2 ಕೋಟಿ ಬೆಲೆಯ ದುಬಾರಿ ಐಷಾರಾಮಿ ಕಾರು ಖರೀದಿಸಿದ ನಟ

ಬಾಲಿವುಡ್ ಖ್ಯಾತ ನಿರೂಪಕ ಕಮ್ ನಟ ಇದೀಗ ದುಬಾರಿ ಐಷಾರಾಮಿ ಕಾರಿನ ಒಡೆಯರಾಗುವ ಮೂಲಕ ಬಿಟೌನ್ ನಲ್ಲಿ ಭಾರಿ ಸುದ್ದಿ ಆಗಿದ್ದಾರೆ. ಕೆಲವು ದಿನಗಳಿಂದೀಚೆಗೆ ಬಾಲಿವುಡ್ ಸೇರಿದಂತೆ ಸೌತ್ ಇಂಡಿಯಾ ಸಿನಿಮಾ ಅನೇಕ ಖ್ಯಾತ ನಟ ನಟಿಯರು ತಮ್ಮ ಚಿತ್ರಗಳ ಮೂಲಕ ಸುದ್ದಿ ಆಗುವುದಕ್ಕಿಂತ ಹೆಚ್ಚಾಗಿ ತಮ್ಮ ಫ್ಯಾಶನ್, ಫೋಟೋ ಶೂಟ್ ಮತ್ತು ದುಬಾರಿ ಬೆಲೆಯ ಐಷಾರಾಮಿ ಕಾರ್ ಖರೀದಿ ಮಾಡುವ ಮೂಲಕ ಸುದ್ದಿ ಆಗುತ್ತಿದ್ದಾರೆ. ಕಾರುಗಳು ಅಂದರೆ ಸಾಮಾನ್ಯರಿಗೆ ದೊಡ್ಡ ಮಟ್ಟದ ಕ್ರೇಜ್ ಇರುತ್ತದೆ. ಇನ್ನು ಸಿನಿಮಾ ಸೆಲೆಬ್ರಿಟಿಗಳಿಗೆ ಇರುವುದಿಲ್ಲವೇ ಖಂಡಿತಾ ಸಖತ್ ಆಗಿಯೇ ಕಾರ್ ಕ್ರೇಜ಼್ ಇರುತ್ತದೆ. ಅದರಲ್ಲಿಯೂ ಈ ಫಿಲ್ಮ್ ಸ್ಟಾರ್ ನಟ ನಟಿಯರಿಗೆ ಇಂಪೋರ್ಟೆಡ್ ಕಾರುಗಳು ಅಂದರೆ ಬಹಳ ಅಚ್ಚು ಮೆಚ್ಚಾಗಿರುತ್ತದೆ.

ಹೌದು ಅದರಂತೆ ಇತ್ತೀಚೆಗೆ ಹಿಂದಿ ಕಿರುತೆರೆಯ ಪ್ರಸಿದ್ದ ನಿರೂಪಕ ಮತ್ತು ನಟರಾಗಿರುವ ಮನೀಶ್ ಪೌಲ್ ಅವರು ದುಬಾರಿ ಬೆಲೆಯ ಐಷಾರಾಮಿ ಕಾರ್ ಆದಂತಹ ನೂತನ ಮರ್ಸಿಡಿಸ್ ಮೇ ಬ್ಯಾಕ್ ಜಿ.ಎಲ್.ಎಸ್580 ಎಂಬ ಕಾರನ್ನು ಖರೀದಿ ಮಾಡುವ ಮೂಲಕ ಸುದ್ದಿಯಾಗಿದ್ದಾರೆ. ಹೌದು ಈ ಐಷಾರಾಮಿ ಕಾರನ್ನು ಬಾಲಿವುಡ್ ನ ಕೆಲವೇ ಕೆಲವು ಸ್ಟಾರ್ ನಟರು ಮಾತ್ರ ಖರೀದಿ ಮಾಡಿದ್ದಾರೆ. ಏಕೆಂದರೆ ಈ ಮರ್ಸಿಡಿಸ್ ಬೆಂಝ್ ಮೇಬ್ಯಾಕ್ ಜಿ.ಎಲ್.ಎಸ್ 580 ಕಾರು ಭಾರತೀಯ ಮಾರುಕಟ್ಟೆಯಲ್ಲಿ ಲಿಮಿಟೆಡ್ ಯುನಿಟ್ ಆಗಿ ಪರಿಚಯಗೊಂಡಿದ್ದವು. ಆಂಕರ್ ಕಮ್ ನಟ ಮನೀಷ್ ಪೌಲ್ ಅವರು ಹಿಂದಿಯ ಜನಪ್ರಿಯ ರಿಯಾಲಿಟಿ ಶೋ ಸ್ಮಾರ್ಟ್ ಜೋಡಿ ಕಾರ್ಯಕ್ರಮ ನಡೆಸಿಕೊಡುತ್ತಿದ್ದಾರೆ.

ಮನೀಶ್ ಪೌಲ್ ಅವರು ಕೇವಲ ನಿರೂಪಣೆ ಮಾತ್ರ ಅಲ್ಲದೆ ಒಂದಷ್ಟು ಸಿನಿಮಾಗಳಲ್ಲಿ ಕೂಡ ನಟಿಸುತ್ತಿದ್ದಾರೆ. ಸದ್ಯಕ್ಕೆ ನಿರ್ಮಾಪಕರಾದ ರಾಜ್ ಮೆಹ್ತಾ ಅವರ ನಿರ್ಮಾಣದ ಸ್ಟಾರ್ ನಟ ವರುಣ್ ಧವನ್, ಕಿಯಾರಾ ಅಡ್ವಾಣಿ ಅಭಿನಯದ ಹೊಸ ಚಿತ್ರವೊಂದರಲ್ಲಿ ಅಭಿನಯಿಸುತ್ತಿದ್ದಾರೆ. ಹೀಗೆ ಕಿರುತೆರೆ ಮತ್ತು ಬೆಳ್ಳಿತೆರೆ ಎರಡೂ ಕಡೆ ಜನಪ್ರಿಯತೆ ಗಳಿಸಿರುವ ನಟ ಮನೀಶ್ ಪೌಲ್ ಅವರು ಬಾಲಿವುಡ್ ನಲ್ಲಿ ಬೇಡಿಕೆಯ ನಿರೂಪಕರಾಗಿ ಹೆಸರಾಗಿದ್ದಾರೆ. ಇದೀಗ ಮನೀಶ್ ಪೌಲ್ ಅವರು ಮರ್ಸಿಡಿಸ್ ಬೆಂಝ಼್ ಜಿ.ಎಲ್.ಎಸ್ 580 ಕಾರು ಖರೀದಿಸಿದ್ದರೆ. ಈ ಕಾರಿನ ವಿಶೇಷತೆಗಳ ಬಗ್ಗೆ ಹೆಚ್ಚಿನ ಮಾಹಿತಿ ತಿಳಿಯುವುದಾದರೆ ಈ ಕಾರಿನಲ್ಲಿ ನಾಲ್ಕು ಸೀಟರ್ ಅಥವಾ ಐದು ಸೀಟರ್ ಹೊಂದಿರುವ ಮಾಡೆಲ್ ವೊಂದಿದೆ.

ಜೊತೆಗೆ ಇದರಲ್ಲಿ ಹಿರಿದಾದ ವರ್ಟಿಕಲ್ ಸ್ಲ್ಯಾಟ್ ಗ್ರಿಲ್, ವಿಂಡೋ ಲೈನ್, ಸೈಡ್ ಸ್ಟೆಪ್, ಫ್ರಂಟ್ ಮತ್ತು ಬ್ಯಾಕ್ ಸೈಡ್ ಆಕರ್ಷಕ ವಿನ್ಯಾಸವುಳ್ಳ ಆಕ್ಸೆಂಟ್ ರೂಫ್ ರೈಲ್ಸ್ ಮತ್ತು ಸ್ಪೋರ್ಟಿವ್ ಎಕ್ಸಾಮ್ ನೋಟ್ ಒಳಗೊಂಡಿದೆ. ಪ್ರತಿ ಸೀಟ್ ನಲ್ಲಿಯೂ ಕೂಡ ಆಡಿಯೋ, ಎಸಿ, ಆಂಬಿಯೆಂಟ್ ಲೈಟಿಂಗ್ಸ್, ಸನ್ಶೇಡ್, ಗೂಗಲ್ ಮ್ಯಾಪ್, 12.3 ಇಂಚಿನ ಎಂಬಿಯುಕ್ಸ್ ಇನ್ಫೋಟೈನ್ ಮೆಂಟ್ ಕ್ಲಸ್ಟರ್, ಬರ್ಮೆಸ್ಟರ್ ಸರೌಂಡ್ ಸಿಸ್ಟಮ್ ಹೊಂದಿದೆ. ಇನ್ನು ಈ ಕಾರು 4.0 ಲೀಟರಿನ ವಿ8 ಪೆಟ್ರೋಲ್ ಇಂಜಿನ್ ಹೊಂದಿದೆ. ಈ ಮರ್ಸಿಡಿಸ್ ಬೆಂಝ಼್ ಮೇಬ್ಯಾಕ್ ಜಿಎಸ್ಎಲ್ 580 ಎಸ್ಯೂವಿ ಕಾರಿನ ಶೋರೂಂ ಬೆಲೆಯು ಬರೋಬ್ಬರಿ 2.47 ಕೋಟಿ ಆಗಿದೆ.

%d bloggers like this: