ಭಾರತೀಯ ಚಿತ್ರರಂಗದ ಬಹುತೇಕ ನಟ-ನಟಿಯರು ಐಷಾರಾಮಿ ಬದುಕನ್ನು ನಡೆಸುವುದು, ದುಬಾರಿ ಬೆಲೆಯ ಕಾರುಗಳನ್ನು ಹೊಂದಿರುವುದು, ಐಷಾರಾಮಿ ಪ್ರಾಪರ್ಟಿ ಗಳನ್ನು ಖರೀದಿ ಮಾಡುವುದು ಸರ್ವೇಸಾಮಾನ್ಯ. ಸಿನಿಮಾ ತಾರೆಯರು ಅಂದ ಮೇಲೆ ಹಣಕ್ಕೇನು ಕೊರತೆಯಿರುವುದಿಲ್ಲ. ಅದರಲ್ಲೂ ಟಾಪ್ ನಟ- ನಟಿಯರು ಸಿನಿಮಾಗಳಲ್ಲಿ ನಟಿಸುವುದರ ಜೊತೆಗೆ ಜಾಹೀರಾತು ಹಾಗೂ ಕೆಲವು ಕಂಪನಿಗಳ ಪ್ರಮೋಷನ್ ಗಾಗಿ ಒಪ್ಪಂದ ಮಾಡಿಕೊಂಡಿರುತ್ತಾರೆ. ಎಷ್ಟೋ ಬ್ರಾಂಡ್ ಗಳಿಗೆ ಅಂಬಾಸಿಡರ್ ಆಗಿರುತ್ತಾರೆ. ಇದಕ್ಕಾಗಿ ಕೋಟಿಗಟ್ಟಲೆ ಹಣವನ್ನೂ ಪಡೆಯುತ್ತಿರುತ್ತಾರೆ. ಹೀಗಾಗಿ ನಟ ನಟಿಯರು ಐಷಾರಾಮಿ ಜೀವನ ನಡೆಸುವುದು ಆಶ್ಚರ್ಯವೇನಲ್ಲ.

ಆದರೆ ಪ್ರತಿ ಬಾರಿಯೂ ನಟ ಅಥವಾ ನಟಿಯರು ದುಬಾರಿ ಬೆಲೆಯ ಕಾರು ಅಥವಾ ಪ್ರಾಪರ್ಟಿ ಖರೀದಿಸಿ ಜನಸಾಮಾನ್ಯರು ಹುಬ್ಬೆರಿಸುವಂತೆ ಮಾಡುವುದಂತೂ ನಿಜ. ಸದ್ಯ ಇದೇ ರೀತಿ ದುಬಾರಿ ಬೆಲೆಯ ಅಪಾರ್ಟ್ಮೆಂಟ್ ಒಂದನ್ನು ಖರೀದಿಸಿ ಜನಸಾಮಾನ್ಯರು ಹುಬ್ಬೆರಿಸುವಂತೆ ಮಾಡಿದ ಬಾಲಿವುಡ್ ನ ಹೆಸರಾಂತ ನಟ ಅಯುಷ್ಮಾನ್ ಖುರಾನಾ. ಇವರು ಹಾಗೂ ಇವರ ಸಹೋದರ ಅಪರಶಕ್ತಿ ಖುರಾನಾ ಒಟ್ಟಿಗೆ ಖರೀದಿಸಿದ ಆಸ್ತಿಯ ಬೆಲೆ ಕೇಳಿದರೆ ನೀವು ದಂಗಾಗುವುದಂತೂ ನಿಜ. ವಿಕ್ಕಿ ಡೋನರ್ ಚಿತ್ರದ ಮೂಲಕ ಬಾಲಿವುಡ್ ಗೆ ಪಾದಾರ್ಪಣೆ ಮಾಡಿದ ನಟ ಅಯುಷ್ಮಾನ್ ಖುರಾನಾ ಒಬ್ಬ ನಟನಷ್ಟೇ ಅಲ್ಲದೇ ಸಿಂಗರ್, ರೈಟರ್ ಹಾಗೂ ನಿರೂಪಕನಾಗಿ ಕೂಡ ಕೆಲಸ ಮಾಡಿದ್ದಾರೆ.



ಇವರ ನಟನೆಗೆ ಒಂದು ನ್ಯಾಷನಲ್ ಅವಾರ್ಡ್ ಮತ್ತು ನಾಲ್ಕು ಫಿಲಂಫೇರ್ ಅವಾರ್ಡಗಳು ದೊರೆತಿವೆ. ಅಯುಷ್ಮಾನ್ ಖುರಾನಾ ಅವರು ಬಾಲಿವುಡ್ ಸಿನಿ ಇಂಡಸ್ಟ್ರಿಯಲ್ಲಿ ಅತೀ ಹೆಚ್ಚು ಸಂಭಾವನೆ ಪಡೆಯುವ ನಟರಲ್ಲಿ ಒಬ್ಬರು. ಇವರು ವಿಂಡ್ಸರ್ ಗ್ರಾಂಡ್ ರೆಸಿಡೆನ್ಸಸ್, ಲೋಖಂಡ್ವಾಲಾ ಕಾಂಪ್ಲೆಕ್ಸ್, ಅಂಧೇರಿ ವೆಸ್ಟ್ ನಲ್ಲಿ 20 ನೇ ಮಹಡಿಯಲ್ಲಿ ಡೆವಲಪರ್ ವಿಂಡಸರ್ ರಿಯಾಲಿಟಿ ಪ್ರೈವೇಟ್ ಲಿಮಿಟೆಡ್ ನಿಂದ 19.30 ಕೋಟಿ ರೂಗೆ ಎರಡು ಘಟಕಗಳನ್ನು ಖರೀದಿಸಿದ್ದಾರೆ. ಅಪಾರ್ಟ್ಮೆಂಟಿನ ಗಾತ್ರವು 4,027 ಚದರ ಅಡಿಗಳು ಮತ್ತು 4 ಕಾರ್ ಪಾರ್ಕಿಂಗ್ ಬರುತ್ತದೆ.



ಅವರ ಸಹೋದರ ಅಪರಶಕ್ತಿ ಖುರಾನಾ ಅವರು ಇದೇ ಕಾಂಪ್ಲೆಕ್ಸ್ ನಲ್ಲಿ 1,745 ಚದರ ಅಡಿ ಅಪಾರ್ಟ್ಮೆಂಟ್ ನ್ನು 7.25 ಕೋಟಿ ರೂಪಾಯಿಗೆ ಖರೀದಿಸಿದ್ದಾರೆ. ಇದರಲ್ಲಿ ಎರಡು ಕಾರ್ ಪಾರ್ಕಿಂಗ್ ಬರುತ್ತದೆ. ಡಿಸೆಂಬರ್ 7 2021 ರಂದು ಇದನ್ನು ನೋಂದಾಯಿಸಲಾಗಿದೆ. 36.25 ಲಕ್ಷ ರೂಪಾಯಿ ಸ್ಟ್ಯಾಂಪ್ ಡ್ಯೂಟಿ ಪಾವತಿಸಿದ್ದಾರೆ. ಹಾಗೆಯೇ ಆಯುಷ್ಮಾನ್ ಖುರಾನಾ ಅಪಾರ್ಟ್ಮೆಂಟಿನ ದಾಖಲೆಯನ್ನು ನವೆಂಬರ್ 29 2021 ರಂದು ನೋಂದಾಯಿಸಲಾಗಿದೆ. ಅಪಾರ್ಟ್ಮೆಂಟ್ ನಿಂದ 96.5 50 ಲಕ್ಷ ರೂಪಾಯಿಗಳ ರಿಜಿಸ್ಟ್ರೇಷನ್ ಶುಲ್ಕವನ್ನು ಪಾವತಿಸಲಾಗಿದೆ ಎಂದು ಮೂಲಗಳಿಂದ ತಿಳಿದುಬಂದಿದೆ.