ನಿರ್ಮಾಪಕರ ಪಾಲಿನ ಲಕ್ಕಿ ಮ್ಯಾನ್ ಬಾಲಿವುಡ್ನ ನಟ ಅಕ್ಷಯ್ ಕುಮಾರ್. ಇವರ ಸಿನಿಮಾಗಳು ಫೇಲ್ ಆಗಿದ್ದು ಕಡಿಮೆ. ಅಕ್ಷಯ್ ಕುಮಾರ್ ಅವರ ಚಿತ್ರಗಳು ಯಾವತ್ತೂ ಗಳಿಕೆಯಲ್ಲಿ ಸೋತಿಲ್ಲ. ಅಕ್ಷಯ್ ಕುಮಾರ್ ಅವರ ಚಿತ್ರಗಳು ಬಾಕ್ಸ್ ಆಫೀಸ್ ನಲ್ಲಿ ಮೋಡಿ ಮಾಡುತ್ತವೆ. ಅವರ ಸಿನಿಮಾಗಳು ಚಿತ್ರಮಂದಿರದಲ್ಲೇ ಆಗಲಿ ಅಥವಾ ಒಟಿಟಿಗೆ ಕಾಲಿಡಲಿ ಪ್ರೇಕ್ಷಕರು ಮುಗಿ ಬಿದ್ದು ಸಿನಿಮಾ ವೀಕ್ಷಣೆ ಮಾಡುತ್ತಾರೆ. ಅಕ್ಷಯ್ ಕುಮಾರ್ ಅವರ ಬಚ್ಚನ್ ಪಾಂಡೆ ಸಿನಿಮಾ ರಿಲೀಸಿಗೆ ರೆಡಿ ಇದೆ. ಇತ್ತೀಚೆಗೆ ಅಕ್ಷಯ್ ಕುಮಾರ್ ಅವರು ರಾಮ್ ಸೇತು ಸಿನಿಮಾದ ಶೂಟಿಂಗ್ ಮುಗಿಸಿದ್ದಾರೆ. ಗೊರ್ಖ, ಪ್ರೀತ್ವಿರಾಜ್, ರಕ್ಷಾಬಂಧನ್, ಓ ಮೈ ಗಾಡ್2 ಮುಂತಾದ ಸಿನಿಮಾಗಳಲ್ಲಿ ಅವರು ನಟಿಸುತ್ತಿದ್ದಾರೆ. ಈ ಹಿಂದೆ ಅಕ್ಷಯ್ ಕುಮಾರ್ ನಟನೆಯ ಅತ್ರಂಗಿ ರೇ ಸಿನಿಮಾ ನೇರವಾಗಿ ಓಟಿಟಿ ಹಾದಿ ಹಿಡಿದಿತ್ತು. ಈಗ ಅವರ ನಟನೆಯ ಎರಡನೇ ಸಿನಿಮಾ ನೇರವಾಗಿ ಒಟಿಟಿಯತ್ತ ಮುಖಮಾಡಿದೆ.

ಹೌದು ರಂಜಿತ್ ತಿವಾರಿ ನಿರ್ದೇಶನದ ತ್ರಿಲ್ಲರ್ ಸಿನಿಮಾ ಮಿಷನ್ ಸಿಂಡ್ರೆಲ್ಲಾ ಚಿತ್ರ ನೇರವಾಗಿ ಒಟಿಟಿಯಲ್ಲಿ ರಿಲೀಸಾಗುತ್ತಿದೆ. ಇನ್ನು ಕೆಲವೇ ತಿಂಗಳಲ್ಲಿ ಕೋವಿಡ್ ನಾಲ್ಕನೇ ಕಾಣಿಸಿಕೊಳ್ಳಲಿದೆ ಎಂದು ವರದಿಯೊಂದು ಬಿಡುಗಡೆಯಾಗಿದೆ. ಹೀಗಾದರೆ ಸಿನಿಮಾ ರಿಲೀಸ್ ಸಾಧ್ಯವಾಗದೆ ಇರಬಹುದು ಈ ಕಾರಣಕ್ಕಾಗಿ ನಿರ್ಮಾಪಕರು ರಿಸ್ಕ್ ತೆಗೆದುಕೊಳ್ಳದೆ ನೇರವಾಗಿ ಒಟಿಟಿ ಪ್ಲಾಟ್ ಫಾರ್ಮ್ ಹಾದಿ ಹಿಡಿದಿದ್ದಾರೆ. ಡಿಸ್ನಿ ಪ್ಲಸ್ ಹಾಟ್ ಸ್ಟಾರ್ ಮಿಷನ್ ಸಿಂಡ್ರೆಲ್ಲಾ ಚಿತ್ರದ ಡಿಜಿಟಲ್ ಹಕ್ಕನ್ನು 135ಕೋಟಿ ರೂಪಾಯಿಗೆ ಖರೀದಿ ಮಾಡಿದೆ. ಅಕ್ಷಯ್ ಅವರ ಜೀವನದಲ್ಲಿ ಒಂದು ಸಿನಿಮಾ ಒಟಿಟಿಗೆ ಇಷ್ಟು ದೊಡ್ಡ ಮೊತ್ತಕ್ಕೆ ಸೇಲ್ ಆಗಿರುವುದು ಇದೇ ಮೊದಲು. ಮೇ ತಿಂಗಳಲ್ಲಿ ಸಿನಿಮಾ ರಿಲೀಸ್ ಆಗುವ ಸಾಧ್ಯತೆ ಇದೆ. ಮಿಷನ್ ಸಿಂಡ್ರೆಲ್ಲಾ ಸಿನಿಮಾದ ಮ್ಯೂಸಿಕ್ ಹಕ್ಕು ಈಗಾಗಲೆ ಸೇಲ್ ಆಗಿದೆ.

ಇದರಿಂದ ಚಿತ್ರಕ್ಕೆ 20 ಕೋಟಿ ರೂಪಾಯಿ ಸಿಕ್ಕಿದೆ. ಅಕ್ಷಯ್ ಕುಮಾರ್ ನಟನೆಯ ಬೆಲ್ ಬಾಟಮ್ ಚಿತ್ರಕ್ಕೆ ವಶು ಭಗ್ನಾನಿ ಬಂಡವಾಳ ಹೂಡಿದ್ದರು. ಈ ಸಿನಿಮಾವನ್ನು ನೇರವಾಗಿ ಒಟಿಟಿಗೆ ತೆರೆಗೆ ತರದೇ ಚಿತ್ರಮಂದಿರದಲ್ಲಿ ರಿಲೀಸ್ ಮಾಡುವ ಸಾಹಸವನ್ನು ವಿಷು ಮಾಡಿದ್ದರು. ಆದರೆ ಇದರಿಂದ ಅವರು ಕೈ ಸುಟ್ಟುಕೊಂಡಿದ್ದರು. ಈಗ ಅಕ್ಷಯ್ ಕುಮಾರ್ ಮತ್ತು ವಿಶು ಅವರು ಮತ್ತೊಂದು ಸಿನಿಮಾ ಮಾಡುತ್ತಿದ್ದಾರೆ. ಬಡೇ ಮಿಯಾ ಚೋಟೆ ಮಿಯಾ ಸಿನಿಮಾದಲ್ಲಿ ವಿಷ್ಣು ಹಾಗೂ ಅಕ್ಷಯ್ ಒಟ್ಟಾಗಿ ಕೆಲಸ ಮಾಡುತ್ತಿದ್ದಾರೆ. ಅಕ್ಷಯ್ ಕುಮಾರ್ಗೆ ಬಾಲಿವುಡ್ ನಲ್ಲಿ ಭಾರಿ ಬೇಡಿಕೆಯಿದೆ. ಅಕ್ಷಯ್ ಕುಮಾರ್ ಅವರ ಸಿನಿಮಾಗಳನ್ನು ಅಭಿಮಾನಿಗಳು ನೋಡೇ ನೋಡುತ್ತಾರೆ. ಇದೇ ಕಾರಣಕ್ಕೆ 135 ಕೋಟಿ ರೂಪಾಯಿಗೆ ಚಿತ್ರ ಸೇಲ್ ಆಗಿದೆ ಎಂದು ಚಿತ್ರತಂಡದವರು ಅಭಿಪ್ರಾಯಪಟ್ಟಿದ್ದಾರೆ.