2 ಗಂಟೆ ವಿಡಿಯೋ ಮುಂದೆ ಸುಮ್ಮನೆ ಕೂತ ಈತನಿಗೆ ಯೌಟ್ಯೂಬ್ ಇಂದ ಸಿಕ್ತು 15ಲಕ್ಷ ರೂಪಾಯಿ

ಕಳೆದ ಕೆಲವು ದಿನಗಳ ಹಿಂದೆ ಸಾಮಾಜಿಕ ಜಾಲತಾಣಗಳಲ್ಲಿ ಯೌಟ್ಯೂಬ್ ವಿಡಿಯೋ ಒಂದು ಭಾರಿ ಸುದ್ದಿಯಾಗಿತ್ತು, ಇಂಡೋನೇಷ್ಯಾದ ಒಬ್ಬ ಯೌಟ್ಯುಬರ್ ಯುವಕ ಸುಮಾರು ಎರಡು ಗಂಟೆಗಳ ಕಾಲ ವಿಡಿಯೋ ಮುಂದೆ ಸುಮ್ಮನೆ ಕುಳಿತುಕೊಂಡಿದ್ದ, ಇದಕ್ಕೆ ಅವನಿಗೆ ಸಿಕ್ಕಿದ್ದು ಲಕ್ಷ ಲಕ್ಷ ರೂಪಾಯಿಗಳು. ಇದೇನಪ್ಪ ಸುಮ್ಮನೆ ಕುಳಿತುಕೊಂಡರೆ ಲಕ್ಷ ಲಕ್ಷ ಕೊಡ್ತಾರಾ ಅಂತ ಕೇಳ್ತಿದೀರಾ ಇಲ್ಲಿ ನೋಡಿರಿ. ಇಂಡೋನೇಷ್ಯಾದ ಯುವಕನೊಬ್ಬ ತನ್ನ ಯೌಟ್ಯೂಬ್ ಖಾತೆಯಲ್ಲಿ ಈಗಾಗಲೇ ಸುಮಾರು ನಲವತ್ತು ಸಾವಿರ ಫಾಲೋವರ್ಸ್ ಹೊಂದಿದ್ದಾನೆ. ಈತ ಕಳೆದ ಕೆಲದಿನಗಳ ಹಿಂದೆ ಯೌಟ್ಯೂಬ್ ಅಲ್ಲಿ ‘2hours of doing nothing’ ಎಂಬ ಟೈಟಲ್ ಹಾಕಿ ವಿಡಿಯೋ ಅಪ್ಲೋಡ್ ಮಾಡಿದ್ದ.

ಈ ವಿಡಿಯೋ ಅಲ್ಲಿ ಈತ ಎರಡು ಗಂಟೆಗಳ ಕಾಲ ಏನು ಮಾಡದೆ ಸುಮ್ಮನೆ ವಿಡಿಯೋ ಮುಂದೆ ಕುಳಿತುಕೊಂಡಿದ್ದ, ಈ ವಿಡಿಯೋ ಅನ್ನು ಬರೋಬ್ಬರಿ ಮೂವತ್ತೆರಡು ಲಕ್ಷ ಜನ ನೋಡಿದ್ದಾರೆ. ಏನೂ ಮಾಡದೆ ಸುಮ್ಮನೆ ವಿಡಿಯೋ ಮುಂದೆ ಕೂತು ಇಷ್ಟು ಜನರು ವಿಡಿಯೋ ನೋಡುವ ಹಾಗೆ ಮಾಡಿದ್ದು ಒಂದು ಪವಾಡವೇ ಸರಿ. ಈಬಗ್ಗೆ ಹೇಳಿರುವ ಈ ಯುವಕ ನಾನು ಹೊಸದಾಗಿ ಏನಾದರೂ ಮಾಡಬೇಕೆಂದು ಈತರಹದ ವಿಡಿಯೋ ಮಾಡಿದ್ದೇನೆ ಹಾಗು ಇದು ಯುವಕರಿಗೆ ಸಮಯದ ಅರಿವು ಮೂಡಿಸಲು ಮಾಡಿದ್ದೇನೆ ಎಂದು ಹೇಳಿದ್ದಾರೆ.

ಈಗ ಅವನಿಗೆ ಈ ವಿಡಿಯೋ ಮೂಲಕ ಸಿಕ್ಕಿರುವ ಹಣ ಸುಮಾರು ಹದಿನೈದು ಲಕ್ಷಕ್ಕಿಂತಲೂ ಹೆಚ್ಚು, ಸುಮಾರು ಮೂವತ್ತಕ್ಕೂ ಹೆಚ್ಚು ಲಕ್ಷ ಜನರು ನೋಡಿರುವ ಈ ವಿಡಿಯೋ ಇಂದ ಈ ಯುವಕನಿಗೆ ಇಷ್ಟು ಹಣ ಬಂದಿದೆ. ಅಂದಹಾಗೆ ಯೌಟ್ಯೂಬ್ ಜಾಹಿರಾತು ನೋಡುವುದರಿಂದ ಯೌಟ್ಯೂಬ್ ಇಂದ ಇಷ್ಟು ಹಣ ಬರಲು ಸಾಧ್ಯ. ಈ ಡಿಜಿಟಲ್ ಜಗತ್ತೇ ಹಾಗೆ ಕುಂತ ಕುಂತಲ್ಲಿ ಲಕ್ಷಾಂತರ ರೂಪಾಯಿಗಳನ್ನು ಗಳಿಸಲೂಬಹುದು ಹಾಗು ಲಕ್ಷಾಂತರ ರೂಪಾಯಿಗಳನ್ನು ಕಳೆದುಕೊಳ್ಳಬಹುದು ಕೂಡಾ. ನೀವೂ ಈ ವಿಡಿಯೋ ನೋಡಬೇಕೆಂದರೆ ಯೌಟ್ಯೂಬ್ ಅಲ್ಲಿ ‘2hours of doing nothing’ ಎಂದು ಹುಡುಕಿ ನೋಡಿರಿ.

%d bloggers like this: