2021 ರಲ್ಲಿ ಈ ರಾಶಿಯವರಿಗೆ ರಾಜಮಾನ ಹಾಗೂ ಆರ್ಥಿಕ ಸುಧಾರಣೆ ಆಗಲಿದೆ

ಈ 2021 ವರ್ಷದಿಂದ ಮಿಥುನ ರಾಶಿಯವರ ದಶಕಗಳ ಕನಸು ನನಸಾಗುವ ಸಮಯ ಒದಗಿ ಬಂದಿದೆ‌, ರಾಶಿ ಚಕ್ರಗಳಲ್ಲಿ ಸಂಚಾರ ಆರಂಭ ಮಾಡಿರುವ ಗುರುಗ್ರಹವು ಜನವರಿಯಿಂದ ಸೆಪ್ಟೆಂಬರ್ ಅಂತ್ಯದವರಿಗೆ ಅಷ್ಟಮ ಸ್ಥಾನದಲ್ಲಿ ಗುರು ಸ್ಥಾನ ಅಲಂಕರಿಸುವುದರಿಂದ ಈ ರಾಶಿಯವರಿಗೆ ಆರಂಭದ ವರ್ಷ ಶುಭಕರವಾಗಿರುವುದಿಲ್ಲ. ನಂತರದ ಕೆಲವು ತಿಂಗಳಲ್ಲಿ ಗುರು ಗ್ರಹವು ಅಷ್ಟಮ ಸ್ಥಾನದಿಂದ ನವಮ ಸ್ಥಾನಕ್ಕೆ ಸ್ಥಾನಪಲ್ಲಟಗೊಳ್ಳುತ್ತದೆ, ಆ ಸಮಯದಲ್ಲಿ ಮಿಥುನ ರಾಶಿಯವರಿಗೆ ರಾಜಮಾನದ ಜೊತೆಗೆ ಆರ್ಥಿಕ ಸುಧಾರಣೆ ಆಗುತ್ತದೆ. ಮಿಥುನ ರಾಶಿಯವರಿಗೆ ಗುರುಗ್ರಹ ನವಮ ಸ್ಥಾನಕ್ಕೆ ಆಗಮಿಸಿದ ನಂತರ ಕಳೆದ ಒಂದು ದಶಕದಿಂದ ಶ್ರಮಪಡುತ್ತಿದ್ದ ಕೆಲಸ ಕಾರ್ಯಗಳಿಗೆ ಚಾಲನೆ ಸಿಗುತ್ತದೆ.

ಅದಲ್ಲದೆ ವೇಗವಾಗಿ ವ್ಯಾಪಾರ ವ್ಯವಹಾರಗಳಲ್ಲಿ ಪ್ರಗತಿ ಕಂಡು ನಿರೀಕ್ಷೆ ಮೀರಿದ ಧನಲಾಭ ಆಗುತ್ತದೆ, ಇನ್ನು ಶನಿ ಗ್ರಹದ ವಕ್ರದೃಷ್ಟಿ ಬಿದ್ದರೂ ಕೂಡ ಸಮಸ್ಯೆಗಳಿಂದ ದೂರ ವಾಗುವ ಅವಕಾಶ ವಿರುತ್ತದೆ ಮತ್ತೆ ಅಷ್ಟಮ ಸ್ಥಾನಕ್ಕೆ ಗುರು ಸಂಚಾರವಾದಾಗ ನಿಮಗೆ ಸಂಕಷ್ಠಗಳು ತೊಂದರೆಗಳು ಕಾಡುತ್ತದೆ.

ವರ್ಷದ ಆರಂಭ ಜನವರಿ ತಿಂಗಳಿಂದ ಜುಲೈ ವರೆಗೂ ಆದಷ್ಟು ಎಚ್ಚರದಿಂದ ಇರಬೇಕು, ಅಷ್ಟಮ ಸ್ಥಾನಕ್ಕೆ ಗುರು ಬಂದಾಗ ನಿಮ್ಮ ಮನಸ್ಸಿಗೆ ಖೇದ ಉಂಟಾಗಿ ನೀವು ಅಂದುಕೊಂಡ ಕೆಲಸ ಕಾರ್ಯಗಳು ನಿಗಿದಿತ ಸಮಯಕ್ಕೆ ಆಗುವುದಿಲ್ಲ. ನಿಮ್ಮನ್ನು ಕಡೆಗಣಿಸಿ ಹೋದವರು ಮತ್ತೆ ನಿಮ್ಮ ಬಳಿ ಬರುತ್ತಾರೆ ಆದರೆ ಇವರು ನಿಮ್ಮ ಜೊತೆ ಶಾಶ್ವತವಾಗಿ ಇರುವುದಿಲ್ಲ ಪ್ರತಿಫಲಾಪೇಕ್ಷೆ ಬಯಸಿ ಬಂದ ವ್ಯಕ್ತಿ ಗಳಾಗಿರುತ್ತಾರೆ ಆದ್ದರಿಂದ ಮರಳಿ ಬಂದ ಸಂಗಾತಿ, ಮಿತ್ರರನ್ನ ನೆಚ್ಚಬೇಕಾದ ಅಗತ್ಯವಿರುವುದಿಲ್ಲ.

ನೀವು ನಂಬಿದ ವ್ಯಕ್ತಿಗಳು ಅವರನ್ನು ಗಾಢವಾಗಿ ಹಚ್ಚಿಕೊಂಡಿದ್ದ ನಿಮಗೆ ಅವರು ಬದುಕಿನ ಅರ್ಧ ದಾರಿಯಲ್ಲಿ ಬಿಟ್ಟು ಹೋಗಬಹುದು ಇದರಿಂದ ನಿಮಗೆ ಒಂದಷ್ಟು ತಿಂಗಳುಗಳ ಕಾಲ ಜೀವನದಲ್ಲಿ ಏಕತಾನತೆ ಆವರಿಸಿ ಜೀವನದಲ್ಲಿ ಜಿಗುಪ್ಸೆ ಬರುವಂತಹ ಸಂಧರ್ಭಗಳು ಎದುರಾಗುತ್ತದೆ, ಅಂತಹ ಸಂಧರ್ಭಗಳಲ್ಲಿ ಪುಣ್ಯ, ತೀರ್ಥ ಕ್ಷೇತ್ರಗಳಿಗೆ ಭೇಟಿ ನೀಡಿದರೆ ಒಳಿತಾಗುತ್ತದೆ. ಒಟ್ಟಾರೆಯಾಗಿ ಮಿಥುನ ರಾಶಿಯವರಿಗೆ ಈ 2021ವರ್ಷ ಮಿಶ್ರಫಲ ನೀಡುತ್ತದೆ.

%d bloggers like this: