2.5 ಕೋಟಿ ಬೆಲೆಯ ಐಷಾರಾಮಿ ಕಾರು ಖರೀದಿಸಿದ ನಟಿ

ಹಿಂದಿ ಚಿತ್ರರಂಗದ ಸುಪ್ರಸಿದ್ದ ನಟಿ ನಿಮ್ರತ್ ಕೌರ್ ದುಬಾರಿ ಬೆಲೆಯ ಐಷಾರಾಮಿ ಕಾರೊಂದನ್ನ ಖರೀದಿ ಮಾಡಿ ಭಾರಿ ಸುದ್ದಿಯಾಗಿದ್ದಾರೆ. ಹೌದು ಈ ಸಿನಿಮಾ ಸೆಲೆಬ್ರಿಟಿಗಳು ಸಾಮಾನ್ಯವಾಗಿ ಕಾರ್ ಕ್ರೇಜ಼್ ಹೊಂದಿರುತ್ತಾರೆ. ಅದು ಯಾವ ಮಟ್ಟಿಗೆ ಅಂದರೆ ಮಾರುಕಟ್ಟೆಗೆ ಬರುವಂತಹ ಎಲ್ಲಾ ರೀತಿಯ ಹೊಸ ಕಾರನ್ನ ತಮ್ಮದಾಗಿಸಿಕೊಳ್ಳಬೇಕು ಎಂಬ ಮಹಾದಾಸೆ ಕನಸು ಹೊಂದಿರುತ್ತಾರೆ. ಇದು ಬಾಲಿವುಡ್ ಸಿನಿಮಾ ಸೆಲೆಬ್ರಿಟಿಗಳಿಗೆ ಸಾಕಷ್ಟು ಉತ್ಸಾಹ ಇರುತ್ತದೆ. ಅದೇ ರೀತಿಯಾಗಿ ನಟಿ ನಿಮ್ರತ್ ಕೌರ್ ಅವರು ಕೂಡ ಇದೀಗ ಹೊಸದೊಂದು ಕಾರನ್ನ ಖರೀದಿ ಮಾಡಿದ್ದಾರೆ. ದಿ ಲಂಚ್ ಬಾಕ್ಸ್, ಏರ್ ಲಿಫ್ಟ್, ದಾಸ್ವಿ ಅಂತಹ ಸೂಪರ್ ಹಿಟ್ ಸಿನಿಮಾಗಳ ಮೂಲಕ ಗುರುತಿಸಿಕೊಂಡ ನಿಮ್ರತ್ ಕೌರ್ ಅವರು ಬಾಲಿವುಡ್ ನಲ್ಲಿ ಸಾಕಷ್ಟು ಹೆಸರು ಮಾಡಿದ್ದಾರೆ.

ಬಾಲಿವುಡ್ ನಲ್ಲಿ ತಕ್ಕ ಮಟ್ಟಿಗೆ ಬೇಡಿಕೆಯಲ್ಲಿರುವ ನಟಿ ನಿಮ್ರತ್ ಕೌರ್ ಅವರು ಇದೀಗ ಬರೋಬ್ಬರಿ 2.5 ಕೋಟಿ ಬೆಲೆಯ ಫೈ ಜೀ ಜನ್ರೇಶನ್ ಲ್ಯಾಂಡ್ ರೋವರ್ ರೇಂಜ್ ರೋವರ್ ಎಸ್ಯುವಿ ಕಾರನ್ನ ಖರೀದಿಸಿದ್ದಾರೆ. ಹೊಸ ವರ್ಷದ ಆರಂಭದಲ್ಲಿ ಲಾಂಚ್ ಆದಂತಹ ಲ್ಯಾಂಡ್ ರೋವರ್ ರೇಂಜ್ ರೋವರ್ ಎಸ್ಯುವಿ ಕಾರನ್ನ ಖರೀದಿ ಮಾಡಿರುವ ಮೊದಲ ಸೆಲೆಬ್ರಿಟಿ ಎಂಬ ಹೆಸರಿಗೆ ಪಾತ್ರರಾಗಿದ್ದಾರೆ. ನಟಿ ನಿಮ್ರತ್ ಕೌರ್ ಅವರು ತಮ್ಮ ಈ ಹೊಸ ಕಾರಿಗೆ ಬ್ಲ್ಯಾಕ್ ಬೀಸ್ಟ್ ಎಂದು ಕರೆಯುತ್ತಾರಂತೆ. ಇದೇ ತಮ್ಮ ಹೊಸ ಕಾರಿನಲ್ಲಿ ಕುಳಿತು ನಿಮ್ರತ್ ಕೌರ್ ಅವರು ಪ್ರೊಡಕ್ಷನ್ ಹೌಸ್ ಕಡೆಗೆ ಹೊರಟು, ಅಲ್ಲಿ ಕಾರಿನಿಂದ ಇಳಿದು ಫೋಟೋಗೆ ಫೋಸ್ ಕೊಟ್ಟಿದ್ದಾರೆ. ನಟಿ ಈ ಪೋಟೋಗಳು ಸದ್ಯಕ್ಕೆ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿವೆ. ಇನ್ನು ನಿಮ್ರತ್ ಕೌರ್ ಅವರು ಖರೀದಿ ಮಾಡಿರುವ ಲ್ಯಾಂಡ್ ರೋವರ್ ರೇಂಜ್ ರೋವರ್ ಕಾರಿನಲ್ಲಿ ಎಸ್ಯುವಿ ಐಕಾನಿಕ್ ಸಿಲೂಯೆಟ್ ಅನ್ನು ಹೊಂದಿದೆ.

ಪ್ಲಶ್ ಫಿಟ್ಟಿಂಗ್ ಡೋರ್ ಹ್ಯಾಂಡಲ್ ಗಳಂತೆ ರೇಂಜ್ ರೋವರ್ ವೆಲಾರ್ ನೊಂದಿಗಿದೆ. ಇದರ ಜೊತೆಗೆ ಎಸ್ಯುವಿ ಟೈಲ್ ಗೇಟ್ ಗ್ಲಾಸ್ ಕಪ್ಪು ಪ್ಲೇಟ್ ಹೊಂದಿದ್ದು, ಅದರ ಮೇಲೆ ರೇಂಜ್ ರೋವರ್ ಬ್ರ್ಯಾಂಡಿಂಗ್ ನೀಡಲಾಗಿದೆ. ಪ್ರಮುಖವಾಗಿ ಈ ಲ್ಯಾಂಡ್ ರೋವರ್ ರೇಂಜ್ ಕಾರಿನಲ್ಲಿ ತುಂಬಾ ವಿಶೇಷವಾಗಿ ಐಷಾರಾಮಿ ವಿನ್ಯಾಸವು ರೇಂಜ್ ರೋವರ್ ಮಾದರಿಯನ್ನ ಹೊಂದಿದೆ. ಇದರಲ್ಲಿ 4.4 ಲೀಟರ್ ಪೆಟ್ರೋಲ್ ಎಂಜಿನ್ ಜೊತೆ 520 ಬಿ.ಎಚ್.ಪಿ ಪವರ್ ಅಂಡ್ 750 ಎನ್ಎಮ್ ಟಾರ್ಕ್ ಅನ್ನು ಉತ್ಪಾದನೆ ಮಾಡುತ್ತದೆ. ಒಟ್ಟಾರೆಯಾಗಿ ನಿಮ್ರಿತ್ ಕೌರ್ ಅವರು ಖರೀದಿ ಮಾಡಿರುವ ಕಪ್ಪು ಬಣ್ಣದ ಫೈವ್ ಜೀ ಜನ್ರೇಶನ್ ರೇಂಜ್ ರೋವರ್ ಕಾರು ಎಲ್ಲರ ಆಕರ್ಷಣೆ ಮಾಡುತ್ತಿದೆ.

%d bloggers like this: