2021 ಈ ರಾಶಿಯವರಿಗೆ ಬಹಳ ಉತ್ತಮವಾದ ವರ್ಷ, ಸಾಕಷ್ಟು ಅಂದುಕೊಂಡ ಕೆಲಸಗಳು ಆಗಲಿವೆ

ಹೊಸ ವರ್ಷ ಆರಂಭಕ್ಕೆ ಇನ್ನು ಕೆಲವು ಗಂಟೆಗಳಿವೆ. ಈ ಕಾಲ, ಸಮಯ ಸಂಧರ್ಭಗಳಲ್ಲಿ ಗತಿಸುವ ಕೆಲಸ ಕಾರ್ಯಗಳು ಆದಷ್ಟು ಶ್ರೇಷ್ಠಕರವಾಗಿರುತ್ತದೆ, ಯಾವುದೇ ಶುಭಕಾರ್ಯಗಳನ್ನು ಆರಂಭಿಸುವ ಮೊದಲು ರಾಹು ಕಾಲ ಮುಗಿದ ನಂತರ ಅದರ ಪ್ರಕ್ರಿಯೆಗಳು ನಡೆಯುತ್ತದೆ. ಹಾಗೇ ನಮ್ಮ ಮನುಷ್ಯ ಜೀವನವು ಸಹ ಜಾತಕ ರಾಶಿಗಳ ಪ್ರಭಾವದಿಂದ ಒಳಿತು ಕೆಡುಕುಗಳು ಸಂಭವಿಸುತ್ತವೆ. 2021ರ ದ್ವಾದಶ ರಾಶಿಗಳು ಜನರ ಭವಿಷ್ಯ ವನ್ನು ತಿಳಿಸುತ್ತದೆ. ಈ 2021ರ ವರ್ಷದಲ್ಲಿ ಧನು ರಾಶಿಯ ವ್ಯಕ್ತಿಗಳ ಫಲಾಫಲಗಳನ್ನು ನೋಡುವುದಾದರೆ ರವಿ ಮತ್ತು ಬುಧ ಒಂದನೇಯ ಮನೆಯಲ್ಲಿ ಸ್ಥಾನ ಅಲಂಕರಿಸಿದರೆ ಗುರು ಮತ್ತು ಶನಿಯು ಎರಡನೆ ಮನೆ ಹೀಗೆ ಕ್ರಮವಾಗಿ ರಾಹು 6 ನೇ, ಕುಜ 5ನೆ ಹಾಗೂ ಕೇತು 12 ನೇಯ ಮನೆಯಲ್ಲಿ ತಮ್ಮ ಸ್ಥಾನ ಹೊಂದಿದೆ. ಇದರ ಪರಿಣಾಮವಾಗಿ ಧನು ರಾಶಿಯ ವ್ಯಕ್ತಿಗಳಿಗೆ 2021 ಉತ್ತಮವಾದ ವರ್ಷ ಎನ್ನಬಹುದಾಗಿದೆ.

ಧನು ರಾಶಿಯವರು ತುಂಬಾ ದಿನಗಳಿಂದ ಒದ್ದಾಡುತ್ತಿದ್ದ ಕೋರ್ಟು ಕಛೇರಿ ಕೆಲಸಗಳಲ್ಲಿ ಜಯ ಲಭಿಸುತ್ತದೆ, ವ್ಯಾಪಾರದಲ್ಲಿ ಧನಲಾಭ ಆಗಲಿದ್ದು, ಹಣದ ಒಳ ಹರಿವು ಹೆಚ್ಚಾಗಿ ಹೊಸದೊಂದು ಉದ್ಯಮಕ್ಕೆ ಹೆಜ್ಜೆ ಇಡುವ ಸಾಧ್ಯತೆ ಇದೆ‌. ಕುಟುಂದಲ್ಲಿ ಹಿರಿಯರು ನಿಮಗೆ ಪ್ರೋತ್ಸಾಹದೊಂದಿಗೆ ಸಲಹೆ ಸೂಚನೆ ನೀಡುತ್ತಾರೆ. ಮನೆಯಲ್ಲಿ ಶುಭಕಾರ್ಯಗಳು ನಡೆಯುತ್ತವೆ.

ತಂದೆ ತಾಯಿಗಳಿಗೆ ಸಮಾಜದಲ್ಲಿ ಕೀರ್ತಿ, ಗೌರವ ತಂದುಕೊಡುವಂತಹ ಕೆಲಸ ಕಾರ್ಯಗಳನ್ನು ನೀವು ಸಾಧಿಸುತ್ತೀರಿ, ನಿಮ್ಮ ಉದ್ಯೋಗದಲ್ಲಿ ಪ್ರಗತಿಕಾಣಬಹುದಾಗಿದೆ. ಮಿತ್ರರಿಗೆ ಸಹಾಯ ಮಾಡುತ್ತೀರಿ ಅವರ ಕಷ್ಟಗಳಿಗೆ ಸ್ಪಂದಿಸಿ ಅವರನ್ನು ಕೂಡ ನಿಮ್ಮೊಟ್ಟಿಗೆ ಕರೆದೊಯ್ಯುತ್ತೀರಿ. ನಿಮಗೆ ಅನಿರೀಕ್ಷಿತ ಕೆಟ್ಟಗಳಿಗೆ ಸಂಭವಿಸಿ ನಿಮಗೆ ಚಿಂತೆಯು ಆವರಿಸಿಕೊಂಡು ಜೀವನದಲ್ಲಿ ನಿರುತ್ಸಾಹ ಮೂಡುವಂತಹ ಸಂಧರ್ಭ ಬರುತ್ತದೆ. ಆದ್ದರಿಂದ ಕೊಂಚ ತಾಳ್ಮೆಯಿಂದ ವರ್ತಿಸಿ ಆತುರ ಬೇಡ.

ನಿಮ್ಮಲ್ಲಿರುವ ದೋಷ ನಿವಾರಣೆಗೆ ನಿಮ್ಮ ಸಮಸ್ಯೆಯ ಪರಿಹಾರಕ್ಕಾಗಿ ಪ್ರತಿ ಸೋಮವಾರ ಮತ್ತು ಶುಕ್ರವಾರ ಶಿವನ ಆರಾಧನೆ ಮಾಡಿ ಶಿವನಿಗೆ ಪ್ರಿಯವಾದ ಬಿಲ್ವ ಪತ್ರೆ ಅರ್ಪಿಸಿ ಶಿವನ ಅಷ್ಟೋತ್ತರವನ್ನು ಪಠಿಸಿದರೆ ಒಳಿತಾಗುತ್ತದೆ. ನಿಮ್ಮ ಜಾತಕ ರಾಶಿಯ ಶುಭ ಸಂಖ್ಯೆಗಳು 1,8,9,16,27 ಮತ್ತು 28 ಆಗಿದೆ ಆದ್ದರಿಂದ ನಿಮ್ಮ ಯಾವುದೇ ರೀತಿಯ ಮಹತ್ತರ ನಿರ್ಧಾರ, ಕೆಲಸ ಕಾರ್ಯಗಳನ್ನು ಈ ನಿಮ್ಮ ಅದೃಷ್ಟದ ದಿನಾಂಕ ಗಳಿಂದ ಆರಂಭಿಸಿ ಎಂದು ರಾಶಿಚಕ್ರದ ಫಲಾಫಲಗಳ ಅನುಗುಣವಾಗಿ ತಿಳಿಸಲಾಗಿದೆ.

%d bloggers like this: