2021 ಜನೆವರಿ ಮೊದಲ ಎರಡು ವಾರಗಳ ಎಲ್ಲಾ ರಾಶಿಯವರ ಭವಿಷ್ಯ ಹೀಗಿರಲಿದೆ

ಹೊಸ ವರ್ಷದ ಮೊದಲನೇಯ ವಾರ ಭವಿಷ್ಯ ಯಾವ ರಾಶಿಯವರಿಗೆ ಯಾವ ಫಲಾಫಲಗಳು ಲಭಿಸಲಿವೆ ಎಂದು ತಿಳಿಯೋಣ ಮೇಷ: ಈ ರಾಶಿಯವರಿಗೆ ನಿಮ್ಮ ಕೆಲಸ ಕಾರ್ಯಗಳಿಗೆ ಅಡ್ಡಿ ಆತಂಕಗಳು ಎದುರಾಗುತ್ತವೆ ಹಾಗೂ ನಿಮ್ಮ ವೃತ್ತಿಯಲ್ಲಿ ನಿಮಗೆ ನಿರುತ್ಸಾಹ ಮೂಡುತ್ತದೆ. ನಿಮ್ಮ ಕುಟುಂಬ ಅಥವಾ ನೆರೆ ಹೊರೆಯವರಿಂದ ನಿಮಗೆ ಅನಾವಶ್ಯಕವಾಗಿ ಕಿರಿಕಿರಿ ಉಂಟಾಗುತ್ತದೆ, ನೀವು ದುರ್ಗಾಷ್ಷ್ಟೋತ್ತರಗಳನ್ನು ಪ್ರತಿದಿನ ಪಠಿಸುವುದರಿಂದ ಒಳ್ಳೆದಾಗುತ್ತದೆ ಮತ್ತು ನಿಮಗೆ ಭಾನುವಾರ, ಮಂಗಳವಾರ ಮತ್ತು ಗುರುವಾರ ಶುಭದಿನಗಳಾಗಿವೆ.

ವೃಷಭ ರಾಶಿ: ಈ ರಾಶಿಯವರಿಗೆ ಈ ವಾರ ಉತ್ತಮವಾಗಿದ್ದು, ಇವರು ಶಾಂತತೆ ಮತ್ತು ಸರಳತೆಯಿಂದ ಮಾಡುವಂತಹ ಕೆಲಸ ಕಾರ್ಯಗಳು ಯಶಸ್ವಿ ಯಾಗುತ್ತವೆ. ಇನ್ನು ಸರ್ಕಾರಿ ಕೆಲಸದಲ್ಲಿರುವವರಿಗೆ ಹೆಚ್ಚು ಗೌರವ ಪ್ರಾಶಸ್ತ್ಯ ಸಿಗುತ್ತದೆ ಜವಳಿ ವ್ಯಾಪಾರ ವ್ಯವಹಾರ ಗಳಲ್ಲಿ ಅಧಿಕ ಲಾಭ ಪಡೆಯುತ್ತಾರೆ. ರಾಜಕೀಯ ಕ್ಷೇತ್ರದಲ್ಲಿ ಇರುವವರಿಗೆ ಸಮಾಜದಲ್ಲಿ ಸ್ಥಾನ ಮಾನ ಮನ್ನಣೆ ದೊರೆಯುತ್ತದೆ.

ಮಿಥುನ: ಈ ರಾಶಿಯವರು ಶ್ರದ್ಧಾಭಕ್ತಿಯಿಂದ ತಮ್ಮ ಕೆಲಸ ಕಾರ್ಯಗಳನ್ನು ನಿರ್ವಹಿಸಿದರೆ ಶೀಘ್ರವಾಗಿ ಪ್ರತಿಫಲ ಪಡೆಯುತ್ತಾರೆ, ಇನ್ನು ಪ್ರೀತಿ ಪ್ರೇಮ ವಿಚಾರದಲ್ಲಿರುವವರಿಗೆ ಶುಭಸುದ್ದಿ ಲಭಿಸಲಿವೆ. ದಂಪತಿಗಳಲ್ಲಿ ವಿರಹ ದೂರವಾಗಿ ಪ್ರೀತಿ ವಾತ್ಸಲ್ಯ ಹೆಚ್ಚಾಗುತ್ತದೆ. ಬುಧವಾರ, ಶುಕ್ರವಾರ, ಭಾನುವಾರ ನಿಮಗೆ ಶುಭದಿನಗಳಾಗಿವೆ.

ಕರ್ಕಾಟಕ: ಈ ರಾಶಿಯವರಿಗೆ ಈ ವಾರ ಸಾಧಾರಣವಾಗಿದ್ದು ಪ್ರೀತಿ ಪ್ರೇಮ ನಿವೇದನೆ ನಿರೀಕ್ಷೆ ಇದ್ದವರಿಗೆ ಒಮ್ಮತವಿಲ್ಲದ ನಿರಾಸೆ ಕಾಣುತ್ತಾರೆ, ನೀವು ಅನಾವಶ್ಯಕವಾದ ವಿಚಾರಗಳಿಗೆ ಹೋಗಬೇಡಿ. ಮಾತಿನಲ್ಲಿ ಹಿಡಿತ ಇಟ್ಟುಕೊಳ್ಳಿ ಇಲ್ಲವಾದಲ್ಲಿ ನಿಮ್ಮ ಗೌರವಕ್ಕೆ ಧಕ್ಕೆ ಉಂಟಾಗುತ್ತದೆ. ನಿಮಗೆ ಈ ವಾರ ಸಾಧಾರಣ ಇರುವುದರಿಂದ ನೀವು ನಿಮ್ಮ ಶಕ್ತಿ ಅನುಸಾರ ಬಡವರಿಗೆ ದಾನ ಧರ್ಮ ಮಾಡಿ ಇದರಿಂದ ನಿಮ್ಮ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬಹುದಾಗಿದೆ. ಸೋಮವಾರ ಮಂಗಳವಾರ ಗುರುವಾರ ನಿಮಗೆ ಶುಭ ದಿನಗಳಾಗಿವೆ.

ಸಿಂಹ: ಈ ರಾಶಿಯವರಿಗೆ ಉತ್ತಮವಾಗಿದ್ದು ನಿಮ್ಮ ಶತ್ರುಗಳಿಗೆ ಈ ಭಾರಿ ಮುಖಭಂಗವಾಗುತ್ತದೆ ನಿಮ್ಮ ವಿರುದ್ಧ ಮಾಡುವ ಷಡ್ಯಂತ್ರಗಳು ಅವರಿಗೆ ತಿರುಗುಬಾಣವಾಗುತ್ತದೆ ಕೋರ್ಟು ಕಚೇರಿ ಸಮಸ್ಯೆಗಳಿಂದ ಪಾರಾಗುತ್ತೀರಿ. ಗೃಹ ಬಳಕೆಯ ವಸ್ತುಗಳನ್ನು ಖರೀದಿ ಮಾಡುತ್ತೀರಿ. ಕುಟುಂಬದಲ್ಲಿ ನೆಮ್ಮದಿ ಸಿಗುತ್ತದೆ ನಿಮಗೆ ಮಂಗಳವಾರ ಗುರುವಾರ ಉತ್ತಮ ದಿನಗಳಾಗಿವೆ.

ಕನ್ಯಾ: ಈ ರಾಶಿಯವರಿಗೆ ಈ ವಾರ ಉತ್ತಮವಾಗಿದ್ದು ನೀವು ನೀಡಿದಂತಹ ಸಾಲದ ಹಣವು ನಿಮಗೆ ಮರಳಿ ಬರುತ್ತದೆ, ಉದ್ಯೋಗದಲ್ಲಿ ಬಡ್ತಿ ದೊರೆಯುತ್ತದೆ. ನಿರುದ್ಯೋಗ ಯುವಕ ಯವತಿಯರಿಗೆ ಉದ್ಯೋಗ ಪ್ರಾಪ್ತಿಯಾಗುತ್ತದೆ. ಸಂಗೀತ, ಕಲೆ, ನಾಟಕ, ನೃತ್ಯ ಕ್ಷೇತ್ರದಲ್ಲಿರುವವರಿಗೆ ಸ್ಥಾನ ಮಾನ ಮನ್ನಣೆ ಗೌರವ ಲಭಿಸುತ್ತದೆ. ಇವರಿಗೆ ಬುಧವಾರ, ಶುಕ್ರವಾರ, ಭಾನುವಾರ ಶುಭದಿನಗಳಾಗಿವೆ.

ತುಲಾ: ಈ ರಾಶಿ ವರಿಗೆ ಈ ವಾರ ಸಾಧಾರಣವಾಗಿದ್ದು ನಿಮ್ಮ ಮಕ್ಕಳ ಬಗ್ಗೆ ಜಾಗೃತಿ ವಹಿಸಬೇಕಾಗಿದೆ, ಬೇಡವಾದ ವಿಚಾರಕ್ಕೆ ನೀವು ಹೋಗುವುದರಿಂದ ಮೈಮೇಲೆ ಸಮಸ್ಯೆಗಳನ್ನ ಎಳೆದು ಕೊಂಡಂತಾಗುತ್ತದೆ. ಯಾರೊಂದಿಗೂ ವಾದ ಬೇಡ ಹಿಲಿಯರಿಗೆ ಗೌರವ ನೀಡಿ ಈಶ್ವರನಿಗೆ ಪಂಚಾಮೃತಾಭಿಷೇಕ ಮಾಡಿಸಿ ಶಿವನ ದರ್ಶನ ಮಾಡಿಕೊಳ್ಳಿ ಬುಧವಾರ ಶುಕ್ರವಾರ ಮತ್ತು ಶನಿವಾರ ಶುಭದಿನಗಳಾಗಿವೆ.

ವೃಶ್ಚಿಕ: ಈ ರಾಶಿಯವರಿಗೆ ಸಾಧಾರಣವಾಗಿದ್ದು ನಿಮ್ಮ ಗುಪ್ತ ಸಮಸ್ಯೆಗಳನ್ನು ವಿಚಾರಗಳನ್ನು ಮೂರನೇ ವ್ಯಕ್ತಿಯೊಂದಿಗೆ ಹಂಚಿಕೊಳ್ಳಬೇಡಿ ಇದು ನಿಮಗೆ ಮುಂದಿನ ದಿನಗಳಲ್ಲಿ ಅಪಹಾಸ್ಯಕ್ಕೆ ದಾರಿ ಯಾಗಬಹುದು. ನಿಮ್ಮ ಮುಂಗೋಪಿತನವನ್ನು ಆದಷ್ಟು ಕಡಿಮೆ ಮಾಡಿಕೊಳ್ಳಿ ಇದರಿಂದ ಒಳ್ಳೆಯದಾಗುತ್ತದೆ. ಇತರರು ಕೇಳುವ ಅನಾವಶ್ಯಕ ಪ್ರಶ್ನೆಗಳಿಗೆ ಉತ್ತರ ನೀಡಲು ಹೋಗಬೇಡಿ. ಸರ್ಕಾರಿ ನೌಕರರಿಗೆ ಮೇಲಾಧಿಕಾರಿಗಳ ಕಿರುಕಳ ಇರುತ್ತದೆ, ಆದ್ದರಿಂದ ಗಾಯತ್ರಿ ಮಂತ್ರ ಪಠಿಸುವುದು ಒಳಿತು. ನಿಮಗೆ ಭಾನುವಾರ ಮಂಗಳವಾರ, ಗುರುವಾರ ಶುಭ ದಿನಗಳಾಗಿವೆ.

ಧನಸ್ಸು: ಈ ರಾಶಿಯವರಿಗೆ ಈ ವಾರ ಉತ್ತಮವಾಗಿದೆ ಆದರೆ ಸಮಯವನ್ನು ಸದುಪಯೋಗ ಪಡಿಸಿಕೊಳ್ಳುವುದು ಉತ್ತಮ ಇದರಿಂದ ಉದ್ಯೋಗದಲ್ಲಿ ಪ್ರಗತಿ ಮತ್ತು ಅನಿರೀಕ್ಷಿತ ಧನಲಾಭ ಪಡೆಯಬಹುದಾಗಿದೆ. ಮನೆ ದೇವರನ್ನು ಆರಾಧನೆ ಮಾಡುವುದರಿಂದ ನಿಮ್ಮ ಕೆಲಸ ಕಾರ್ಯಗಳಲ್ಲಿ ಯಶಸ್ಸು ಲಭಿಸುತ್ತದೆ, ನಿವೇಶನ ಹಾಗೂ ವಾಹನ ಖರೀದಿ ಮಾಡುವ ಯೋಗವಿದ್ದು ನಿಮಗೆ ಮಂಗಳವಾರ ಗುರುವಾರ ಮತ್ತು ಶನಿವಾರ ಶುಭ ದಿನಗಳಾಗಿವೆ.

ಮಕರ: ಈ ರಾಶಿಯವರಿಗೆ ಈ ವಾರ ಉತ್ತಮವಾಗಿದ್ದು ನಿಮ್ಮ ಕೆಲಸ ಕಾರ್ಯಗಳಲ್ಲಿ ಪ್ರಗತಿ ಕಾಣುತ್ತದೆ, ನಿಮ್ಮ ಕನಸುಗಳು ನನಸಾಗುವ ಸಮಯ ಸನಿಹವಾಗುತ್ತಿದೆ. ದಾಂಪತ್ಯ ಸುಖಕ್ಕಾಗಿ ಹಳೆಯ ಕಹಿ ನೆನಪುಗಳನ್ನು ಮರೆತು ಹೊಂದಾಣಿಕೆ ಜೀವನ ನಡೆಸಿದರೆ ಉತ್ತಮ ಭವಿಷ್ಯವಿದೆ. ವಕೀಲರು, ಸಮಾಜ ಸೇವಕರಿಗೆ ಸಮಾಜದಲ್ಲಿ ಸ್ಥಾನ ಮಾನ ಮನ್ನಣೆ ಗೌರವ ದೊರೆಯುತ್ತದೆ ಬುಧವಾರ, ಶುಕ್ರವಾರ, ಶನಿವಾರ ಶುಭದಿನವಾಗಿದೆ.

ಕುಂಭ: ಈ ರಾಶಿಯವರಿಗೆ ಈ ವಾರ ಸಾಧಾರಣವಾಗಿದ್ದು ಮಕ್ಕಳ ಪ್ರೇಮ ವಿಚಾರದಿಂದ ಮನೆಯಲ್ಲಿ ನೆಮ್ಮದಿ ಹಾಳಾಗುತ್ತದೆ, ಉದ್ಯೋಗದಲ್ಲಿ ಅಭದ್ರತೆ ಕಾಡುತ್ತದೆ. ಮಾನಸಿಕ ಹಿಂಸೆ, ಗೊಂದಲ ಕಾಡುತ್ತದೆ ಪರಿಹಾರಕ್ಕಾಗಿ ಓಂಧುಂ ದುರ್ಗಾಯೇ ನಮಃ ಎಂಬ ಮಂತ್ರವನ್ನು 108 ಬಾರಿ ಪಠಿಸಿದರೆ ಒಳ್ಳೆಯದು. ಇನ್ನು
ಮಂಗಳವಾರ, ಶುಕ್ರವಾರ, ಶನಿವಾರ ಇವರಿಗೆ ಉತ್ತಮವಾಗಿದೆ.

ಮೀನ: ಈ ರಾಶಿಯವರಿಗೆ ಈವಾರ ಸಾಧಾರಣವಾಗಿದ್ದು ಮನಸ್ಸಿಗೆ ನಾನಾ ರೀತಿಯ ಚಿಂತನೆ ಕಾಡುತ್ತದೆ, ಯಾವುದು ಒಳಿತು ಕೆಡುಕು ಬೇಕು ಬೇಡಗಳ ಗೊಂದಲ ಸೃಷ್ಟಿಯಾಗಿ ಹಲವು ಅವಕಾಶಗಳಿಂದ ವಂಚಿತರಾಗುತ್ತಾರೆ. ನಿಮ್ಮನ್ನು ನಿಮ್ಮವರೇ ಆರ್ಥಿಕವಾಗಿ ವೈಯಕ್ತಿಕ ವಿಚಾರಗಳಿಗೆ ಬಳಸಿಕೊಂಡು ನಿಮ್ಮನ್ನು ಕಡೆಗಣಿಸುತ್ತಾರೆ. ಆದಷ್ಟು ಹಿತಶತ್ರುಗಳಿಂದ ದೂರವಿರಿ ಒಳ್ಳೆದಾಗುತ್ತದೆ. ನಿಮಗೆ ಭಾನುವಾರ, ಗುರುವಾರ, ಮಂಗಳವಾರ, ಶುಕ್ರವಾರ ಶುಭದಿನಗಳಾವೆ. ಗಣಪತಿ ಸ್ತೋತ್ರ ಪಠಸುವುದರಿಂದ ಒಳಿತಾಗುತ್ತದೆ.

%d bloggers like this: