2021ರಲ್ಲಿ ಈ ರಾಶಿಯವರಿಗೆ ಅತ್ಯಧಿಕ ಖರ್ಚು ಹಾಗು ಕಡಿಮೆ ಆದಾಯ ಇರುತ್ತದೆ

ವೈಶಾಖ ನಕ್ಷತ್ರದ ನಾಲ್ಕು ಚರಣ, ಅನುರಾಧ ನಕ್ಷತ್ರದ ನಾಲ್ಕು ಪಾದ ಹಾಗೂ ಜ್ಯೇಷ್ಠ ನಕ್ಷತ್ರದ ನಾಲ್ಕು ಚರಣದಲ್ಲಿ ಜನಿಸಿದ ವ್ಯಕ್ತಿಗಳು ವೃಶ್ಚಿಕ ರಾಶಿಗೆ ಸೇರಿರುತ್ತಾರೆ. ಈ ವೃಶ್ಚಿಕ ರಾಶಿಯ ಅಧಿಪತಿ ಗ್ರಹವಾಗಿ ಕುಜ ಗ್ರಹವು ಆಳುತ್ತಾನೆ. ವೃಶ್ಚಿಕ ರಾಶಿಯವರ ವರ್ಷ ಭವಿಷ್ಯ ನೋಡುವುದಾದರೆ ಇವರಿಗೆ 2021ರಲ್ಲಿ ಅತ್ಯಧಿಕ ಖರ್ಚು ಕಡಿಮೆ ಆದಾಯವಿರುತ್ತದೆ. ಗ್ರಹಗಳು ತಮ್ಮ ನೀಚ ಸ್ಥಾನದಿಂದ ಬದಲಾವಣೆ ಪಡೆದಿದೆ ಎನ್ನಬಹುದು. ಕರ್ಮ ಅಧಿಪತಿಯಾದ ಶನಿಗ್ರಹವು ನಾಲ್ಕನೇ ಮನೆಯಲ್ಲಿ ಸ್ಥಾನವಾಗಿದ್ದು, ರಾಹು ಗ್ರಹವು 7ನೇ ಮನೆಯಲ್ಲಿ ಸ್ಥಾನವನ್ನು ಪಡೆದಿದ್ದಾನೆ. ಲಗ್ನದಲ್ಲಿ ಕೇತುಗ್ರಹ ಸಂಚಾರ ಮಾಡುತ್ತಿರುವುದರಿಂದ ವರ್ಷದ ಆರಂಭದಲ್ಲಿ ಆರ್ಥಿಕ ಸಮಸ್ಯೆಯನ್ನು ಎದುರಿಸಬೇಕಾಗುತ್ತದೆ. ತದನಂತರದ ದಿನಗಳಲ್ಲಿ ಆರ್ಥಿಕವಾಗಿ ಉತ್ತಮವಾದ ಪ್ರಗತಿಯನ್ನು ಕಾಣಬಹುದಾಗಿದೆ. ದಶಕಗಳ ಪರಿಶ್ರಮಕ್ಕೆ ಇದೀಗ ಉತ್ತಮವಾದ ಪ್ರತಿಫಲ ಲಭಿಸುತ್ತದೆ.

ಆದರೆ ಯಾವುದೇ ಕೆಲಸ ಆರಂಭಿಸಬೇಕಾದರೆ ಆತ್ಮವಿಶ್ವಾಸ ಜೊತೆಗೆ ಧೈರ್ಯದಿಂದ ಹೆಜ್ಜೆ ಹಾಕಿ ಜಯ ನಿಮ್ಮದಾಗುತ್ತದೆ. ನಿಮ್ಮ ಜೀವನದಲ್ಲಿ ಹೊಸದೊಂದು ತಿರುವು ಸಿಗುತ್ತದೆ. ವೃತ್ತಿಯಲ್ಲಿ ಸಹೋದ್ಯೋಗಿಗಳ ಬಗ್ಗೆ ಎಚ್ಚರವಹಿಸಿ, ಅನಾವಶ್ಯಕವಾದ ಚರ್ಚೆಗೆ ಗ್ರಾಸವಾಗುವ ಅಂತಹ ಹೇಳಿಕೆ ಮಾತುಗಳನ್ನು ನೀಡಬೇಡಿ. ಜುಲೈ ತಿಂಗಳಿನಲ್ಲಿ ನೀವು ಇಷ್ಟ ಪಟ್ಟ ಸ್ಥಳಕ್ಕೆ ವರ್ಗಾವಣೆ ಆಗಬಹುದು. ಇನ್ನು ಈ ವೃಶ್ಚಿಕ ರಾಶಿಯವರು ನೂತನವಾಗಿ ವ್ಯಾಪಾರ, ವ್ಯವಹಾರ ಆರಂಭಿಸಲು ಇದು ಸೂಕ್ತ ಸಮಯವಾಗಿದೆ. ಕೃಷಿ ಜಮೀನು, ವಾಹನ ಖರೀದಿ ಮಾಡುವ ಯೋಗವಿದ್ದು ನಿಮ್ಮ ವ್ಯಾಪಾರವನ್ನು ವಿಸ್ತಾರ ಮಾಡಬಹುದಾಗಿದೆ. ಕಲಾವಿದರ ವೃತ್ತಿ ಜೀವನದಲ್ಲಿ ಉತ್ತಮವಾದ ಅವಕಾಶಗಳು ಸಿಗಲಿದ್ದು, ಸಮಾಜದಲ್ಲಿ ಸ್ಥಾನಮಾನ ಗೌರವ ಲಭಿಸುತ್ತದೆ.

ಮನೆಯಲ್ಲಿ ಶುಭಕಾರ್ಯಗಳು ನಡೆಯಲಿವೆ, ಇದರಿಂದ ಎಷ್ಟೇ ಆದಾಯ ಬಂದರು ಸಹ ವಿಪರೀತ ಖರ್ಚು ಆಗುತ್ತದೆ. ವಿದ್ಯಾರ್ಥಿಗಳು ಶ್ರಮವಹಿಸಬೇಕಾದ ಅನಿವಾರ್ಯತೆಯಿದೆ. ಸ್ಪರ್ಧಾತ್ಮಕ ಪರೀಕ್ಷೆಗಳ ಅಭ್ಯರ್ಥಿಗಳು ಯಶಸ್ಸನ್ನು ಪಡೆಯುವ ಯೋಗವಿದ್ದು, ಇದರಿಂದ ಸರ್ಕಾರಿ ನೌಕರಿಯನ್ನು ಗಿಟ್ಟಿಸಿಕೊಳ್ಳಬಹುದು. ಪ್ರೇಮಿಗಳ ಜೀವನದಲ್ಲಿ ಒಂದಷ್ಟು ಅಡೆತಡೆಗಳು ಎದುರಾಗಲಿದೆ. ಕುಟುಂಬಸ್ಥರ ಒಪ್ಪಿಗೆ ಪಡೆದು ಮದುವೆಯಾಗಿ, ಆತುರದ ನಿರ್ಧಾರ ಒಳ್ಳೆಯದಲ್ಲ. ಕೋಪ ತ್ಯಜಿಸಿ, ಸೌಜನ್ಯ ವ್ಯಕ್ತಿತ್ವ ಬೆಳೆಸಿಕೊಳ್ಳಿ, ಅಂದುಕೊಂಡ ಕೆಲಸ ಕಾರ್ಯಗಳು ಸುಗಮವಾಗಿ ನಡೆಯುತ್ತದೆ.

ನಿಮ್ಮ ಜೀವನ ಶೈಲಿಯಲ್ಲಿ ಬದಲಾವಣೆ ಮಾಡಿಕೊಳ್ಳುವುದು ಅಗತ್ಯವಾಗಿದೆ. ಇನ್ನು ಸಕಲ ಸಮಸ್ಯೆಗಳ ಪರಿಹಾರಕ್ಕಾಗಿ ಪ್ರತಿ ಮಂಗಳವಾರ ಸುಂದರಕಾಂಡ ಪಾರಾಯಣ ಮಾಡಿಸುವುದರ ಜೊತೆಗೆ ಪ್ರತಿದಿನ ಬೆಳಗ್ಗೆ ಸೂರ್ಯ ನಮಸ್ಕಾರ ಮಾಡಿ. ಪ್ರತಿ ಶುಕ್ರವಾರ ಲಕ್ಷ್ಮಿ ದೇವಿಗೆ ತುಪ್ಪದ ದೀಪ ಹಚ್ಚಿ ಪೂಜೆ ಮಾಡಿ, ಸಾಧ್ಯವಾದರೆ ಪಕ್ಷಿಗಳಿಗೆ ಆಹಾರ ನೀಡುವುದನ್ನು ರೂಡಿಸಿಕೊಳ್ಳಿ ಒಳಿತಾಗುತ್ತದೆ ಎಂದು ಜ್ಯೋತಿಷ್ಯಶಾಸ್ತ್ರಜ್ಞರು ತಿಳಿಸುತ್ತಾರೆ.

%d bloggers like this: