2021 ರಲ್ಲಿ ಈ ರಾಶಿಯವರ ವ್ಯಾಪಾರ ವ್ಯವಹಾರಗಳಲ್ಲಿ ಉತ್ತಮ ಧನಲಾಭ

ಈ 2021 ವರ್ಷದ ಗ್ರಹಗಳ ಗೋಚರ ಫಲವಾಗಿ ತುಲಾ ರಾಶಿಯವರ ಶುಭ ಫಲಗಳು ಹೇಗಿರುತ್ತದೆ ಎಂಬುದನ್ನು ತಿಳಿಯುವುದಾದರೆ, ಧನಸ್ಥಾನ, ಸುಖ ಸ್ಥಾನದಲ್ಲಿ ಕೇತುಗ್ರಹ ಇರುವುದರಿಂದ ಉದ್ಯೋಗಕ್ಕಾಗಿ ಅಲೆದಾಟವಾಗಬಹುದು. ತುಲಾ ರಾಶಿಯವರಿಗೆ ಮಂದಗತಿಯ ಪ್ರಗತಿ ಕಾಣಬಹುದಾಗಿರುತ್ತದೆ. ನಾಲ್ಕನೇಯ ಮನೆ ಕೇಂದ್ರಸ್ಥಾನದಲ್ಲಿ ಗುರುಗ್ರಹವು ಮಕರ ರಾಶಿಗೆ ಪ್ರವೇಶ ಪಡೆಯುತ್ತಾನೆ. ಮೂರನೇ ಮನೆಯ ಅಧಿಪತಿ ಮತ್ತು ನಾಲ್ಕನೇಯ ಮನೆ ಅಧಿಪತಿ ಗ್ರಹವು ಶನಿಗ್ರಹದೊಂದಿಗೆ ಸಂಯೋಗ ಹೊಂದುತ್ತದೆ. ಇದರಿಂದ ವಿಧ್ಯಾರ್ಥಿಗಳ ವಿಧ್ಯಾಭ್ಯಾಸದಲ್ಲಿ ಪ್ರಗತಿ ಕಂಡು ಬರುತ್ತದೆ. ವ್ಯಾಪಾರ ವ್ಯವಹಾರಸ್ಥರಿಗೆ ಉತ್ತಮವಾದ ಧನಲಾಭ ಸಿಗುತ್ತದೆ. ತುಲಾ ರಾಶಿಯವರಿಗೆ ಶನಿಗ್ರಹವು ಮಂದತ್ವ ನೀಡಿದರು ಕೂಡ ಗುರುವಿನ ನೇರದೃಷ್ಟಿಯಿಂದ ಈ ಮಂದತ್ವವನ್ನು ನಿವಾರಣೆ ಮಾಡುತ್ತಾನೆ. ಇದರಿಂದ ಪೂರ್ವ ಪುಣ್ಯಫಲ ಒದಗುತ್ತದೆ.ಗುರು ಬಲವಿರುವುದರಿಂದ ನಿಮ್ಮ ಎಲ್ಲಾ ಕೆಲಸ, ಕಾರ್ಯಗಳು ಸುಗಮವಾಗಿ ಸಾಗುತ್ತದೆ.

ಏಪ್ರಿಲ್ 5ರಿಂದ 25 ರವರೆಗೆ ಕುಂಭ ರಾಶಿಗೆ ಗುರು ಪ್ರವೇಶ ಮಾಡುತ್ತಾನೆ. ಆ ಸಮಯದಲ್ಲಿ ನೂತನ ಉದ್ಯೋಗ ಹುಡುಕುವವರಿಗೆ, ಹೊಸ ವ್ಯಾಪಾರ ಆರಂಭಿಸುವವರಿಗೆ ಶುಭಕಾಲ ಇದಾಗಿದ್ದು, ಉತ್ತಮ ಧನಲಾಭವಾಗುತ್ತದೆ. ಇನ್ನು ಅಷ್ಟಮದಲ್ಲಿ ರಾಹುಗ್ರಹ ಇರುವುದರಿಂದ ಆರೋಗ್ಯದಲ್ಲಿ ಕೊಂಚ ಏರುಪೇರಾಗಬಹುದಾಗಿದೆ. ಆದ್ದರಿಂದ ಆರೋಗ್ಯದ ಕಡೆ ಜಾಗೃತವಹಿಸಿ. ಇನ್ನು ಗುರು ಬಲವಿರುವುದಿರಂದ ಮನೆಯಲ್ಲಿ ಶುಭಕಾರ್ಯಗಳು ನಡೆಯುತ್ತವೆ. ಅವಿವಾಹಿತರಿಗೆ ಕಂಕಣಭಾಗ್ಯ ಕೂಡಿ ಬರುತ್ತದೆ. ಜೊತೆಗೆ ಮಕ್ಕಳಿಲ್ಲದ ದಂಪತಿಗಳಿಗೆ ಸಂತಾನಭಾಗ್ಯ ಯೋಗವಿದೆ. ಒಟ್ಟಾರೆಯಾಗಿ ತುಲಾ ರಾಶಿಯವರಿಗೆ ಗುರುವಿನ ಅನುಗ್ರಹ ಇರುವುದರಿಂದ ಈ ವರ್ಷ ಉತ್ತಮವಾಗಿರುತ್ತದೆ ಎಂದು ಜ್ಯೋತಿಷ್ಯಶಾಸ್ತ್ರಜ್ಞರು ತಿಳಿಸಿದ್ದಾರೆ.

%d bloggers like this: