ಈ ವರ್ಷ ಭವಿಷ್ಯದಲ್ಲಿ ಕೆಲವು ದ್ವಾದಶ ರಾಶಿಗಳಲ್ಲಿ ಗುರು ಬಲವಿದ್ದರು ಕೂಡ ಶನಿಗ್ರಹದ ನೇರದೃಷ್ಠಿ ಪ್ರಭಾವ ದಿಂದಾಗಿ ಶುಭಫಲ ಪಡೆಯಲಾಗದ ರಾಶಿಯಲ್ಲಿ ಧನಸ್ಸು ರಾಶಿ ಕೂಡ ಒಂದಾಗಿದೆ, ಈ ರಾಶಿಯ ಅಧಿಪತಿ ಗುರುವಾಗಿದ್ದರಿಂದ ಒಂದಷ್ಟು ಶುಭಫಲಗಳನ್ನು ನಿರೀಕ್ಷೆ ಮಾಡಬಹುದಾಗಿತ್ತು, ಆದರೆ ಶನಿಗ್ರಹದ ಪ್ರಭಾವ ಇಲ್ಲಿ ಈ ಧನು ರಾಶಿಯವರಿಗೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ. ಈಗಾಗಲೇ ಧನುರಾಶಿ ಅವರಿಗೆ ಡಿಸೆಂಬರ್ 16ರಲ್ಲಿ ಧನು ಸಂಕ್ರಮಣ ಕಾಲ ಆರಂಭವಾಗಿ ಅದರ ಪಾಪಪುಣ್ಯಗಳನ್ನು ಅನುಭವಿಸಿದ್ದಾರೆ. ಇವರು ಪೂರ್ವಾಷಾಡ ಮತ್ತು ಉತ್ತರಾಷಾಡ ಗಳ ಮೂಲವಾಗಿದ್ದು, ಧನು ರಾಶಿಯ ಒಂದಷ್ಟು ಜನರಿಗೆ ಅದ್ಭುತವಾದ ವರ್ಷವಾಗಲಿದೆ ಕಾರಣ ಗುರುಬಲ ಇವರ ಜೊತೆಯಲ್ಲಿದೆ, ಆದರೆ ಅವರು ಕಡ್ಡಾಯವಾಗಿ ಶನಿಶಾಂತಿ ಮಾಡಿಸಬೇಕಾಗಿದೆ. ಶನಿ ಶಾಂತಿ ಮಾಡಿಸುವುದರಿಂದ ನಿಮ್ಮ ಎಲ್ಲಾ ಸಂಕಷ್ಟ ನಿವಾರಣೆ ಮಾಡಿಕೊಳ್ಳಬಹುದು. ಆದರೆ ಒಂದಷ್ಟು ಶಾರೀರಿಕ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಇನ್ನು ಐದನೇ ಮನೆಯಲ್ಲಿ ಕುಜಗ್ರಹ ಸ್ಥಾನ ಪಡೆದಿರುವುದರಿಂದ ಅರಣ್ಯಾಧಿಕಾರಿಗಳಿಗೆ ಕ್ಷತ್ರಿಯರಿಗೆ, ಬಡ್ತಿ ದೊರೆತು ಜೀವನದಲ್ಲಿ ಪ್ರಗತಿ ಕಾಣಬಹುದಾಗಿದೆ.

ಈ ಸಾರ್ವಜನಿಕ ಸೇವೆಗಳಾದ ಪೊಲೀಸ್ ಮತ್ತು ಸೇನೆಯಲ್ಲಿರುವವರೆಗೆ ಸಮಾಜದಲ್ಲಿ ಸ್ಥಾನ ಮಾನ ದೊರೆತು ವೃತ್ತಿಯಲ್ಲಿ ಪ್ರಗತಿ ದೊರೆಯುತ್ತವೆ. ಧನು ರಾಶಿ ಅವರು ಓಂ ಹ್ರೂಂ ಆದಿತ್ಯಾಯ ನಮಃ ಎಂಬ ಮಂತ್ರ ಪಠಿಸುವುದರಿಂದ ತಾತ್ಕಾಲಿಕ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬಹುದಾಗಿದೆ. ಒಟ್ಟಾರೆಯಾಗಿ ಈ ಧನು ರಾಶಿಯವರಿಗೆ 2021ರ ವರ್ಷ ಮಿಶ್ರ ಫಲದಿಂದ ಕೂಡಿದ್ದಾಗಿದೆ. ಜೊತೆಗೆ ಸಾಡೇಸಾತಿಯ ಕಡೆಯ ಭಾಗವಾಗಿರುವುದರಿಂದ ಅಧಿಪತಿ ಗ್ರಹವಾಗಿರುವ ಗುರುವು ಸಹ ಅಸ್ತಂಗತವಾಗುತ್ತಾನೆ. ಹೀಗಾಗಿ ಏಪ್ರಿಲ್ ವರೆಗೂ ನಿಮಗೆ ಅದೃಷ್ಟವೆಂಬುದು ಕಷ್ಟಸಾಧ್ಯ ಎಂದು ಹೇಳಬಹುದು.

ಏಪ್ರಿಲ್ ತಿಂಗಳ ನಂತರ ನಿಮ್ಮ ವ್ಯಾಪಾರ ವ್ಯವಹಾರಗಳು ಸುಗಮವಾಗಿ ನಡೆಯುತ್ತವೆ. ಇನ್ನು ಮಹಿಳೆಯರು ಸ್ವಯಂ ಉದ್ಯೋಗ ಆರಂಭ ಮಾಡಲು ಇದು ಸೂಕ್ತ ಸಮಯವಾಗಿದೆ. ಇನ್ನು ಅವಿವಾಹಿತರಿಗೆ ವಿವಾಹವಾಗುವ ಯೋಗವಿದೆ. ಮಕ್ಕಳಿಲ್ಲದ ದಂಪತಿಗಳಿಗೆ ಸಂತಾನ ಯೋಗವಿದೆ, ಪುಣ್ಯಕ್ಷೇತ್ರಗಳ ಭೇಟಿಯಿಂದ ದಂಪತಿಗಳು ಸುಖ, ಶಾಂತಿ, ನೆಮ್ಮದಿಯಿಂದ ಬದುಕನ್ನು ಕಟ್ಟಿಕೊಳ್ಳುತ್ತಾರೆ. ಆದರೆ ನಿಮ್ಮ ಮಕ್ಕಳಿಂದ ನಿಮಗೆ ತೊಂದರೆ ಉಂಟಾಗುವ ಸಾಧ್ಯತೆ ಇರುತ್ತದೆ. ಆದ್ದರಿಂದ ದಕ್ಷಿಣಾಮೂರ್ತಿಯ ದರ್ಶನ ಪಡೆದು, ದೇವರಿಗೆ ಅಭಿಷೇಕ ಮಾಡಿಸುವುದು ಉತ್ತಮ ಪರಿಹಾರ ಮಾರ್ಗವಾಗಿದೆ. ನಿಮಗೆ ಹಳದಿ ಬಣ್ಣ ಶುಭ ತರುತ್ತದೆ. ನಿಮ್ಮ ಶುಭ ಸಂಖ್ಯೆಗಳು 3 ಮತ್ತು 5ಎಂದು ಜ್ಯೋತಿಷ್ಯದಲ್ಲಿ ತಿಳಿಸಲಾಗಿದೆ.