2021 ರಲ್ಲಿ ಈ ರಾಶಿಯವರು ಎಲ್ಲಾ ವಿಷಯಗಳಲ್ಲೂ ಪ್ರಗತಿ ಹಾಗೂ ಅಭಿವೃದ್ಧಿ ಕಾಣುವಿರಿ

2021ರ ವಾರ್ಷಿಕ ಭವಿಷ್ಯ ವೃಶ್ಚಿಕ ರಾಶಿಯವರು ವೈಶಾಖ ನಕ್ಷತ್ರ 4 ಚರಣಗಳು, ಅನುರಾಧ ನಕ್ಷತ್ರದ ನಾಲ್ಕು ನಕ್ಷತ್ರಗಳು ಹಾಗೂ ಜೇಷ್ಠ ನಕ್ಷತ್ರದ ನಾಲ್ಕೂ ಚರಣಗಳನ್ನು ಹೊಂದಿರುತ್ತಾರೆ. ಈ ರಾಶಿಯವರಿಗೆ ಕುಜ ಗ್ರಹ ಅಧಿಪತಿ ಗ್ರಹವಾಗಿದ್ದು, ಇವರಿಗೆ ಆದಾಯ ಹೆಚ್ಚಾಗಿದ್ದರೂ ಕೂಡ ಅಷ್ಟೇ ಪ್ರಮಾಣದ ಖರ್ಚು ಗಳಾಗುತ್ತದೆ. ಕರ್ಮಾಧಿಪತಿ ಯಾಗಿರುವ ಶನಿಯು ಮೂರನೇ ಸ್ಥಾನದಲ್ಲಿದ್ದು ನಾಲ್ಕನೇ ಮನೆಯಲ್ಲಿ ಗುರು ಪ್ರವೇಶ ಪಡೆದಿದ್ದಾನೆ. ಏಳನೇಯ ಸ್ಥಾನದಲ್ಲಿ ಕೇತು ಲಗ್ನದಲ್ಲಿ ಸಂಚಾರ ಮಾಡುತ್ತಿದೆ. ಈ ಎಲ್ಲಾ ಗ್ರಹಗಳ ಸಂಚಾರದ ಆಧಾರದ ಮೇಲೆ ವೃಶ್ಚಿಕ ರಾಶಿಯವರಿಗೆ ಭವಿಷ್ಯವನ್ನು ನಿರ್ಧರಿಸಲಾಗುತ್ತದೆ. ಈ ರಾಶಿಯವರು ಮಾಡುವ ಎಲ್ಲಾ ಕೆಲಸ ಕಾರ್ಯಗಳು ತೊಂದರೆ ತಾಪತ್ರಯಗಳಿಲ್ಲದೆ ಸುಗಮವಾಗಿ ಜಯವಾಗುತ್ತದೆ.

ಹಣಕಾಸಿನ ವಿಚಾರದಲ್ಲಿ ಉನ್ನತಿಯನ್ನು ಕಾಣಬಹುದಾಗಿದೆ, ಎಂತಹ ಕಷ್ಟದ ಸಂದರ್ಭದಲ್ಲಿಯೂ ಸಹ ಧೈರ್ಯದಿಂದ ಮುನ್ನುಗ್ಗಿದರೆ ಯಶಸ್ಸು ನಿಮ್ಮದಾಗಿರುತ್ತದೆ. ಆದರೆ ಯಾವುದೇ ಕಾರಣಕ್ಕೂ ಆತ್ಮವಿಶ್ವಾಸವನ್ನು ಕಳೆದುಕೊಳ್ಳಬಾರದು. ಕರ್ಮಾಧಿಪತಿ ಶನಿಯು ಮೂರನೇಯ ಸ್ಥಾನದಲ್ಲಿ ಸಂಚಾರ ಮಾಡುತ್ತಿರುವುದರಿಂದ ನೀವು ಉದ್ಯೋಗದಲ್ಲಿ ಅನೇಕ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ನಿಮ್ಮ ಸಾಮರ್ಥ್ಯವನ್ನು ಮೀರಿ ನೀವು ಕಷ್ಟ ಪಟ್ಟು ಕೆಲಸ ಮಾಡಬೇಕಾಗುತ್ತದೆ. ಯಾವುದೇ ಕಾರಣಕ್ಕೂ ನಿಮ್ಮ ಸಹೋದ್ಯೋಗಿಗಳೊಂದಿಗೆ ನಿಮ್ಮ ರಹಸ್ಯ ಹಂಚಿಕೊಳ್ಳಲು ಹೋಗಬೇಡಿ.

ಫೆಬ್ರವರಿ ತಿಂಗಳಲ್ಲಿ ನೀವು ಶ್ರಮಪಟ್ಟಷ್ಟು ಉದ್ಯೋಗದಲ್ಲಿ ಹೆಚ್ಚು ಪ್ರಗತಿಯನ್ನು ಕಾಣುತ್ತೀರಿ. ಜನವರಿ, ಫೆಬ್ರವರಿ ಮೊದಲ ವಾರ ಮತ್ತು ಮಾರ್ಚ್ ಅಂತಿಮ ವಾರಗಳಲ್ಲಿ ನಿಮ್ಮ ಉದ್ಯೋಗದಲ್ಲಿ ಪ್ರಗತಿ ಕಂಡು ಬಡ್ತಿ ಪಡೆಯಬಹುದು. ಜುಲೈನಲ್ಲಿ ನೀವು ಬಯಸಿದ ಹುದ್ದೆಗೆ ಆಯ್ಕೆ ಆಗುತ್ತೀರಿ. ಇನ್ನು ಈ ವ್ಯಾಪಾರಸ್ಥರಿಗೆ ಲಾಭವು ಅಧಿಕವಾಗಿರುತ್ತದೆ. ಬಂದ ಲಾಭದಿಂದ ಸ್ಥಿರಾಸ್ತಿ, ಜಮೀನು ಖರೀದಿ, ವಾಹನ ಖರೀದಿ ಮಾಡಬಹುದಾಗಿದೆ. ಈ ವರ್ಷದ ಆರಂಭದಲ್ಲಿ ಆದಾಯಕ್ಕಿಂತ ಖರ್ಚು ಅಧಿಕವಾಗಿರುತ್ತದೆ. ಕುಟುಂಬದಲ್ಲಿ ಶುಭಕಾರ್ಯ ನಡೆದು, ಅತಿಥಿಗಳು ಮನೆಗೆ ಆಗಮನವಾಗುವುದರಿಂದ ನಿಮ್ಮ ಮನೆಯಲ್ಲಿ ಸುಖ ಸಂತೋಷ, ನೆಮ್ಮದಿ ನೆಲೆಸುತ್ತದೆ. ಇನ್ನು ಕಚೇರಿ ಕೆಲಸಗಳಲ್ಲಿ ನಿಮಗೆ ಜಯ ಸಾಧಿಸುತ್ತದೆ. ಹಣಕಾಸಿನ ಸಮಸ್ಯೆಗಳಿಂದ ಮುಕ್ತಿಯಾಗುತ್ತದೆ.

ಜೊತೆಗೆ ಈ ಸ್ಪರ್ಧಾತ್ಮಕ ಪರೀಕ್ಷೆಗಳ ಅಭ್ಯರ್ಥಿಗಳ ಕನಸಿನ ಉದ್ಯೋಗ ಕೈಸೇರುತ್ತದೆ. ಕೌಟುಂಬಿಕ ವಿಚಾರದಲ್ಲಿ ನೋಡುವುದಾದರೆ ನಿಮ್ಮ ಮನೆಯ ಹಿರಿಯ ಸದಸ್ಯರ ಆರೋಗ್ಯದಲ್ಲಿ ಕೊಂಚ ಏರುಪೇರಾಗಬಹುದು ಆದ್ದರಿಂದ ಅವರ ಆರೋಗ್ಯದ ಬಗ್ಗೆ ಜಾಗ್ರತೆ ವಹಿಸುವುದು ಕ್ಷೇಮವಾಗಿದೆ. ಸಹೋದರರ ನಡುವೆ ಬಾಂಧವ್ಯ ಹೆಚ್ಚಾಗಿ ಸಾಮರಸ್ಯ ಜೀವನ ನಿಮ್ಮದಾಗುತ್ತದೆ. ಸಮಸ್ಯೆಗಳ ಪರಿಹಾರವಾಗಿ ನೀವು ಪ್ರತಿ ಮಂಗಳವಾರ ಸುಂದರಕಾಂಡ ಪಾರಾಯಣ ಮಾಡುವುದರ ಜೊತೆಗೆ ಸಾಧ್ಯವಾದರೆ ಪ್ರಾಣಿ ಪಕ್ಷಿಗಳಿಗೆ ಆಹಾರಗಳನ್ನು ನೀಡಿ. ಪ್ರತಿನಿತ್ಯ ಸೂರ್ಯ ನಮಸ್ಕಾರ ಮಾಡುವುದರಿಂದ ನಿಮಗೆ ಸಕಾರಾತ್ಮಕ ಭಾವನೆ ಉಂಟಾಗಿ ಮಾಡುವ ಕೆಲಸದಲ್ಲಿ ಏಕಗ್ರತೆ ಪಡೆದು ಜಯ ಸಾಧಿಸುತ್ತೀರಿ, ಪ್ರತಿ ಶುಕ್ರವಾರ ಮಹಾಲಕ್ಷ್ಮಿಗೆ ತುಪ್ಪದ ದೀಪ ಹಚ್ಚಿ ಪೂಜಿಸುವುದರಿಂದ ಲಕ್ಷ್ಮಿ ಕೃಪಾಕಟಾಕ್ಷ ನಿಮ್ಮದಾಗುತ್ತದೆ ಎಂದು ಜ್ಯೋತಿಷ್ಯಶಾಸ್ತ್ರಜ್ಞರು ತಿಳಿಸಿದ್ದಾರೆ.

%d bloggers like this: