ರಾಶಿ ಚಕ್ರಗಳಲ್ಲಿ ಆಗುವ ಬದಲಾವಣೆಗಳಿಂದಾಗಿ ಆಯಾ ರಾಶಿಗೆ ಸಂಬಂಧಪಟ್ಟಂತಹ ವ್ಯಕ್ತಿಗಳ ಜೀವನದಲ್ಲಿಯೂ ಪರಿಣಾಮ ಬೀರುತ್ತದೆ. ಪ್ರತಿಯೊಬ್ಬರ ಜೀವನದಲ್ಲಿ ನಡೆಯುವ ಒಳಿತು ಕೆಡುಕುಗಳು ಆಯಾ ಜಾತಕರಾಶಿಗಳು ಕೂಡ ಅವಲಂಬಿತವಾಗಿರುತ್ತದೆ. ಹಾಗಾದರೆ ಈ ವರ್ಷದಲ್ಲಿ ಅದೃಷ್ಟ ಹೊತ್ತು ತಂದಿರುವ ರಾಶಿಗಳು ಯಾವ್ಯಾವು ಎಂಬುದನ್ನು ತಿಳಿಯೋಣ.
ತುಲಾ ರಾಶಿ: ಈ ರಾಶಿಯವರಿಗೆ ಬಹಳಷ್ಟು ಧನ ಪ್ರಾಪ್ತಿಯಾಗುತ್ತದೆ. ಇವರಿಗೆ ಲಕ್ಷ್ಮಿ ದೇವಿಯ ಅನುಗ್ರಹ ಇರುವುದರಿಂದ ಆರ್ಥಿಕವಾಗಿ ಪ್ರಗತಿ ಕಾಣುತ್ತಾರೆ. ನಿಮ್ಮ ಇಚ್ಚೆಗಳು ಎಲ್ಲ ಈಡೇರುತ್ತದೆ. ನಿಮ್ಮ ಮನೆಯ ದೇವರಿಗೆ ಪೂಜೆ ಪುನಸ್ಕಾರ ಮಾಡುವುದರಿಂದ ಮತ್ತಷ್ಟು ಶುಭವಾಗುತ್ತದೆ. ನಿಮ್ಮ ವ್ಯಾಪಾರ ವ್ಯವಹರಾಗಳಲ್ಲಿ ಉತ್ತಮ ಧನಲಾಭ ಆಗುತ್ತದೆ.

ಮಿಥುನ: ಈ ರಾಶಿಯವರಿಗೆ ವ್ಯಾಪಾರ, ಉದ್ಯಮಗಳಲ್ಲಿ ಹಿಂದೆಂದೂ ಕಂಡಿರಿಯದ ಲಾಭವನ್ನು ಪಡೆಯಬಹುದಾಗಿದೆ. ಆದರೆ ನಿಮ್ಮ ಜೀವನದಲ್ಲಿ ನೀವು ತೆಗೆದುಕೊಳ್ಳುವ ನಿರ್ಧಾರ ನಿಮ್ಮ ಬದುಕಿನ ದಿಕ್ಕನೇ ಬದಲಾಯಿಸುತ್ತದೆ. ಆದ್ದರಿಂದ ಗುರು, ಹಿರಿಯರ ಸಲಹೆ ಸೂಚನೆಯ ಮೇರೆಗೆ ತೀರ್ಮಾನ ತೆಗೆದುಕೊಳ್ಳುವುದು ಉತ್ತಮವಾಗಿರುತ್ತದೆ. ಶ್ರೀಮಂತರಾಗುವ ಎಲ್ಲಾ ಅವಕಾಶಗಳು ನಿಮಗೆ ಸಿಗುತ್ತದೆ.

ಸಿಂಹ: ನೀವು ಮುಟ್ಟಿದ್ದೆಲ್ಲಾ ಚಿನ್ನವಾಗುವಂತಹ ಕಾಲ ಸನಿಹವಾಗಲಿದೆ. ಅತ್ಯಧಿಕ ಹಣಗಳಿಕೆ ಮಾಡಬಹುದಾಗಿದೆ, ಸಿಕ್ಕ ಅವಕಾಶವನ್ನು ಉಪಯೋಗಿಸಿಕೊಳ್ಳಿ, ಸಮಯ ವ್ಯರ್ಥ ಮಾಡಬೇಡಿ. ಜೊತೆಗೆ ಆರೋಗ್ಯ ಬಗ್ಗೆ ಕಾಳಜಿವಹಿಸಬೇಕಾಗುತ್ತದೆ. ಉದ್ಯೋಗದಲ್ಲಿ ಪ್ರಗತಿ ಕಾಣಬಹುದಾಗಿದೆ.
ಕನ್ಯಾ: ಈ ರಾಶಿಯ ವ್ಯಕ್ತಿಗಳು ಸ್ಪರ್ಧಾತ್ಮಕ ಪರೀಕ್ಷೆ ಬರೆದು ಫಲಿತಾಂಶಕ್ಕಾಗಿ ನಿರೀಕ್ಷೆ ಮಾಡುತ್ತಿರುವವರಿಗೆ ಶುಭಸುದ್ದಿ ಸಿಗಲಿದೆ. ನೀವು ಊಹಿಸಲಾಗದ ವ್ಯಕ್ತಿಗಳಿಂದ ಆರ್ಥಿಕ ಸಹಾಯವಾಗುತ್ತದೆ. ಸರ್ಕಾರಿ ಉದ್ಯೋಗ ದೊರೆಯುವ ಅವಕಾಶವಿದೆ. ಇನ್ನು ಖಾಸಗಿ ಉದ್ಯೋಗಸ್ಥರಿಗೆ ಅವರ ಕಾರ್ಯಕ್ಷಮತೆ ಗಮನಿಸಿದ ಮೇಲಾಧಿಕಾರಿಗಳಿಂದ ಪ್ರಶಂಸೆಯ ಜೊತೆಗೆ ಬಡ್ತಿ ಸಿಗುತ್ತದೆ.

ವೃಶ್ಚಿಕ ಮತ್ತು ಮೀನ ರಾಶಿಯವರಿಗೆ ಈ ವರ್ಷದಲ್ಲಿ ಲಕ್ಷ್ಮಿ ಅನುಗ್ರಹವಾಗಲಿದ್ದು, ಇಷ್ಟು ವರ್ಷಗಳ ಪರಿಶ್ರಮಕ್ಕೆ ಉತ್ತಮವಾದ ಪ್ರತಿಫಲ ದೊರೆಯುತ್ತದೆ. ನಿಮಗೆ ಜೀವನದಲ್ಲಿ ಹಲವಾರು ಅವಕಾಶಗಳಿವೆ, ಆಯ್ಕೆ ನಿಮ್ಮ ಕೈಯಲ್ಲಿರುತ್ತದೆ. ಆದರೆ ನಿಮ್ಮ ಕೋಪವನ್ನು ನಿಯಂತ್ರಿಸಿಕೊಳ್ಳಿ, ಇಲ್ಲವಾದಲ್ಲಿ ಬರುವ ಅದೃಷ್ಟವನ್ನು ಕಳೆದುಕೊಳ್ಳಬಹುದು ಎಚ್ಚರವಿರಲಿ. ವೃಷಭ ಮತ್ತು ಕಟಕ ರಾಶಿಯವರಿಗೆ ಈ ಬಾರಿ ಗಜಕೇಸರಿ ಯೋಗವಿದ್ದು,ಬಂದ ಅವಕಾಶಗಳನ್ನು ನಿರ್ಲಕ್ಷ್ಯ ಮಾಡಬೇಡಿ. ಸ್ತ್ರೀ ದೋಷದಿಂದ ಮುಕ್ತಿಗೊಳ್ಳುತ್ತೀರಿ. ಇಷ್ಟು ವರ್ಷದಿಂದ ಅನುಭವಿಸಿದ ನಿಮ್ಮ ಕಷ್ಟಗಳಿಂದ ಮುಕ್ತಿಗೊಳ್ಳಬಹುದಾಗಿದೆ. ಆರ್ಥಿಕವಾಗಿ ವಿವಿಧ ಮೂಲಗಳಿಂದ ಧನಗಾಮನವಾಗುತ್ತದೆ. ಕುಟುಂಬದಲ್ಲಿ ಸುಖ, ಸಂತೋಷ ಲಭಿಸಿ ಜೀವನ ಸುಗುಮವಾಗಿ ಸಾಗುತ್ತದೆ.