2021 ರಿಂದ ಈ ರಾಶಿಯವರಿಗೆ ರಾಜಯೋಗ ಇದೆ, ಅವಕಾಶಗಳನ್ನು ಬಿಡಬೇಡಿ

ನೀವು ಸಿಂಹ ರಾಶಿಯವರಾದರೆ ನೀವು ನಿಮ್ಮ ರಾಶಿಯ ಬಗ್ಗೆ ತಿಳಿದುಕೊಳ್ಳಲೇಬೇಕು. ಸಿಂಹ ರಾಶಿಯವರಿಗೆ ಮುಂದಿನ ವರ್ಷದಿಂದ ರಾಜಯೋಗ ಲಭಿಸುತ್ತದೆ. ಸಿಂಹ ರಾಶಿ ಮತ್ತು ಸಿಂಹ ಲಗ್ನ ದವರ ಗುಣಲಕ್ಷಣಗಳ ಬಗ್ಗೆ ಹೇಳುವುದಾದರೆ. ಸಿಂಹ ರಾಶಿಯವರು ಅಗ್ನಿ ತತ್ವದ ರಾಶಿ ಯವರಾಗಿದ್ದರೆ ಈ ರಾಶಿಯ ಅಧಿಪತಿ ಗುರು ಸೂರ್ಯಗ್ರಹವಾಗಿದ್ದು, ಸಿಂಹ ರಾಶಿಯವರ ವ್ಯಕ್ತಿತ್ವ ಎಲ್ಲರನ್ನು ಆಕರ್ಷಣೆ ಮಾಡುತ್ತದೆ.ಇವರ ಮುಖ ಮತ್ತು ಕಣ್ಣುಗಳು ತೇಜಸ್ಸಿನಿಂದ ಕೂಡಿರುತ್ತದೆ.

ಇವರು ಯಾವುದೇ ಬೆದರಿಕೆಗಳಿಗೆ ಅಂಜುವುದಿಲ್ಲ, ನಿರ್ಭೀತವಾದ ಜೀವನ ನಡೆಸುತ್ತಾರೆ. ಬಡವರನ್ನು ಕಂಡರೆ ಕರುಣೆ,ಸಹಾಯ ಮಾಡುವ ಗುಣ ವಿಶಾಲ ಹೃದಯವನ್ನು ಇವರು ಹೊಂದಿರುತ್ತಾರೆ. ಜೀವನದಲ್ಲಿ ಇವರು ಕೆಲವೊಂದು ಸಿದ್ಧಾಂತ ಆದರ್ಶಗಳನ್ನು ಮೈಗೂಡಿಸಿಕೊಂಡಿರುತ್ತಾರೆ, ಆದರ್ಶವಾಗಿ ಬದುಕುತ್ತಾರೆ. ಇವರು ಬುದ್ಧಿವಂತರಾಗಿದ್ದು ತಮ್ಮ ನಿರ್ಣಯದ ಬಗ್ಗೆ ಅಪಾರವಾದ ನಂಬಿಕೆ ವಿಶ್ವಾಸ ಹೊಂದಿರುತ್ತಾರೆ. ತಮ್ಮ ನಿರ್ಣಯವನ್ನು ಎಂದಿಗೂ ಬದಲಾಯಿಸುವುದಿಲ್ಲ ಅವರ ನಿರ್ಣಯವೇ ಅಂತಿಮವಾಗಿರುತ್ತದೆ, ಜೊತೆಗೆ ತಮ್ಮ ನಿರ್ಧಾರವನ್ನು ಸಮರ್ಥಿಸಿಕೊಳ್ಳುತ್ತಾರೆ.

ಸಿಂಹ ರಾಶಿಯವರು ಧಾರ್ಮಿಕ ಕಾರ್ಯಗಳಲ್ಲಿ ಹೆಚ್ಚು ತೊಡಗಿಸಿಕೊಳ್ಳುತ್ತಾರೆ. ಆದರೆ ಧಾರ್ಮಿಕ ನಂಬಿಕೆ ದೇವರ ಹೆಸರಲ್ಲಿ ಬೂಟಾಟಿಕೆ ಮಾಡುವಂತಹ ವ್ಯಕ್ತಿಗಳನ್ನು ಕಂಡರೆ ಜರಿಯುತ್ತಾರೆ.

ಜೀವನದಲ್ಲಿಸ್ಥಿರತೆಯನ್ನು ಕಾಪಾಡಿಕೊಂಡು ಒಂದೇ ರೀತಿಯ ವ್ಯಕ್ತಿತ್ವವನ್ನು ಉಳಿಸಿಕೊಳ್ಳುತ್ತಾರೆ. ಇವರು ಯಾರಿಗೂ ಕೂಡ ಮೋಸ ಮಾಡಲು ಇಚ್ಚಿಸುವುದಿಲ್ಲ, ಹಾಗೆಯೇ ತಾವು ಕೂಡ ಮೋಸ ಹೋಗಲು ಇಷ್ಟಪಡುವುದಿಲ್ಲ. ಇವರು ಬೇಗ ಕೋಪ ಮಾಡಿಕೊಳ್ಳುವರಾಗಿದ್ದು, ಅಷ್ಟೇ ಬೇಗ ಶಾಂತರಾಗುತ್ತಾರೆ. ಇವರು ಹೆಚ್ಚು ಬೆಟ್ಟಗುಡ್ಡ ಪ್ರದೇಶ ಗಳಿಗೆ ಪ್ರಯಾಣಿಸುವುದನ್ನು ಹವ್ಯಾಸವನ್ನಾಗಿ ಮಾಡಿಕೊಂಡಿರುತ್ತಾರೆ.

ಜೀವನದಲ್ಲಿ ಸ್ವಾಭಿಮಾನಿಯಾಗಿ ಬದುಕುತ್ತಾರೆ.ಬೇರೆಯವರ ಅಧೀನದಲ್ಲಿ ಕೆಲಸ ಮಾಡಲು ಇವರಿಗೆ ಇಷ್ಟ ಇರುವುದಿಲ್ಲ. ಜೀವನದಲ್ಲಿ ಒಳ್ಳೆಯ ಪ್ರಾಮಾಣಿಕ ಸಂಗಾತಿಯನ್ನು ನಿರೀಕ್ಷೆ ಮಾಡುತ್ತಾರೆ ಮತ್ತು ಇವರು ತಮ್ಮ ಪ್ರೀತಿಯನ್ನು ಕೊನೆಯವರೆಗೂ ಅವರಿಗಾಗಿಯೇ ಮೀಸಲಾಗಿ ಸುತ್ತಾರೆ. ಇವರು ತಮ್ಮ ಕೆಲವು ವೈಯಕ್ತಿಕ ವಿಷಯಗಳಲ್ಲಿ ಬೇರೆಯವರು ಮಾತನಾಡುವುದನ್ನು ಕಂಡರೆ ಇಷ್ಟಪಡುವುದಿಲ್ಲ.

ಸಿಂಹ ರಾಶಿ ಯವರು ಅಂದುಕೊಂಡಿದ್ದನ್ನು ಸಾಧಿಸುತ್ತಾರೆ. ಜೀವನದಲ್ಲಿ ರಾಜರಂತೆ ಬದುಕುವ ಕನಸನ್ನು ಹೊಂದಿರುತ್ತಾರೆ. ಐಷಾರಾಮಿ ಜೀವನದ ಜೊತೆಗೆ ತಮ್ಮ ಅಂತಸ್ತಿನ ಮಟ್ಟದ ಗೆಳೆಯರನ್ನ ಮಾತ್ರ ಸ್ನೇಹಿತರಾಗಿ ಮಾಡಿಕೊಳ್ಳಲು ಬಯಸುತ್ತಾರೆ.
ಇವರಿಗೆ ಸಲಹೆಗಳನ್ನು ಪಡೆದುಕೊಳ್ಳಲು ಇಷ್ಟಪಡುವುದಿಲ್ಲ ಆದರೆ ಇತರರಿಗೆ ಸಲಹೆಗಳನ್ನು ಕೊಡುತ್ತಾರೆ. ಸಿಂಹ ಲಗ್ನದ ವ್ಯಕ್ತಿಗಳುತಮ್ಮ ಭವಿಷ್ಯದ ಬಗ್ಗೆ ಅಪಾರವಾದ ನಂಬಿಕೆ ಕಾಳಜಿ ಮತ್ತು ಆಸಕ್ತಿಯನ್ನು ಹೊಂದಿರುತ್ತಾರೆ. ತಮ್ಮ ಸುತ್ತಮುತ್ತ ಇರುವವರನ್ನು ಖುಷಿಯಿಂದ ನೋಡಿಕೊಳ್ಳಲು ಇಚ್ಚಿಸುತ್ತಾರೆ.

ಸಿಂಹ ರಾಶಿಯವರು ವೃತ್ತಿಯನ್ನು ಆಯ್ಕೆ ಮಾಡಿಕೊಳ್ಳುವುದಾದರೆ ವ್ಯವಹಾರ ವ್ಯಾಪಾರ, ವಾಸ್ತುಶಿಲ್ಪ, ಚಿನ್ನ ವ್ಯಾಪಾರ, ನಟನೆ, ಮನರಂಜನೆ, ಸೇವಾವಲಯ ಇಂತಹ ಕ್ಷೇತ್ರಗಳಲ್ಲಿ ಯಶಸ್ಸನ್ನು ಸಾಧಿಸುತ್ತಾರೆ. ಇವರು ಅಹಂ ಗುಣವನ್ನು ಕಡಿಮೆ ಮಾಡಿಕೊಂಡರೆ ಇವರ ಜೀವನ ಉತ್ತಮವಾಗಿರುತ್ತದೆ ಇವರು ಕೆಲವೊಂದು ಸಮಸ್ಯೆಗಳಿಗೆ ಪರಿಹಾರ ಬಯಸಿದರೆ ಸೂರ್ಯನನ್ನು ಪ್ರತಿನಿತ್ಯ ಬೆಳಿಗ್ಗೆ ಸ್ಮರಣೆ ಮಾಡಬೇಕು. ಓಂ ಸೂರ್ಯಾಯ ನಮಃ ಎಂಬ ಮಂತ್ರವನ್ನು 108 ಸಲ ಪಠಿಸಬೇಕು. ಪ್ರತಿ ಭಾನುವಾರದಂದು ಗೋಧಿಯನ್ನು ಬಡವರಿಗೆ ದಾನ ಮಾಡಬೇಕು ಜೊತೆಗೆ ತಂದೆಯ ಸೇವೆಯನ್ನು ಮಾಡುವುದರಿಂದ ಇವರಿಗೆ ಶ್ರೇಯಸ್ಸು ಲಭಿಸುತ್ತದೆ.

%d bloggers like this: