2021 ಈ ವರ್ಷದಲ್ಲಿ ಈ ಐದು ರಾಶಿಯವರಿಗೆ ಮಾತ್ರ ಪುಣ್ಯಪ್ರಾಪ್ತಿ,ಅದೃಷ್ಟ! ಹೌದು ರಾಶಿ ಚಕ್ರಗಳಲ್ಲಿ ಭಾರಿ ಬದಲಾವಣೆ ಕಂಡು ಬಂದಿದ್ದು ಈ ಐದು ರಾಶಿಯವರಿಗೆ ಮಾತ್ರ ಪುಣ್ಯ ಪ್ರಾಪ್ತಿಯಾಗುತ್ತದೆ ಎಂದು ಜ್ಯೋತಿಷ್ಯ ಶಾಸ್ತ್ರದಲ್ಲಿ ತಿಳಿಸಲಾಗಿದೆ. ಹಾಗಾದರೆ ಅದೃಷ್ಟ ಲಭಿಸುವ ಆ ವಿಶೇಷ ರಾಶಿಗಳು ಯಾವುದು ಎಂದು ತಿಳಿಯಬಹುದು, ಹೌದು ಹೊಸ ವರ್ಷಕ್ಕೆ ಹೊಸ ಹೊಸ ನಿರ್ಧಾರಗಳು, ಜೀವನದ ಗುರಿಗಳು, ಕನಸುಗಳನ್ನು ಕಟ್ಟಿಕೊಂಡಿರುತ್ತೆವೆ ಆದರೆ ಅವೆಲ್ಲವು ಎಲ್ಲರಿಗೂ ಈಡೇರುವುದಿಲ್ಲ ಅವರರವರ ಜಾತಕ ರಾಶಿಗಳ ಫಲಾಫಲವಾಗಿ ಅದೃಷ್ಟ ಲಭಿಸುತ್ತದೆ. ಇನ್ನು ಈ ವರ್ಷ ಕೇವಲ ಈ ಐದು ರಾಶಿಯವರಿಗೆ ಮಾತ್ರ ಪುಣ್ಯ ಲಭಿಸುತ್ತದೆ ಎಂದು ಜ್ಯೋತಿಷ್ಯದಲ್ಲಿ ತಿಳಿಸಲಾಗಿದೆ. ಅವುಗಳಲ್ಲಿ ಮೊದಲನೇಯದಾಗಿ.

ಮೇಷ ರಾಶಿ: ಈ ರಾಶಿಯವರಿಗೆ 2021 ವರ್ಷ ವಿಶೇಷವಾಗಿದ್ದು ಹಿಂದೆಂದೂ ಕಾಣದ ವೃತ್ತಿಯಲ್ಲಿ ಯಶಸ್ಸು, ಕುಟುಂಬದಲ್ಲಿ ಸುಖ ಸಂತೋಷ ನಿಮಗೆ ಲಭಿಸುತ್ತದೆ. ಅಮೂರ್ತ ದೈವ ಶಕ್ತಿ ನಿಮ್ಮ ಕೆಲಸ ಕಾರ್ಯಗಳಿಗೆ ಪ್ರೇರಕವಾಗುತ್ತದೆ. ನಿಮ್ಮಲ್ಲಿ ಸಂವೇದನಶೀಲ ಮತ್ತು ಸೃಜನಶೀಲ ವ್ಯಕ್ತಿತ್ವ ರೂಪುಗೊಂಡು ನಿರ್ಭೀತರಾಗಿ ಕೆಲಸ ಮಾಡುತ್ತೀರಿ, ಹೆಚ್ಚು ಆಸಕ್ತಿಯಿಂದ ನಿಮ್ಮ ಕೆಲಸದಲ್ಲಿ ಕಾರ್ಯಗಳಲ್ಲಿ ಪಾಲ್ಗೊಂಡರೆ ನಿಮ್ಮ ಬದುಕಿನಲ್ಲಿ ಆಶ್ಚರ್ಯಕರವಾದ ಸಂಗತಿ ಗಳು ನಡೆಯುತ್ತದೆ.
ವೃಷಭ: ಈ ರಾಶಿ ಅವರು ತಮ್ಮ ಮಾತುಗಾರಿಕೆ ವ್ಯಕ್ತಿತ್ವ ಕೌಶಲ್ಯದ ಬಗ್ಗೆ ಹೆಚ್ಚು ಗಮನವನ್ನು ಕೊಡಬೇಕಾಗುತ್ತದೆ, ನಿಮ್ಮ ಜೀವನದಲ್ಲಿ ಅದೃಷ್ಟ ಲಭಿಸುವುದು ನಿಮ್ಮ ಮಾತು, ನಡವಳಿಕೆಯಿಂದ ಆದ್ದರಿಂದ ನಿಮ್ಮ ಮಾತಿನಲ್ಲಿ ಆದಷ್ಟು ಎಚ್ಚರವಿರಲಿ. ಇನ್ನು ನೀವು ನಿಮ್ಮ ಜೀವನದ ಗುರಿಯ ಬಗ್ಗೆ ಸ್ಪಷ್ಟವಾಗುತ್ತಾರೆ. ನಿಮ್ಮ ಕಠಿಣ ಪರಿಶ್ರಮದಿಂದ ವ್ಯಾಪಾರ ವ್ಯವಹಾರದಲ್ಲಿ ಅಧಿಕ ಧನಲಾಭ ಕಂಡುಬರುತ್ತದೆ. ಇತರೆ ಜನರನ್ನು ಆಕರ್ಷಿಸಬಹುದು ಆದರೆ ಹೊರಗಿನ ಜನರನ್ನು ನಂಬಬೇಡಿ. ಉದ್ಯೋಗದಲ್ಲಿ ನಿಮ್ಮ ನೆಚ್ಚಿನ ಕೆಲಸವನ್ನು ಮಾಡುವುದಕ್ಕೆ ಸಂಪೂರ್ಣ ಸ್ವಾತಂತ್ರ್ಯ ಕೆಲಸ ಸಿಗುತ್ತದೆ.

ತುಲಾ ರಾಶಿ: ಈ ರಾಶಿಯವರಿಗೆ ಆರ್ಥಿಕ ಜೀವನದಲ್ಲಿ ಭಾರಿ ಏರಿಕೆ ಕಂಡುಬರುತ್ತದೆ, ಲಕ್ಷ್ಮಿ ಕಟಾಕ್ಷ ಸಂಪೂರ್ಣವಾಗಿರುತ್ತದೆ. ಆದರೆ ಆರೋಗ್ಯದಲ್ಲಿ ಕೊಂಚ ಜಾಗೃತವಹಿಸಿ ಈ ವರ್ಷ ನಿಮ್ಮ ಶಕ್ತಿ ಸಾಮರ್ಥ್ಯದ ಬಗ್ಗೆ ಇತತರಿಗೆ ನಂಬಿಕೆ ವಿಶ್ವಾಸ ಬರುತ್ತದೆ. ಇದರಿಂದ ನಿಮಗೆ ಸಮಾಜದಲ್ಲಿ ಸ್ಥಾನ ಮಾನ ದೊರೆತು ವೃತ್ತಿಯಲ್ಲಿ ಪ್ರಗತಿ ಕಾಣುತ್ತೀರಿ.
ಕಟಕ ರಾಶಿ: ಈ ಕಟಕ ರಾಶಿಯವರಿಗೆ ಗುರುಬಲ ಇರುವುದರಿಂದ ರಾಜಯೋಗ ಲಭಿಸಲಿದೆ, ಮುಟ್ಟಿದ್ದೆಲ್ಲಾ ಚಿನ್ನವೆಂಬಂತೆ ಆರಂಭಿಸಿದ ಎಲ್ಲಾ ಕೆಲಸ ಕಾರ್ಯಗಳು ಜಯವಾಗುತ್ತದೆ. ನಿಮ್ಮ ಆಯ್ಕೆ ಪ್ರಕಾರ ನಿಮ್ಮ ಬದುಕು ಸಾಗುತ್ತದೆ. ಈ ವರ್ಷ ನೀವು ನಿಮ್ಮ ಬುದ್ಧಿವಂತಿಕೆಯಿಂದ ನಿರ್ಧಾರಗಳನ್ನ ತೆಗೆದುಕೊಳ್ಳುತ್ತೀರಿ ಆದ್ದರಿಂದ ಹಿದಿನಂತೆ ಮೋಸವಾಗುವುದಿಲ್ಲ ನಿಮ್ಮ ಪರಿಶ್ರಮದಿಂದ ನೀವು ನಿಮ್ಮ ಗುರಿಯನ್ನು ತಲುಪುತ್ತೀರಿ ಎನ್ನುತ್ತಿದೆ ಜ್ಯೋತಿಷ್ಯ.

ವೃಶ್ಚಿಕ ರಾಶಿ: ರಾಶಿಯವರಲ್ಲಿ 2021 ಅಮೋಘ ವರ್ಷವಾಗಲಿದೆ, ದಶಕಗಳ ಅಂದುಕೊಂಡ ಕೆಲಸಗಳು ಈ ವರ್ಷ ನೆರೆವೇರುತ್ತದೆ. ಶ್ರಮಕ್ಕೆ ತಕ್ಕ ಫಲ ಶೀಘ್ರವಾಗಿ ಲಭಿಸುತ್ತದೆ. ಬೇರೆಯವರ ಮಾತಿಗೆ ಬೆಲೆ ಕೊಡಬೇಡಿ ನಿಮ್ಮಲ್ಲಿ ನೀವು ನಂಬಿಕೆ ಇಟ್ಟರೆ ಉತ್ತಮವಾದ ಜೀವನ ನಿಮ್ಮದಾಗುತ್ತದೆ. ಪ್ರಯತ್ನ ಪಟ್ಟರೆ ಬದುಕಲ್ಲಿ ವಿಶೇಷವಾದ ಸಾಧನೆ ಮಾಡಬಹುದಾಗಿದೆ. ನೀವು ಮಾಡಿದ ಪುಣ್ಯ ಕಾರ್ಯಗಳು ಈ ವರ್ಷದಲ್ಲಿ ನಿಮಗೆ ಶ್ರೇಯಸ್ಸನ್ನು ಲಭಿಸುತ್ತಿದೆ. ಈ ಹೊಸ ವರ್ಷದಲ್ಲಿ ನಿಮಗೆ ಸಾಕಷ್ಟು ಪ್ರಯೋಜನ ದೊರೆಯುತ್ತದೆ.