2021 ರಲ್ಲಿ ಈ ಒಂದು ರಾಶಿಯವರಿಗೆ ಗಜಕೇಸರಿ ಯೋಗ

2021ರ ಈ ವರ್ಷದಲ್ಲಿ ವಿಶೇಷವಾಗಿ ಈ ಒಂದು ರಾಶಿಗೆ ಮಾತ್ರ ಗಜಕೇಸರಿ ಯೋಗ. ಹೌದು ದ್ವಾದಶ ರಾಶಿಗಳಲ್ಲಿ ಯಾವ ರಾಶಿಯವರಿಗೂ ದೊರೆಯದ ಅದೃಷ್ಟ ಜಲರಾಶಿಯಾಗಿರುವ ಈ ರಾಶಿಗೆ ಮಾತ್ರ ಇದೇ ಫೆಬ್ರವರಿಯಿಂದ ಯೋಗ ಲಭಿಸಲಿದೆ. ಜಲ ರಾಶಿಯಾಗಿರುವ ಕಟಕ ರಾಶಿಯವರಿಗೆ ಈ ಬಾರಿ ಅದೃಷ್ಟ ಕೂಡಿಬರಲಿದೆ. ಜಲಗಾರರು, ಮೀನುಗಾರಿಕೆ ವ್ಯಾಪಾರಸ್ಥರಿಗೆ ಅತ್ಯುತ್ತಮವಾದ ಧನಲಾಭ ವಾಗಲಿದೆ. ಹಣಕಾಸಿನ ಸಂಕಷ್ಟಗಳು ದೂರವಾಗಿ ಆರ್ಥಿಕವಾಗಿ ಸಧೃಡವಾಗಬಹುದಾಗಿದೆ. ಚಂದ್ರನು ಅಷ್ಟಮ ಸ್ಥಾನದಲ್ಲಿದ್ಧು, ಇವರ ಅಷ್ಟಮ ಸಮಸ್ಯೆಗಳು ದೂರವಾಗಲಿವೆ.

ಇನ್ನು ಮಹಿಳೆಯರಿಗೆ ಬಹಳಷ್ಟು ವರ್ಷಗಳ ಕನಸಾಗಿದ್ದ ಸ್ವಯಂ ಉದ್ಯೋಗ ಆರಂಭಮಾಡಲು ಪ್ರೋತ್ಸಾಹ ಸಿಗುತ್ತದೆ. ಉದ್ಯಮಿಗಳಿಗೆ ತಮ್ಮ ವ್ಯವಹಾರಗಳಲ್ಲಿ ಚೇತರಿಕೆ ಕಂಡು ಬಂದು, ನೆನೆಗುದಿಗೆ ಬಿದ್ದಿದ್ದ ಕೆಲಸ ಕಾರ್ಯಗಳು ವೇಗವಾಗಿ ಚಾಲನೆ ಪಡೆದುಕೊಳ್ಳುತ್ತವೆ. ರಾಜಕೀಯ ಕ್ಷೇತ್ರದ ವ್ಯಕ್ತಿಗಳಿಗೆ ಬಯಸಿದ ಪದವಿ ದೊರೆಯುವ ಅವಕಾಶ ಹೆಚ್ಚಾಗಿದೆ. ಯುಗಾದಿ ನಂತರ ನಿಮ್ಮ ಜೀವನದಲ್ಲಿ ಅದ್ಭುತವಾದ ಬದಲಾವಣೆ ಕಂಡು ಬರುತ್ತದೆ. ವರ್ಷದಿಂದ ಸಂಕಷ್ಟ ಅನುಭವಿಸಿದ ಹೋಟೇಲ್ ಉದ್ಯಮದಾರರಿಗೆ ಪ್ರಗತಿ ಕಂಡು ಬರುತ್ತದೆ.

ಆದರೆ ಈ ಕಟಕ ರಾಶಿಯವರಲ್ಲಿ ಕೆಲವರಿಗೆ ಸರ್ಪದೋಷ ಕಂಡು ಬರುವುದರಿಂದ ಅವರು ತಪ್ಪದೆ ಓಂಹ್ರೀಂ ಭಾನುವೇ ಪಮಃ ಎಂಬ ಶ್ಲೋಕ ಹೇಳುತ್ತ ಅಶ್ವತ್ಥಮರವನ್ನು ಪ್ರದಕ್ಷಿಣೆ ಹಾಕಬೇಕಾಗಿದೆ. ಜೊತೆಗೆ ಪ್ರತಿ ಸೋಮವಾರ ಶಿವನ ದರ್ಶನ ಪಡೆದು, ಬಿಲ್ವಾರ್ಚನೆ ಮಾಡಿಸಬೇಕು. ಸಾಧ್ಯವಾದರೆ ದೀನ ದಲಿತರಿಗೆ ಆರ್ಥಿಕ ಸಹಾಯ ಅಥವಾ ಶಿವನ ದೇವಾಲಯಗಳಲ್ಲಿ ಅನ್ನ ಸಂತರ್ಪಣೆ ಮಾಡಿಸುವುದರಿಂದ ನಿಮ್ಮ ದೋಷಗಳು ಪರಿಹಾರವಾಗುತ್ತವೆ, ನಿಮಗೆ ಬಿಳಿ ಬಣ್ಣ ಶುಭತರುತ್ತದೆ, ಅದೃಷ್ಟ ತರುವ ಸಂಖ್ಯೆಗಳು 5 ಮತ್ತು 9ಸಂಖ್ಯೆಯಾಗಿವೆ ಎಂದು ಜ್ಯೋತಿಷ್ಯಿಗಳು ಸಲಹೆ ನೀಡುತ್ತಾರೆ.

%d bloggers like this: