2000 ನೋಟಿನ ಮುದ್ರಣ ನಿಂತಿದ್ದು ಯಾಕೆ ಗೊತ್ತೇ, ಇಲ್ಲಿದೆ ಆತಂಕದ ಸುದ್ದಿ

ಇತ್ತೀಚಿಗೆ ಒಂದು ಸುದ್ದಿ ತುಂಬಾ ಚರ್ಚೆಗೆ ಕಾರಣವಾಗುತ್ತಿದೆ. ಇನ್ನೇನು ಕೆಲ ದಿನಗಳಲ್ಲಿ ದೇಶದ ಬ್ಯಾಂಕುಗಳ ಬ್ಯಾಂಕ್ ಅಂದ್ರೆ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಗರಿಗರಿಯಾದ ಪಿಂಕ್ ನೋಟುಗಳನ್ನು ಮರಳಿ ಪಡೆಯುತ್ತಾ ಎಂಬ ಒಂದು ವಿಷಯ ತುಂಬಾ ಚರ್ಚೆಗೆ ಕಾರಣವಾಗಿದೆ.

ಇದಕ್ಕೆ ಪುಷ್ಠಿ ಕೊಡುವಂತೆ ಇತ್ತೀಚಿಗೆ ಆರ್ಬಿಐನ ವಾರ್ಷಿಕ ರಿಪೋರ್ಟ್ ಹೊರಬಿದ್ದಿದೆ. ಇಷ್ಟಕ್ಕೂ ಆ ವರದಿಯಲ್ಲಿ ಏನು ಇದೆ ಗೊತ್ತೇ, ಕಳೆದೊಂದು ವರ್ಷಗಳಿಂದ 2000 ಮುಖ ಬೆಲೆಯ ನೋಟುಗಳು ಮುದ್ರಣವೇ ಆಗಿಲ್ಲ ಮತ್ತು ಇದರ ಜೊತೆಗೆ 2000 ನೋಟುಗಳ ಹರಿದಾಟ ಕೂಡ ಕಡಿಮೆಯಾಗಿದೆ ಎಂದು ವರದಿಯಲ್ಲಿ ತಿಳಿಸಲಾಗಿದೆ.

ಇದೇ ಸಂದರ್ಭದಲ್ಲಿ 500 ಮತ್ತು ಎರಡನೂರು ಮುಖಬೆಲೆಯ ನೋಟುಗಳ ಹರಿವಿನ ಪ್ರಮಾಣ ಮತ್ತು ಮುದ್ರಣ ಪ್ರಮಾಣ ಗಣನೀಯ ಪ್ರಮಾಣದಲ್ಲಿ ಏರಿಕೆ ಕಂಡಿದೆಯಂತೆ. ಇತ್ತೀಚಿಗೆ 2016ರ ಕೊನೆಯಲ್ಲಿ ನಮಗೆ ಪರಿಚಿತಗೊಂಡು ಇನ್ನೇನು ಎಲ್ಲರೂ ಅದಕ್ಕೆ ಹೊಂದಿಕೊಂಡು ಸಾಗುತ್ತಿರುವ ಸಂದರ್ಭದಲ್ಲಿ ಆರ್ಬಿಐ ನಿಂದ ಬಂದ ಈ ಸುದ್ದಿ ಆತಂಕಕ್ಕೆ ಎಲ್ಲೆಡೆ ಎಡೆಮಾಡಿಕೊಟ್ಟಿದೆ.

%d bloggers like this: