2021 ರಲ್ಲಿ ಈ ರಾಶಿಯವರು ಸ್ವಲ್ಪ ಜಾಸ್ತಿನೇ ಪ್ರಯತ್ನ ಪಡಬೇಕು

ಈ 2021ವರ್ಷ ರಾಶಿಚಕ್ರಗಳಲ್ಲಿ ಬಲಿಷ್ಠ ರಾಶಿಯಾಗಿರುವ ಸಿಂಹರಾಶಿಯವರಿಗೆ ಈ ಬಾರಿ ಸಂಕಷ್ಟ ಕಾಲ ಎದುರಾಗಲಿದೆ. ಸಿಂಹ ರಾಶಿ ಅಂದಾಕ್ಷಣ ಪ್ರಥಮವಾಗಿ ನೆನೆಪಿಗೆ ಬರುವುದು ಧೈರ್ಯವಂತರು, ಆತ್ಮವಿಶ್ವಾಸ, ಹಠಮಾರಿತನ, ಜಯಶಾಲಿಗಳು ಆಗಿರುತ್ತಾರೆ ಎಂದು, ಆದರೆ ಈ ವರ್ಷ ಅತ್ಯಂತ ಸಂಕಷ್ಠಕಾಲ ಎದುರಿಸಲಿದ್ದಾರೆ. ಆದ್ದರಿಂದ ನೀವು ಜೂನ್, ಜುಲೈವರೆಗೂ ಯಾವುದೇ ರೀತಿಯ ಶುಭ ಕಾರ್ಯಗಳಿಗೆ ಕೈ ಹಾಕಬೇಡಿ. ಈ ಅಮವಾಸ್ಯೆ ಮತ್ತು ಹುಣ್ಣಿಮೆಯದಿನ ಆದಷ್ಟು ಎಚ್ಚರವಾಗಿರಿ. ಅಂದು ನಿಮಗೆ ಶತ್ರುಭಯ ಕಾಡುವಂತದ್ದು,ಅವರಿಂದ ಪ್ರಾಣಾಪಯ ಎದುರಾಗಲಿದೆ.

ಯಾರನ್ನು ಕೂಡ ದಿಢೀರನೆ ನಂಬಬೇಡಿ, ನಿಮ್ಮ ನಂಬಿಕೆ ನಿಮಗೆ ಮುಳುವಾಗುತ್ತದೆ. ನಿಮ್ಮ ಒಳ್ಳೆಯತನ ಬಳಸಿಕೊಂಡು ದ್ರೋಹವೆಸಗುವ ಸಾಧ್ಯತೆ ಹೆಚ್ಚಾಗಿದೆ. ದಂಪತಿಗಳ ನಡುವೆ ಮನಸ್ತಾಪ, ಕಲಹಗಳು ಏರ್ಪಡುತ್ತವೆ ಆದ್ದರಿಂದ ಮೌನವಹಿಸುವುದು ಉತ್ತಮವಾಗಿರುತ್ತದೆ. ರಾಜಕೀಯ ಕ್ಷೇತ್ರದಲ್ಲಿರುವವರು ತಮ್ಮ ತಪ್ಪು ನಿರ್ಧಾರದಿಂದಾಗಿ ಪದವಿ ಕಳೆದುಕೊಳ್ಳುವುದರ ಜೊತೆಗೆ ಅವಮಾನ ಎದುರಿಸಬಹುದು. ಇನ್ನು ದಶಾಮಾಧಿಪತಿ ಶುಕ್ರ ನಿಮಗೆ ಬಲವಾಗಿರುವುದರಿಂದ, ಈ ಕಲಾವಿದರು, ಚಿತ್ರಕಲಾ, ಸಂಗೀತ, ವಜ್ರದ ವ್ಯಪಾರಿಗಳು, ಸುಗಂಧ ದ್ರವ್ಯತೆಯ ವ್ಯಾಪಾರಿಗಳಿಗೆ ಉತ್ತಮವಾಗಿರುತ್ತದೆ.

ಈ ಸಿಂಹರಾಶಿಯವರು ಮಕ್ಕಳಿಗಾಗಿ ಮಾಡಿದ ಸಾಲದಿಂದ ತೊಂದರೆ ತಾಪತ್ರಯ ಅನುಭವಿಸಿದರು ಕೂಡ ಮಕ್ಕಳ ವಿಧ್ಯಾಭ್ಯಾಸದಲ್ಲಿ ಪ್ರಗತಿ ಇವರನ್ನು ನೆಮ್ಮದಿಯಿಂದ ಇರುವಂತೆ ಮಾಡುತ್ತದೆ. ಆರ್ಥಿಕ ಮುಗ್ಗಟ್ಟು ಮತ್ತು ಜೀವನದಲ್ಲಿ ಸಂಭವಿಸುವ ಸಮಸ್ಯೆಗಳ ಪರಿಹಾರಕ್ಕಾಗಿ ಪ್ರತಿ ನಿತ್ಯ ಬೆಳಿಗ್ಗೆ ಸೂರ್ಯ ನಮಸ್ಕಾರ ಮಾಡಿ, ಓಂಸೂರ್ಯಾಯಾ ನಮಃ ಎಂಬ ಶ್ಲೋಕ ಹೇಳುವುದರಿಂದ ಒಂದಷ್ಟು ಶುಭಫಲ ಪಡೆಯಬಹುದಾಗಿದೆ. ಕೆಂಪು ಬಣ್ಣ ಅದೃಷ್ಟ ತರುವ ಬಣ್ಣವಾಗಿದ್ದು, 1ಮತ್ತು 7ಶುಭತರುವ ಸಂಖ್ಯೆಗಳಾಗಿವೆ ಎಂದು ಜ್ಯೋತಿಷ್ಯಶಾಸ್ತ್ರಜ್ಞರು ತಿಳಿಸಿದ್ದಾರೆ.

%d bloggers like this: