2021 ಈ ರಾಶಿಯವರಿಗೆ ಬಹಳ ಅದೃಷ್ಟದ ವರ್ಷ, ಶನಿ ಹಾಗು ಗುರು ಅನನ್ಯ ಸಂಯೋಜನೆ

ಸಿಂಹ ರಾಶಿಯವರಿಗೆ 2021ನೇಯ ವರ್ಷದಲ್ಲಿ ಯಾವೆಲ್ಲಾ ಅದೃಷ್ಟ ಗಳಿವೆ ಆದರೆ ಇದರ ಜೊತೆಗೆ ಒಂದಿಷ್ಟು ಕಿಟಕಿಗಳು ಕೂಡ ಇದೆ ಆದ್ದರಿಂದ ಏನೇನು ಎಚ್ಚರ ವಹಿಸಬೇಕಾದ ಅಗತ್ಯವಿದೆ ಎಂಬುದನ್ನು ತಿಳಿದು ಕೊಳ್ಳಬೇಕಾಗಿದೆ. ಸಿಂಹ ರಾಶಿಯವರಿಗೆ ಮುಂದಿನ ವರ್ಷದಲ್ಲಿ ನಿಮ್ಮ ಜೀವನದಲ್ಲಿ ಹಲವಾರು ಬದಲಾವಣೆಗಳು ಆಗುತ್ತದೆ. ಅದರಲ್ಲೂ ವೃತ್ತಿಜೀವನ, ಕೌಟುಂಬಿಕ, ಆರ್ಥಿಕ, ವೈವಾಹಿಕ ಜೀವನದಲ್ಲಿ ಕೊಂಚ ಬದಲಾವಣೆಯಾಗುತ್ತದೆ. ಸಿಂಹ ರಾಶಿಯವರು ಮೂಲತಃ ಉದಾರ ಮನಸ್ಸು ಉಳ್ಳವರು ಮತ್ತು ಉತ್ತಮ ಸ್ವಭಾವ ಹೊಂದಿರುವವರು.

ಯಾವುದೇ ರೀತಿಯ ಅನಾವಶ್ಯಕ ವಿಷಯಗಳಿಗೆ ಗಮನಕೊಡದೆ, ಇನ್ನೊಬ್ಬರ ಬಗ್ಗೆ ಮಾತನಾಡದೆ ತಾವಾಯಿತು ತಮ್ಮ ಕೆಲಸವಾಯಿತು ಎಂಬ ಸ್ವಭಾವದವರು. ಅವರಿಗೆ ಸಾಧ್ಯವಾದರೆ ಒಳಿತು ಮಾಡುವುದು ಅಸಾಧ್ಯವಾದರೆ ದೂರವಿರುವುದು ಇವರ ವ್ಯಕ್ತಿತ್ವವಾಗಿರುತ್ತದೆ. ಇವರು ಹೆಚ್ಚಾಗಿ ಸ್ವಾಭಿಮಾನದವರು ಇನ್ನೊಬ್ಬರನ್ನು ಅವಲಂಬಿಸಿರುವುದಿಲ್ಲ. ಇವರು ಜೀವನದಲ್ಲಿ ಮಹತ್ವಕಾಂಕ್ಷೆ ಇಟ್ಟುಕೊಂಡಿರುತ್ತಾರೆ ಜೊತೆಗೆ ಆತ್ಮಸ್ಥೈರ್ಯ ಇವರಿಗೆ ಯಶಸ್ಸು ತಂದುಕೊಡುತ್ತದೆ, ಇವರು ಯಾವುದೇ ಕೆಲಸವನ್ನು ಒಮ್ಮೆ ಹಿಡಿದರೆ ಅದನ್ನು ಸಂಪೂರ್ಣವಾಗಿ ಮುಗಿಸುವವರೆಗೆ ಕೈ ಚೆಲ್ಲುವುದಿಲ್ಲ.

ಅದು ಎಂತಹ ಸಮಸ್ಯೆ ಆದರೂ ಸಹ ಎದುರಿಸಿ ಸ್ವತಂತ್ರರಾಗಿ ಏನು ಬೇಕಾದರೂ ಮಾಡುತ್ತಾರೆ. ಈ ವರ್ಷ ಇವರಿಗೆ ನೆರಳಿನ ಗ್ರಹವಾದ ರಾಹು ಕೇತು ಗ್ರಹಗಳು 4 ಮತ್ತು 6ನೇಯ ಮನೆಯಲ್ಲಿ ಪ್ರವೇಶಿಸಿದ್ದಾರೆ. ಶನಿ ಮತ್ತು ಗುರು ಗ್ರಹಗಳ ಅನನ್ಯ ಸಂಯೋಜನೆಯಿಂದ ಇವರಿಗೆ ಅದೃಷ್ಟ ಒಲಿದು ಬರುತ್ತದೆ. ಶನಿಗ್ರಹವು ಏಪ್ರಿಲ್ ತಿಂಗಳ ಮತ್ತು ಮೇ ತಿಂಗಳಲ್ಲಿ 11 ಮತ್ತು 12ನೇ ಮನೆಯನ್ನು ಪ್ರವೇಶಿಸುತ್ತದೆ. ಈ ಸಂದರ್ಭದಲ್ಲಿ ವೃತ್ತಿಜೀವನ ಜಾಗೃತಿ ವಹಿಸ ಬೇಕಾಗುತ್ತದೆ. ಇವರಿಗೆ ಎಷ್ಟೇ ಶತ್ರುಗಳು ಇದ್ದರೂ ಸಹ ಅವರನ್ನೆಲ್ಲ ಎದುರಿಸಿ ಸಮಯಕ್ಕೆ ತಕ್ಕಂತೆ ಕೆಲಸ ಕಾರ್ಯಗಳನ್ನು ಪೂರ್ಣಗೊಳಿಸಿ ತಮ್ಮ ಪ್ರಾಬಲ್ಯವನ್ನು ಮೆರೆಯುತ್ತಾರೆ.

ಆರ್ಥಿಕ ವಿಚಾರದಲ್ಲಿ ಇವರಿಗೆ ಅಧಿಕ ಖರ್ಚು ಬೀಳುತ್ತದೆ. ಇನ್ನು ವಿದ್ಯಾರ್ಥಿಗಳ ಜೀವನಕ್ಕೆ ನೋಡಿದರೆ ವಿದ್ಯಾರ್ಥಿಗಳು ಪರೀಕ್ಷೆಯಲ್ಲಿ ಯಶಸ್ಸಾಗಲು ಹೆಚ್ಚು ಶ್ರಮ ಪಡ ಬೇಕಾಗುತ್ತದೆ. ವಿದ್ಯಾರ್ಥಿಗಳು ಹೆಚ್ಚು ಸಮಯವನ್ನು ಅಧ್ಯಯನಕ್ಕಾಗಿ ಬಳಸಬೇಕಾಗುತ್ತದೆ. ಕುಟುಂಬ ಸದಸ್ಯರು ಮನೆಯ ಹಿರಿಯರ ಮಾತಿಗೆ ತಲೆ ಬಾಗ ಬೇಕಾಗುತ್ತದೆ. ವೈವಾಹಿಕ ಜೀವನದ ವಿಚಾರಕ್ಕೆ ಬರುವುದಾದರೆ ನಿಮ್ಮ ಸಂಗಾತಿಯು ನಿಮ್ಮ ಬೆಂಬಲಕ್ಕೆ ಸದಾ ಬೆನ್ನೆಲುಬಾಗಿ ನಿಂತಿರುತ್ತಾರೆ. ವೃತ್ತಿ ಜೀವನದಲ್ಲಿ ಕೆಲಸ ಕಾರ್ಯಗಳು ತೊಂದರೆ ತಾಪತ್ರಯ ವಿಲ್ಲದೆ ನಿರ್ವಿಘ್ನವಾಗಿ ಸಾಗುತ್ತದೆ.

ದಂಪತಿಗಳಿಗೆ ಮಕ್ಕಳಾಗದೆ ಇರುವವರು ಮುಂದಿನ ವರ್ಷ ಸಂತಾನ ಪ್ರಾಪ್ತಿ ಯೋಗವಿದೆ. ಮಕ್ಕಳಿರುವವರಿಗೆ ಮಕ್ಕಳ ದುರ್ಬಲ ಸಮಸ್ಯೆಗಳು ಕಾಡುತ್ತದೆ. ಇನ್ನು ಪ್ರೀತಿ ಪ್ರೇಮ ವಿಚಾರದಲ್ಲಿ ಸಿಲುಕಿರುವವರು ಮನೆಯ ಹಿರಿಯರನ್ನು ವಿರೋಧಿಸಬೇಕಾಗುತ್ತದೆ ಆದ್ದರಿಂದ ಈ ವಿಚಾರದಲ್ಲಿ ಎಚ್ಚರವಹಿಸಬೇಕು. ಜೀವನದಲ್ಲಿ ಏಕಾಂಗಿಯಾಗಿ ಒಬ್ಬಂಟಿ ಯಾಗಿರುವವರು ವಿಶೇಷ ವ್ಯಕ್ತಿಯನ್ನು ಭೇಟಿಯಾಗಿ ಆ ವ್ಯಕ್ತಿಯಿಂದ ನಿಮ್ಮ ಜೀವನವು ಹೊಸದೊಂದು ತಿರುವು ಪಡೆದುಕೊಳ್ಳುತ್ತದೆ. ಈ ವರ್ಷ ಹೆಚ್ಚು ಜಾಗೃತಿಯ ಜೊತೆಗೆ ನಿಮ್ಮ ಆರೋಗ್ಯದ ಕಡೆ ನಿಗಾ ವಹಿಸಿದರೆ ಇನ್ನು ಉತ್ತಮವಾಗಿರುತ್ತದೆ. ಉಳಿದಂತೆ ನಿಮ್ಮ ಭವಿಷ್ಯ ಮುಂದಿನ ವರ್ಷ ಸುಗಮವಾಗಿ ಉಜ್ವಲವಾಗಿ ಸಾಗುತ್ತದೆ.

%d bloggers like this: