20 ವರ್ಷದ ನಂತರ ಮತ್ತೆ ಬಿಡುಗಡೆ ಆದ ದರ್ಶನ್ ಅವರ ಹಿಟ್ ಚಿತ್ರ, ಎಷ್ಟು ಗಳಿಸಿದೆ ಗೊತ್ತೇ

ಫೆಬ್ರವರಿ 16 ರಂದು ಚಾಲೆಂಜಿಂಗ್ ಸ್ಟಾರ್ ದರ್ಶನ್ ತಮ್ಮ ಹುಟ್ಟುಹಬ್ಬವನ್ನು ಸರಳವಾಗಿ ಆಚರಿಸಿಕೊಂಡರು. ಪ್ರತಿ ವರ್ಷ ದರ್ಶನ್ ಅವರ ಅಭಿಮಾನಿಗಳು ಹುಟ್ಟುಹಬ್ಬದ ನೆನಪಿಗಾಗಿ ಸಾಕಷ್ಟು ಉಡುಗೊರೆಗಳನ್ನು ದರ್ಶನ್ ಅವರಿಗೆ ಕೊಡುತ್ತಾರೆ. ಆದರೆ ಈ ಬಾರಿ ದರ್ಶನ್ ಅವರೇ ತಮ್ಮ ಅಭಿಮಾನಿಗಳಿಗೆ ಉಡುಗೊರೆಯೊಂದನ್ನು ನೀಡಿದ್ದಾರೆ. ಹೌದು ದರ್ಶನ್ ಅವರ ಈ ವರ್ಷದ ಹುಟ್ಟುಹಬ್ಬ ತುಂಬಾನೇ ಸ್ಪೆಷಲ್ ಆಗಿತ್ತು. ಏಕೆಂದರೆ ಇದೇ ವರ್ಷ ಫೆಬ್ರುವರಿ 8 ಕ್ಕೆ ದರ್ಶನ್ ಅವರು ನಾಯಕನಟನಾಗಿ ಸ್ಯಾಂಡಲ್ವುಡ್ ಗೆ ಕಾಲಿಟ್ಟು 20 ವರ್ಷಗಳು ತುಂಬಿದವು. ಇಪ್ಪತ್ತು ವರ್ಷಗಳ ಹಿಂದೆ ಮೆಜೆಸ್ಟಿಕ್ ಸಿನಿಮಾದ ಮೂಲಕ ನಾಯಕನಾಗಿ ತೆರೆಯ ಮೇಲೆ ಕಾಣಿಸಿಕೊಂಡ ದರ್ಶನ್ ಅವರು, ಇಲ್ಲಿಯವರೆಗೆ ಹಲವಾರು ಚಿತ್ರಗಳಲ್ಲಿ ನಟಿಸಿ ತಮ್ಮ ಅಭಿಮಾನಿಗಳನ್ನು ರಂಜಿಸುವಲ್ಲಿ ಸಫಲರಾಗಿದ್ದಾರೆ.

ನಮ್ಮ ಸ್ಯಾಂಡಲ್ವುಡ್ ನಲ್ಲಿ ಅತಿ ಹೆಚ್ಚು ಫ್ಯಾನ್ ಫಾಲೋವರ್ಸ್ ಹೊಂದಿರುವ ನಟರಲ್ಲಿ ದರ್ಶನ್ ಕೂಡ ಒಬ್ಬರು. ಮೆಜೆಸ್ಟಿಕ್ ಚಿತ್ರದ ನಂತರ ಮುಟ್ಟಿದ್ದೆಲ್ಲ ಚಿನ್ನ ಎಂಬ ಮಾತಿನಂತೆ, ದರ್ಶನ್ ಅವರು ಮಾಡಿದ ಸಿನಿಮಾಗಳೆಲ್ಲಾ ಒಂದಾದಮೇಲೊಂದು ಹ್ಯಾಟ್ರಿಕ್ ನೀಡಿದವು. ಇವರ ಹಲವಾರು ಸಿನಿಮಾಗಳು ಬಾಕ್ಸಾಫೀಸಿನಲ್ಲಿ ಧೂಳೆಬ್ಬಿಸಿವೆ. ಇಲ್ಲಿಯವರೆಗೆ ಹಲವಾರು ಚಿತ್ರಗಳಲ್ಲಿ ನಟಿಸಿರುವ ದರ್ಶನ್ ಅವರಿಗೆ ಮೆಜೆಸ್ಟಿಕ್ ಸಿನಿಮಾ ತುಂಬಾನೇ ಸ್ಪೆಷಲ್. ತಮ್ಮ ಮೊದಲನೇ ಚಿತ್ರ ಎನ್ನುವ ಪ್ರೀತಿ ಒಂದೆಡೆಯಾದರೆ, ಮೆಜೆಸ್ಟಿಕ್ ತರಹ ಇನ್ನೊಂದು ಸಿನಿಮಾ ಬರಲಾರದು ಎಂಬುದು ದರ್ಶನ್ ಅವರ ಅಭಿಪ್ರಾಯ.

ಮೊನ್ನೆಯಷ್ಟೇ ಹುಟ್ಟುಹಬ್ಬವನ್ನು ಆಚರಿಸಿಕೊಂಡ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಅಭಿಮಾನಿಗಳ ಒತ್ತಾಯದ ಮೇರೆಗೆ ಮತ್ತು ದರ್ಶನ್ ಅವರು ಚಿತ್ರರಂಗದಲ್ಲಿ 20 ವರ್ಷ ಪೂರೈಸಿದ ಬೆನ್ನಲ್ಲಿ, ದರ್ಶನ್ ಅವರ ಮೊದಲ ಸಿನಿಮಾ ಮೆಜೆಸ್ಟಿಕ್ ನ್ನು ಎಲ್ಲಾ ಥಿಯೇಟರ್ ಗಳಲ್ಲಿ ರೀ-ರಿಲೀಸ್ ಮಾಡಲಾಗಿದೆ. ಹೌದು ಹಲವಾರು ವರ್ಷಗಳ ಬಳಿಕ ಒಂದು ಚಿತ್ರ ಥಿಯೇಟರ್ ಗಳಲ್ಲಿ ರೀ-ರಿಲೀಸ್ ಆಗಬೇಕು ಎಂದರೆ, ಆ ನಟ ಕೋಟ್ಯಂತರ ಅಭಿಮಾನಿಗಳ ಮನಸ್ಸನ್ನು ಗೆದ್ದಿರಬೇಕು ಎಂಬುದು ಸತ್ಯ. 20 ವರ್ಷಗಳ ಹಿಂದಿನ ಸಿನಿಮಾ ಮತ್ತೆ ರಿಲೀಸ್ ಆಗಬೇಕಾದರೆ ಆ ನಟನ ಮೇಲೆ ಅವರ ಅಭಿಮಾನಿಗಳು ಇಟ್ಟಂತ ಪ್ರೀತಿ ಎಷ್ಟು ಎಂಬುದು ತಿಳಿಯುತ್ತದೆ.

ಬರೋಬ್ಬರಿ 20 ವರ್ಷಗಳ ಬಳಿಕ ರಿಲೀಸ್ ಆದರೂ ಕೂಡ ಮೆಜೆಸ್ಟಿಕ್ ಚಿತ್ರ ಹೊಸದೊಂದು ದಾಖಲೆ ಬರೆಯುವಲ್ಲಿ ಯಶಸ್ವಿಯಾಗಿದೆ. ಹೌದು ಬರೋಬ್ಬರಿ ಎರಡು ಕೋಟಿಗೂ ಅಧಿಕ ಹಣವನ್ನು ತನ್ನ ಗಲ್ಲಾಪೆಟ್ಟಿಗೆಗೆ ಬಾಚಿಕೊಳ್ಳುವ ಮೂಲಕ ದರ್ಶನ್ ಅವರು ಮತ್ತೊಮ್ಮೆ ಬಾಕ್ಸಾಫೀಸ್ ಸುಲ್ತಾನ್ ಎಂಬುದನ್ನು ಸಾಬೀತು ಮಾಡಿದಂತಾಗಿದೆ. ಇನ್ನೂ ವಿಶೇಷವೆಂದರೆ ಇದರಿಂದ ಬಂದಂತಹ ಹಣದಲ್ಲಿ ಬಡವರಿಗೆ ಸಹಾಯವಾಗುವಂತಹ ಕೆಲಸವನ್ನು ಮಾಡುವುದಾಗಿ ತಿಳಿಸಿದ್ದಾರೆ. ಒಬ್ಬ ದೊಡ್ಡ ಸ್ಟಾರ್ ನಟನಾಗಿಯೂ ಕೂಡ ಸಾಮಾಜಿಕ ಸೇವೆ ಹಾಗೂ ಪ್ರಾಣಿ ಪಕ್ಷಿಗಳ ಬಗೆಗಿನ ಒಲವು ದರ್ಶನ್ ಅವರ ಮೇಲಿನ ಗೌರವವನ್ನು ಇನ್ನೂ ಹೆಚ್ಚಾಗುವಂತೆ ಮಾಡುತ್ತದೆ ಎಂದರೆ ತಪ್ಪಾಗಲಾರದು. ನಮ್ಮ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರು ವಿಧಿವಶರಾದ ನಂತರ ಅವರ ಎಷ್ಟೋ ಸಿನಿಮಾಗಳನ್ನು ಹಲವಾರು ಥಿಯೇಟರ್ ಗಳಲ್ಲಿ ಉಚಿತವಾಗಿ ರಿ-ರಿಲೀಸ್ ಮಾಡಲಾಗಿತ್ತು. ಇದು ನಮ್ಮ ಪವರ್ ಸ್ಟಾರ್ ಬಗೆಗಿನ ಅಭಿಮಾನವನ್ನು ತೋರಿಸುತ್ತದೆ.

%d bloggers like this: