2021 ರಲ್ಲಿ ಈ ರಾಶಿಯವರು ಆರ್ಥಿಕ ಅಭಿವೃದ್ಧಿ ಕಾಣುವಿರಿ

ದ್ವಾದಶ ರಾಶಿಗಳ ಫಲಾಫಲಗಳನ್ನು ಗ್ರಹಗಳ ಸಂಚಾರದ ಜೊತೆಗೆ ರಾಶಿ ನಕ್ಷತ್ರಗಳ ಆಧಾರದ ಮೇಲೆ ಭವಿಷ್ಯವನ್ನು ತಿಳಿಯಬಹುದಾಗಿದೆ. ಹಾಗಾದರೆ ರಾಶಿ ಚಕ್ರಗಳಲ್ಲಿ ಪ್ರಥಮವಾಗಿ ಬರುವ ಮೇಷ ರಾಶಿಯ ಭವಿಷ್ಯ ನೋಡುವುದಾದರೆ. ಮೇಷ ರಾಶಿಯ ವ್ಯಕ್ತಿಗಳಿಗೆ ಉದ್ಯೋಗದಲ್ಲಿ ಬದಲಾವಣಗ ಆಗುವ ಸಾದ್ಯತೆ ಇದೆ.ವರ್ಷಗಳಿಂದ ಬಯಸಿದ ವರ್ಗಾವಣೆ ಈ ವರ್ಷದಲ್ಲಿ ನನಸಾಗುತ್ತದೆ, ಜೊತೆಗೆ ವೃತ್ತಿಯ ಸ್ಥಾನದಲ್ಲಿ ಬಡ್ತಿ ದೊರೆಯುವ ಸೌಭಾಗ್ಯ ನಿಮ್ಮದಾಗಿರುತ್ತದೆ. ಇನ್ನು ಈ ರಾಶಿಯವರು ಆತುರವಾಗಿ ಮದುವೆಗೆ ಒಪ್ಪಿಗೆ ನೀಡಬಾರದು. ವರ ಅಥವಾ ವಧುವಿನ ಜಾತಕ ನೋಡಿ ಸುಖ, ಸಂತೋಷ, ನೆಮ್ಮದಿ ಇತರೆ ದಾಂಪತ್ಯದಲ್ಲಿ ಬೇಕಾದ ಗುಣಗಳೆಲ್ಲಾ ಪರಸ್ಪರ ಹೊಂದಾಣಿಕೆ ಆದರೆ ಮಾತ್ರ ವಿವಾಹವಾಗಿ, ಯಾವುದೇ ಕಾರಣಕ್ಕೂ ಮನೆಯವರ ಒತ್ತಡಕ್ಕೆ ಮದುವೆ ಆಗಬೇಡಿ.

ನಿಮ್ಮ ವೃತ್ತಿಯಲ್ಲಿ ದೊರೆತ ಬಡ್ತಿಯಿಂದ ಸಮಾಧಾನಗೊಂಡು ನೀವು ತೃಪ್ತಿ ಪಡೆಯುತ್ತೀರಿ. ಸ್ವಂತ ವ್ಯಾಪಾರ, ವ್ಯವಹಾರ ಮಾಡುವವರು ಯಾವುದೇ ಕಾರಣಕ್ಕೂ ಪಾಲುದಾರಿಕೆಯಲ್ಲಿ ತೊಡಗಿಕೊಳ್ಳಬೇಡಿ. ಸ್ವತಃ ಶ್ರಮಪಟ್ಟು ದುಡಿದರೆ ನಿಮಗೆ ಅತ್ಯಧಿಕ ಧನಲಾಭ ಉಂಟಾಗುತ್ತದೆ. ನಿಮ್ಮ ವ್ಯವಹಾರಗಳಲ್ಲಿ ಪ್ರಗತಿ ಕಾಣುತ್ತೀರಿ. ರಿಯಲ್ ಎಸ್ಟೇಟ್, ಭೂಮಿ ವ್ಯವಹಾರ, ಕಾರು ಮಾರಾಟಗಾರರಿಗೆ ಅನಿರೀಕ್ಷಿತ ಧನಲಾಭ, ಜೊತೆಗೆ ಆಸ್ತಿ ಮಾಡುವ ಯೋಗವಿದೆ.

ಸಂತಾನವಿಲ್ಲದ ದಂಪತಿಗಳಿಗೆ ಮಗುವಾಗುವ ಶುಭಫಲ ದೊರೆಯುತ್ತದೆ. ಮಗುವಾದ ನಂತರ ಪುಣ್ಯ ಕ್ಷೇತ್ರಗಳ ಜೊತೆಗೆ ಮನೆದೇವರ ದರ್ಶನ ಮಾಡುವುದರಿಂದ ಒಳ್ಳೆಯದಾಗುತ್ತದೆ. ಕುಟುಂಬದಲ್ಲಿ ಸುಖ, ಸಂತೋಷ ಪ್ರಾಪ್ತಿಯಾಗಿ, ಜೀವನ ಸುಗುಮವಾಗಿ ಸಂತೋಷದಿಂದ ಸುಲಲಿತವಾಗಿ ಸಾಗುತ್ತದೆ ಎಂದು ಮೇಷ ರಾಶಿಯ ಭವಿಷ್ಯವನ್ನು ಜ್ಯೋತಿಷ್ಯತಜ್ಞರು ತಿಳಿಸಿದ್ದಾರೆ. ಸಮಸ್ಯೆಗಳ ಪರಿಹಾರಕ್ಕಾಗಿ ಪ್ರತಿ ಸೋಮವಾರ ಶಿವನ ದೇವಾಲಯಕ್ಕೆ ಭೇಟಿ ನೀಡಿ, ಬಿಲ್ವಪತ್ರೆಗಳಿಂದ ಪರಮೇಶ್ವರನಿಗೆ ಅಭಿಷೇಕ ಮಾಡಿಸಿ ಶುಭವಾಗುತ್ತದೆ.

%d bloggers like this: