2021 ರಲ್ಲಿ ಈ ರಾಶಿಯವರಿಗೆ ಅದೃಷ್ಟ ಖುಲಾಯಿಸಲಿದೆ, ನಿಮ್ಮ ಕನಸು ನನಸಾಗಿಸಲು ಇದು ಸೂಕ್ತ ಸಮಯ

ಮಿಥುನ ರಾಶಿಯ 2021 ವರ್ಷ ವರ್ಷ ಭವಿಷ್ಯ ಬಗ್ಗೆ ತಿಳಿಯುವುದಾದರೆ ಈ ಮಿಥುನ ರಾಶಿಯವರು ಮೃಗಶಿರ ನಕ್ಷತ್ರದ ಮೂರು ಮತ್ತು ನಾಲ್ಕನೇಯ ಪಾದ ಆರ್ಧ ನಕ್ಷತ್ರ ಮತ್ತು ಪುನರ್ವಸು ನಕ್ಷತ್ರದ ಒಂದು, ಎರಡುಮತ್ತು ಮೂರನೇ ಪಾದ ವನ್ನೊಳಗೊಂಡಿದೆ. ಈ ಮಿಥುನ ರಾಶಿಯವರು ಸದಾ ಉನ್ನತ ಮಟ್ಟದ ವಿಚಾರದಲ್ಲಿ ಚಿಂತನೆ ಮಾಡುವುದರಿಂದ ಜೀವನದಲ್ಲಿ ಉನ್ನತ ಸ್ಥಾನ ಪಡೆಯುತ್ತೀರಿ. ಮಿಥುನ ರಾಶಿಯವರು ಉದಾತ್ತ ಮನೋಭಾವದ ಗುಣಗಳನ್ನು ಹೊಂದಿರುವುದರಿಂದ ಈ ರಾಶಿಯವರು ತಮ್ಮ ಜೀವಿತಾವಧಿಯಲ್ಲಿ ಕಷ್ಟದಲ್ಲಿರುವ ತಮ್ಮ ಸ್ನೇಹಿತರು ಮತ್ತು ಇತರರಿಗೆ ಸಹಾಯಹಸ್ತ ನೀಡುತ್ತಾರೆ. ಇವರು ಆಲೋಚಿಸುವ ವಿಚಾರಗಳಿಗೆ ಎಲ್ಲರಿಂದಲೂ ಸಕರಾತ್ಮಕ ಸ್ಪಂದನೆ ದೊರಕುತ್ತದೆ, ಇವರನ್ನು ತಿರಸ್ಕರಿಸಿದ ವ್ಯಕ್ತಿಗಳಿಂದಲೇ ಸನ್ಮಾನ ಕಾದಿರುತ್ತದೆ ಎಂದು ತಿಳಿಯಬಹುದು.

ಈ ಮಿಥುನ ರಾಶಿಯವರ ಕೆಟ್ಟ ಗುಣವೆಂದರೆ ಇನ್ನೊಬ್ಬರಲ್ಲಿ ದೋಷ ಹುಡುಕುವುದು ಇದನ್ನು ಬಿಟ್ಟರೆ ನಿಮ್ಮ ವ್ಯಕ್ತಿತ್ವ ಇನ್ನಷ್ಟು ವೃದ್ಧಿಯಾಗುತ್ತದೆ. ಸಮಾಜದಲ್ಲಿ ಗೌರವ ಸ್ಥಾನ ಮಾನ ಮನ್ನಣೆ ಇನ್ನು ಹೆಚ್ಚಾಗಿ ದೊರೆಯುತ್ತದೆ, ನೀವು ಅಂದು ಕೊಂಡ ಕೆಲಸ ಕಾರ್ಯಗಳು ಯಶಸ್ವಿಯಾಗಿ ನಡೆಯುತ್ತವೆ.

ನಿಮ್ಮನ್ನು ಭೇಟಿ ಮಾಡುವ ಜನರಲ್ಲಿ ನಿಮ್ಮಬಗ್ಗೆ ವಿನಯ ವಿಧೇಯತೆ ಇರುತ್ತದೆ, ನಿಮ್ಮ ಸ್ವ ಪ್ರಯತ್ನದಿಂದ ಜೀವನದಲ್ಲಿ ಪ್ರಗತಿ ಕಾಣುತ್ತೀರಿ ಆದ್ದರಿಂದ ಇತರರ ಅವಲಂಬನೆ ಮಾಡಬೇಡಿ. 2021 ವರ್ಷದಿಂದ ನಿಮ್ಮ ಅದೃಷ್ಟ ಖುಲಾಯಿಸುತ್ತದೆ. ನಿಮ್ಮಲ್ಲಿರುವ ಪ್ರಾಮಾಣಿಕತೆ ವ್ಯಕ್ತಿತ್ವ ನೋಡಿ ಮಿತ್ರರು ನಿಮ್ಮ ಜೊತೆ ಇರಲು ಇಷ್ಟ ಪಡುತ್ತಾರೆ. ನಿಮ್ಮ ಕನಸನ್ನು ನನಸಾಗಿಸಲು ಇದು ಸೂಕ್ತ ಸಮಯವಾಗಿದೆ.

ನಿಮ್ಮ ಮಿತ್ರರನ್ನು ಕಡೆಗಣಿಸಬೇಡಿ ಅವರನ್ನು ಅವಮಾನಿಸ ಬೇಡಿ ಕೆಲವೊಮ್ಮೆ ಅವರು ನಿಮಗೆ ಆಪತ್ಪಾಂಧವ ರೀತಿಯಲ್ಲಿ ನಿಮ್ಮಜೊತೆಯಾಗುತ್ತಾರೆ, ನಿಮ್ಮಪ್ರತಿಭೆಗೆ ತಕ್ಕ ಪ್ರತಿಫಲ ಈ ವರ್ಷ ಲಭಿಸಲಿದೆ. ನಿಮ್ಮ ಹಿತಶತ್ರುಗಳಿಂದ ಆದಷ್ಟು ದೂರವಿರಿ ಎಲ್ಲಾ ಕೆಲಸ ಕಾರ್ಯಗಳು ಸರಾಗವಾಗಿ ನಡೆಯುತ್ತವೆ. ಯಾವುದಾದರೊಂದು ಹಿಡಿದ ಕೆಲಸವನ್ನು ಸಂಪೂರ್ಣವಾಗಿ ಮುಗಿಸಿದ ನಂತರ ಇತರ ಕೆಲಸವನ್ನು ಕೈಗೆತ್ತಿಕೊಳ್ಳುವ ಗುಣದವರಾಗಿರುವುದರಿಂದ ಗೊಂದಲ ನಿಮ್ಮನ್ನು ಕಾಡುವುದಿಲ್ಲ. ವಿದ್ಯಾರ್ಥಿಗಳು ಓದಿನ ಕಡೆ ಹೆಚ್ಚಿನ ಗಮನ ನೀಡಬೇಕಾಗುತ್ತದೆ.

ನಿಮ್ಮ ಜಾತಕದಲ್ಲಿನ ದೊಷ ಸಮಸ್ಯೆಗಳ ಪರಿಹಾರಕ್ಕಾಗಿ ಶ್ರೀ ಗಣೇಶ ಸ್ತೋತ್ರ ಮಂತ್ರವನ್ನು ಪಠಿಸುವುದರಿಂದ ಒಳಿತಾಗುತ್ತದೆ. ನಿಮ್ಮ ಅದೃಷ್ಟದ ಸಂಖ್ಯೆಗಳು 3,5,6 ನಿಮಗೆಅದೃಷ್ಟದ ದಿನಗಳು ಬುಧವಾರ, ಗುರುವಾರ ಮತ್ತು ಶುಕ್ರವಾರಗಳಾಗಿವೆ. ಇನ್ನು ನಿಮಗೆ ಅದೃಷ್ಟತರುವ ಬಣ್ಣಗಳು ಅಂದರೆ ಹಸಿರು,ಹಳದಿ ಬಣ್ಣವಾಗಿದ್ದು ನಿಮಗೆ ಪಚ್ಛೆ, ವಜ್ರ, ಹವಳವು ನಿಮ್ಮ ಅದೃಷ್ಟದ ರತ್ನಗಳಾಗಿವೆ.

%d bloggers like this: