಣ ವಾಹಿನಿ ಬರೋಬ್ಬರಿ 13.80 ಕೋಟಿಗೆ ಖರೀದಿ ಮಾಡಿದ್ದಾರಂತೆ.

ಜೇಮ್ಸ್ ಸಿನಿಮಾ ಪುನೀತ್ ರಾಜ್ ಕುಮಾರ್ ಅವರ ಕೊನೆಯ ಚಿತ್ರವಾದ ಕಾರಣ ಕನ್ನಡ ಸಿನಿ ಪ್ರೇಕ್ಷಕರು ಅಪ್ಪು ಅವರನ್ನ ಬೆಳ್ಳಿ ತೆರೆಯ ಮೇಲೆ ಇದೇ ಕೊನೆಯ ಬಾರಿಗೆ ಕಣ್ತುಂಬಿಕೊಳ್ಳುತ್ತಿರುವುಜರಿಂದ ಅಭಿಮಾನಿಗಳು ಪುನೀತ್ ಅವರು ಕಾಣಿಸಿಕೊಳ್ಳುವ ಪ್ರತಿಯೊಂದು ದೃಶ್ಯ ಸನ್ನಿವೇಶ ನೋಡಿ ಭಾವುಕರಾಗಿ ಕಣ್ಣೀರಾಕಿದ್ದಾರೆ. ಒಟ್ಟಾರೆಯಾಗಿ ಚೇತನ್ ಕುಮಾರ್ ನಿರ್ದೇಶನದ ಜೇಮ್ಸ್ ಸಿನಿಮಾ ದಾಖಲೆಯ ಮಟ್ಟದ ಕಲೆಕ್ಷನ್ ಮಾಡಿ ಈ ವಾರ ಪೂರ್ತಿ ಅಂದರೆ ವಾರಾಂತ್ಯದ ವರೆಗೂ ಥಿಯೇಟರ್ ನಲ್ಲಿ ಟಿಕೆಟ್ ಸಿಗದಷ್ಟರ ಮಟ್ಟಿಗೆ ಅಡ್ವಾನ್ಸ್ ಬುಕ್ಕಿಂಗ್ ಪಡೆದುಕೊಂಡಿದೆಯಂತೆ. ಪುನೀತ್ ರಾಜ್ ಕುಮಾರ್ ಅವರ ಈ ಜೇಮ್ಸ್ ಸಿನಿಮಾ ಕೇವಲ ಸಿನಿಮಾ ಆಗಿರದೆ ಜಾತ್ರೆಯಾಗಿ ನಾಡಿನಾದ್ಯಂತ ಎಲ್ಲಾ ಥಿಯೇಟರ್ ನಲ್ಲಿ ಸಂಭ್ರಮ ಮನೆ ಮಾಡಿದೆ. ವಾರಾಂತ್ಯದ ಹೊತ್ತಿಗೆ ಜೇಮ್ಸ್ ಸಿನಿಮಾದ ಕಲೆಕ್ಷನ್ ಇಪ್ಪತ್ತು ಕೋಟಿ ಗಡಿ ಮುಟ್ಟಬಹುದು ಎಂದು ಮೂಲಗಳು ತಿಳಿಸಿವೆ.

%d bloggers like this: