2021 ರಲ್ಲಿ ಮಿಥುನ ರಾಶಿಯವರ ಭವಿಷ್ಯ ಹೀಗಿರಲಿದೆ

ಈ ವರ್ಷದಲ್ಲಿ ಮಿಥುನ ರಾಶಿಯವರಿಗೆ ಎಚ್ಚರಿಕೆ ಜಾಗೃತಿ ಅಗತ್ಯ, ಹೌದು ಕೆಲವು ಜಾತಕ ರಾಶಿಗಳ ಫಲಾಫಲಗಳ ಅನುಗುಣವಾಗಿ ರಾಶಿಚಕ್ರದಲ್ಲಿರುವ ಒಂದಷ್ಟು ರಾಶಿಗಳಿಗೆ ಕಟ್ಟೆಚ್ಚರ ವಹಿಸುವುದು ಅನಾವಾರ್ಯವಾಗಿರುತ್ತದೆ, ಕೊಂಚ ಎಚ್ಚರ ತಪ್ಪಿದರು ಸಹ ಆ ವರ್ಷ ಪೂರ್ತಿ ಅವರು ನಿರಂತರ ಸಮಸ್ಯೆ, ತೊಂದರೆಗಳಿಂದ ನೋವು, ವೇದನೆ ಅನುಭವಿಸಬೇಕಾಗುತ್ತದೆ. ಆದ್ದರಿಂದ ಜ್ಯೋತಿಷ್ಯದಲ್ಲಿ ಸೂಚಿಸುವ ಕೆಲವು ರಾಶಿಗಳು ಜಾಗೃತಿಯಿಂದ ಇರಬೇಕಾಗುತ್ತದೆ. ಆ ರಾಶಿಗಳಲ್ಲಿ ಈ ಮಿಥುನ ರಾಶಿಯೂ ಕೂಡ ಒಂದಾಗಿದೆ. ಈ ಮಿಥುನ ರಾಶಿಯವರಿಗೆ ವರ್ಷದ ಮೊದಲ ಆರುತಿಂಗಳು ಸಂಕಷ್ಠ ಎದುರಾಗುತ್ತದೆ. ಕಾರಣ ರಾಹುಕೇತು, ಗುರುಶುಕ್ರ, ಸೂರ್ಯ ಚಂದ್ರ ಈ ಆರು ಗ್ರಹಗಳು ಕೂಡ ಎಂಟನೇಯ ಮನೆಯಲ್ಲಿ ಸ್ಥಾನ ಹೊಂದುವುದರಿಂದ, ಮಿಥುನ ರಾಶಿಯವರಿಗೆ ಕಂಟಕ ಎದುರಾಗುವ ಸಂಭವವಿದೆ.

ಸಮಾಜದಲ್ಲಿ ಉನ್ನತ, ಒಳ್ಳೆ ಸ್ಥಾನದಲ್ಲಿದ್ದವರು ಕೂಡ ಭ್ರಷ್ಟರಾಗುವ ಸಮಯ ಇದರಿಂದ ಅವರಿಗೆ ಅವಮಾನ, ಗೌರವಕ್ಕೆ ದಕ್ಕೆ ಬರುವಂತದ್ದಾಗಿರುತ್ತದೆ. ಇನ್ನು ಹಣಕಾಸಿನ ವಿಚಾರದಲ್ಲಿ ಮಾತ್ರ ಬಹಳ ಎಚ್ಚರಿಕೆಯಿಂದ, ಬುದ್ದಿವಂತಿಕೆಯಿಂದ ವ್ಯವಹರಿಸಬೇಕಾಗುತ್ತದೆ ಕೊಂಚ ಎಡವಿದರು ಸಹ ಅವರು ಜಿವನಪೂರ್ತಿ ಕಷ್ಟ ಪಟ್ಟು ದುಡಿದ ಹಣವನ್ನೆಲ್ಲಾ ಕಳೆದುಕೊಳ್ಳುವ ಸಾಧ್ಯತೆ ಇರುತ್ತದೆ. ಅದರಲ್ಲೂ ಈ ಬ್ಯಾಂಕಿಂಗ್, ಮ್ಯುಚ್ಯುವಲ್ ಫಂಡ್, ಷೇರು ಮಾರುಕಟ್ಟೆ ಯಂತಹ ಕ್ಷೇತ್ರಗಳಲ್ಲಿ ಹಣ ಹೂಡಿಕೆ ಮಾಡುವ ಮುಂಚೆ ಆಲೋಚಿಸಿ, ಗುರು ಹಿರಿಯರ ಸಲಹೆ, ಸಹಕಾರ ಪಡೆದುಕೊಂಡು ಹೆಜ್ಜೆಯಿಡುವುದು ಉತ್ತಮವಾಗಿರುತ್ತದೆ. ಇನ್ನು ಈ ಅಷ್ಟಾಧಿಪತಿಗಳು ಮಿಥುನ ರಾಶಿಯ ಮೇಲೆ ವಕ್ರದೃಷ್ಠಿ ಬೀರಿರುವುದರಿಂದ ಅನಾರೋಗ್ಯದ ಸಮಸ್ಯೆಗಳು ಕಾಡುತ್ತವೆ.

ಇನ್ನು ಭೂ ವ್ಯವಹಾರಗಳಲ್ಲಿ ಪಾಲ್ಗೋಳ್ಳಬೇಡಿ, ಇದರಲ್ಲಿ ನಿಮಗೆ ಧನನಷ್ಟ ಆಗುವ ಸಾಧ್ಯತೆ ಹೆಚ್ಚಾಗಿದೆ. ಇನ್ನು ವಿಧ್ಯಾರ್ಥಿಗಳು ಕಠಿಣ ಪರಿಶ್ರಮ ಹಾಕಲೇಬೇಕು, ಇಲ್ಲವಾದಲ್ಲಿ ವಿಧ್ಯಾಭ್ಯಾಸದ ಪ್ರಗತಿಯಲ್ಲಿ ಕುಂಠಿತ ಕಾಣುತ್ತಾರೆ. ಇನ್ನು ರಾಜಕೀಯ ಕ್ಷೇತ್ರದಲ್ಲಿ ಇರುವ ವ್ಯಕ್ತಿಗಳು ತಮ್ಮ ಪದವಿಯನ್ನು ಕಳೆದುಕೊಳ್ಳವ ಸಂಭವ ಹೆಚ್ಚಾಗಿದೆ. ಮಿಥುನ ರಾಶಿಯವರು ಆದಷ್ಟು ಹಸಿರು ಬಣ್ಣ ಉಪಯೋಗಿಸುವುದರಿಂದ ಅನಾವಶ್ಯಕವಾಗಿ ಎದುರಾಗುವ ಸಮಸ್ಯೆಗಳಿಂದ ಮುಕ್ತಿಗೊಳ್ಳಬಹುದು. ಸಕಲ ಸಂಕಷ್ಟ, ಸಮಸ್ಯೆಗಳ ಪರಿಹಾರಕ್ಕಾಗಿ ವಿಷ್ಣು ದೇವಾಲಯದಲ್ಲಿ ಹೆಸರುಬೇಳೆಯನ್ನು ದಾನಮಾಡಿ. ಜೊತೆಗೆ ಪ್ರತಿ ದಿನ ಬೆಳಿಗ್ಗೆ ದೇವರ ಪೂಜೆಯ ನಂತರ ಓಂ ಭಗವತೇ ವಾಸುದೇವಾಯ ನಮಃ ಎಂಬ ಮಂತ್ರ ಪಠನೆ ಮಾಡುವುದರಿಂದ ಸಕಲ ಸಮಸ್ಯೆಗಳು ನಿವಾರಣೆ ಆಗುತ್ತವೆ ಎಂದು ಖ್ಯಾತ ಜ್ಯೋತಿಷ್ಯಶಾಸ್ತ್ರಜ್ಞರು ತಿಳಿಸುತ್ತಾರೆ.

%d bloggers like this: