ಈ 2021ರ ಹೊಸ ವರ್ಷದಿಂದ ಈ ಐದು ರಾಶಿಯವರಿಗೆ ಗುರುಬಲ ದೊರೆತು ರಾಜಯೋಗ, ನೀಚಭಂಗ ರಾಜಯೋಗ ಲಭಿಸುತ್ತದೆ. ಇದರಿಂದ ನಿಮಗೆ ನಿಮ್ಮ ಜೀವನದಲ್ಲಿ ಸುಖ, ಶಾಂತಿ ಸಂತೋಷ ದೊರೆಯುತ್ತದೆ. ನೀವು ರಾಜಕೀಯ ಕ್ಷೇತ್ರದಲ್ಲಿ ಇದ್ದರೆ ನೀವು ರಾಜಕೀಯವಾಗಿ ಪ್ರಗತಿ ಕಾಣುತ್ತೀರಿ, ಅವಿವಾಹಿತರಿಗೆ ವಿವಾಹ ಯೋಗವಿದೆ. ಮಕ್ಕಳಿಲ್ಲದ ದಂಪತಿಗಳಿಗೆ ಸಂತಾನ ಭಾಗ್ಯ ಸಿಗುತ್ತದೆ. ಗುರು ಗ್ರಹ ಕೃಪೆ ಅನುಗ್ರಹದಿಂದ ಈ ಐದು ರಾಶಿಯವರಿಗೆ ಯೋಗ ಶುಭಫಲಗಳು ಲಭಿಸುತ್ತದೆ, ಜ್ಯೋತಿಷ್ಯಶಾಸ್ತ್ರದ ಪ್ರಕಾರ ನವಗ್ರಹಗಳಲ್ಲಿ ಅತ್ಯಂತ ಶುಭಗ್ರಹ ವಾಗಿರುವುದು ಈ ಗುರುಗ್ರಹ. 2020 ನವೆಂಬರ್ 20ರಂದು ಹಗಲಿನ ಸಮಯ 1ಗಂಟೆ 33 ನಿಮಿಷಕ್ಕೆ ಧನಸ್ಸು ರಾಶಿಯಿಂದ ಮಕರ ರಾಶಿಯ ಕಡೆಗೆ ಗುರುಬಲ ಸಂಚರಿಸುತ್ತದೆ ಇದರಿಂದ ಈ 5 ರಾಶಿಯವರಿಗೆ ಈ ರಾಜಯೋಗವು ಲಭಿಸಿ ಅಧಿಕಾರ, ಹಣದ ಒಳಹರಿವು ಶುಭಫಲಗಳು ಹೆಚ್ಚಾಗುತ್ತದೆ.

ಗುರುಗ್ರಹವು ಇದೀಗ ಯಾವ ರಾಶಿಯಲ್ಲಿ ಸಂಚಾರ ಮಾಡುತ್ತಿದ್ದಾನೆ ಎನ್ನುವುದನ್ನು ತಿಳಿಯುವುದಾದರೆ ಉತ್ತರಾಷಾಡ ನಕ್ಷತ್ರ, ಶ್ರವಣ ನಕ್ಷತ್ರ ಧನಿಷ್ಠ ನಕ್ಷತ್ರ 1 ಮತ್ತು 2ನೇ ಪಾದದಲ್ಲಿ ಒಂದು ವರ್ಷ ಸಂಚಾರ ಗೊಳ್ಳುತ್ತಾನೆ, ಗುರುಗ್ರಹವು ರಾಶಿಚಕ್ರಗಳಾದ ಅಂದರೆ ಮೇಷ ರಾಶಿ ಇಂದ ಮೀನರಾಶಿಯವರಿಗೆ ಸಂಚಾರ ಮಾಡಲು 12ವರ್ಷ ಸಮಯಾವಧಿಯನ್ನು ತೆಗೆದುಕೊಳ್ಳುತ್ತಾನೆ. ಗುರು ಗ್ರಹವು ಎಲ್ಲ ಶಾಸ್ತ್ರಗಳನ್ನು ತಿಳಿದಿರುವುದರಿಂದ ಈ ಗುರುಗ್ರಹವನ್ನು ಬೃಹಸ್ಪತಿ ಎಂದು ಕರೆಯುತ್ತಾರೆ.
ಗುರು ಮತ್ತು ಶನಿ ಗ್ರಹವು ಕಾಲಪುರುಷನ ದಶಮ ಸ್ಥಾನದಲ್ಲಿ ಅಂದರೆ ಧರ್ಮ ಮತ್ತು ಧರ್ಮಾಧಿಪತಿಗಳು ಇರುವುದರಿಂದ ಇದನ್ನು ನೀಚಭಂಗ ರಾಜಯೋಗ ಎಂದು ಕರೆಯುತ್ತಾರೆ, ಸಾಡೇಸಾತಿ ನಡೆಯುತ್ತಿರುವ ವ್ಯಕ್ತಿಗಳಿಗೆ ಗುರುಗ್ರಹವು ಅನುಗ್ರಹ ನೀಡುತ್ತಾನೆ. ಶನಿ ದೇವರಿಗೆ ಗುರು ಭಗವಾನರ ಫಲ ಮತ್ತು ಗುರು ಭಗವಾನರಿಗೆ ಶನಿ ದೇವರ ಫಲ ಇದ್ದು ಇಬ್ಬರೂ ಮಹಾಸಂಧಿ ಆಗುತ್ತಾರೆ. ಆದ್ದರಿಂದ ಈ ಮಹಾ ಸಂಧ್ಯಾ ಫಲವು ಈ ಐದು ರಾಶಿಗಳಿಗೆ ಶುಭ ದೊರೆಯುತ್ತದೆ. ಯಾರ ಜಾತಕದಲ್ಲಿ ಗುರು ಪ್ರಬಲವಾಗಿರುತ್ತಾನೋ ಅಂತಹ ವ್ಯಕ್ತಿಗಳು ಗುರುಹಿರಿಯರಲ್ಲಿ ಭಕ್ತಿ ಗೌರವ ಹೊಂದಿರುತ್ತಾರೆ.

ಈ ಗುರು ಪ್ರಭಾವ ಬೀರುವ ರಾಶಿಯವರು ಧಾರ್ಮಿಕ ವಿಚಾರಗಳಲ್ಲಿ ಆಸಕ್ತ ರಾಗಿರುತ್ತಾರೆ. ಆಧ್ಯಾತ್ಮಿಕದಲ್ಲಿ ಪರಮಾನಂದವನ್ನು, ಸಂತೋಷವನ್ನು ಕಾಣುತ್ತಾರೆ. ಹಾಗಾದರೆ ಆ ಐದು ರಾಶಿಗಳು ಯಾವುವು ಎಂದು ಹೇಳುವುದಾದರೆ ರಾಶಿ ಚಕ್ರಗಳಲ್ಲಿ ಎರಡನೇ ರಾಶಿಯಾಗಿ ಬರುವುದು.
ವೃಷಭ ರಾಶಿ: ಈರಾಶಿಯವರಿಗೆ ಇಷ್ಟು ವರ್ಷ ಕಾಯುತ್ತಿದ್ದ ಶುಭಗಳಿಗೆ ಇದೀಗ ಸಮೀಪಿಸುತ್ತಿದೆ, ನಿಮಗೆ ಗುರು ಬಲ ಪ್ರಭಾವ ಬೀರಿ ಅದೃಷ್ಟ ಲಭಿಸುತ್ತದೆ. ಗುರು ಗ್ರಹವು 9ನೇ ಸ್ಥಾನ ಅಂದರೆ ಧರ್ಮಸ್ಥಾನ, ತೀರ್ಥಕ್ಷೇತ್ರ ಸ್ಥಾನದಲ್ಲಿ ಸಂಚರಿಸುವುದರಿಂದ ವೃಷಭ ರಾಶಿಯವರು ರಾಜಕೀಯ ಕ್ಷೇತ್ರಗಳಲ್ಲಿ ಸಕ್ರೀಯರಾಗಿದ್ದರೆ ನಿಮಗೆ ಭಾರಿ ಜನಬೆಂಬಲ ಸಿಗುತ್ತದೆ. ಚಿತ್ರರಂಗ ಸೆಲೆಬ್ರಿಟಿ ಯಾಗಿದ್ದರೆ ನಿಮ್ಮ ಸಿನಿಮಾಗಳು ಪ್ರಶಂಸೆ ಪಡೆದು ನಿಮಗೆ ಯಶಸ್ಸು ತಂದುಕೊಟ್ಟು ನಿಮ್ಮನ್ನು ಜನಪ್ರಿಯ ನಟರಾಗುತ್ತೀರಿ ಎನ್ನಬಹುದಾಗಿದೆ.

ಇನ್ನು ಈ ವೃಷಭರಾಶಿಯವರು ಸರಕಾರಿ ಉದ್ಯೋಗದಲ್ಲಿದ್ದರೆ ಸರ್ಕಾರದಿಂದ ಪ್ರಶಂಸೆ, ಗೌರವಕ್ಕೆ ಪಾತ್ರರಾಗುತ್ತೀರಿ. ವಿದ್ಯಾರ್ಥಿಗಳು ಅಪ್ರತಿಮ ಪ್ರತಿಭಾವಂತರಾಗಿ ಹೊರಹೊಮ್ಮುತ್ತಾರೆ. ಭಾಷಣಕಾರರಿಗೆ, ಬೋಧಕರಿಗೆ ವಿದೇಶಿ ಪ್ರಯಾಣದ ಅವಕಾಶ ಹೆಚ್ಚಾಗಿರುತ್ತದೆ.
ಇನ್ನೂ ರಾಶಿ ಚಕ್ರಗಳಲ್ಲಿ 4ನೇ ರಾಶಿಯಾಗಿರುವ ಕರ್ಕಾಟಕ ರಾಶಿಯವರಿಗೆ ಈ ವರ್ಷ ಗುರು ಒದಗಿಬರುತ್ತದೆ, ಇವರು ಬುದ್ಧಿವಂತರಾಗಿದ್ದು ವ್ಯವಹಾರದ ಕೌಶಲ್ಯಗಳನ್ನು ಹೊಂದಿದವರಾಗಿರುತ್ತಾರೆ. ಆದ್ದರಿಂದ ಇವರಿಗೆ ವ್ಯಾಪಾರ ವ್ಯವಹಾರಗಳಲ್ಲಿ ಅಧಿಕ ಲಾಭವಾಗುತ್ತದೆ. ಇವರಿಗೆ ಸ್ಫುರದ್ರೂಪಿಯಾದ ಬಾಳ ಸಂಗಾತಿ ಸಿಗುತ್ತಾರೆ. ಹುಡುಗಿಯರಿಗೆ ರಾಜಕುಮಾರನಂತಹ ಸದ್ಗುಣ ಇರುವ ಹುಡುಗ ನಿಮಗೆ ಜೀವನ ಸಂಗಾತಿಯಾಗಿ ಸಿಗುತ್ತಾರೆ. ಇನ್ನು ನಿಮಗೆ ತೀರ್ಥ ಕ್ಷೇತ್ರ ಪುಣ್ಯ ಕ್ಷೇತ್ರಗಳಿಗೆ ಭೇಟಿಯ ಅವಕಾಶ ಸಿಗುತ್ತದೆ.

ರಾಶಿ ಚಕ್ರಗಳಲ್ಲಿ 6ನೇ ರಾಶಿ ಯಾಗಿರುವ ಕನ್ಯಾರಾಶಿ ಅವರಿಗೂ ಕೂಡ ಈ ವರ್ಷ ಗುರುಬಲ ದೊರೆಯುತ್ತಿದ್ದು ನಿಮ್ಮಲ್ಲಿ ಇರುವಂತಹ ನಕಾರಾತ್ಮಕ ಆಲೋಚನೆಗಳು ದೂರವಾಗಿ ಸಕರಾತ್ಮಕವಾಗಿ ಅಲೋಚನೆ ಮೂಡುತ್ತದೆ. ಆತ್ಮವಿಶ್ವಾಸ ಹೆಚ್ಚಾಗುತ್ತದೆ ನಿಮಗೆ ಪಂಚಮ ಗುರು ನಿಮ್ಮರಾಶಿಮನೆಯಲ್ಲಿ ಇರುವುದರಿಂದ ನಿಮಗೆ ಉಚ್ಚಮಟ್ಟದ ಬುದ್ಧಿ ಪ್ರಾಪ್ತಿಯಾಗುತ್ತದೆ. ಅಂದರೆ ಸಲಹೆಗಾರ ರಾಗುವಂತಹ ಗುರುಯೋಗ ನಿಮ್ಮದಾಗುತ್ತದೆ. ನಿಮಗೆ ವಾಹನ ಖರೀದಿ ಯೋಗ, ಆಸ್ತಿಖರೀದಿ ಯೋಗವಿರುತ್ತದೆ. ಒತ್ತಡ ಜೀವನದಲ್ಲಿ ಸಿಲುಕಿ ಕಳೆದುಕೊಂಡಿದ್ದ ಮಕ್ಕಳೊಡನೆ ಒಡನಾಟ ಬಾಂಧವ್ಯ ಮತ್ತೆ ನಿಮಗೆ ಲಭಿಸುತ್ತದೆ. ಅವಿವಾಹಿತರಿಗೆ ವಿವಾಹ ಅಗುವ ಭಾಗ್ಯವಿದೆ.

ಇನ್ನು ಧನಸ್ಸು ರಾಶಿಯವರಿಗೂ ಕೂಡ ಈ ವರ್ಷ ಗುರುಬಲ ದೊರೆಯುತ್ತದೆ, ಎರಡನೇ ರಾಶಿ ಮನೆಯಲ್ಲಿ ಗುರು ಸಂಚಾರ ಆಗುತ್ತಿರುವುದರಿಂದ ಅದೃಷ್ಟ ನಿಮ್ಮದಾಗುತ್ತದೆ. ನೀವು ಯಾವುದೇ ಕೆಲಸ ಕಾರ್ಯಗಳಲ್ಲಿ ತೊಡಗಿಕೊಂಡರು ಸಹ ಜಯ ನಿಮ್ಮದಾಗುತ್ತದೆ, ಆಸ್ತಿ ಸಂಪಾದನೆ ಆಗುತ್ತದೆ. ನಿಮ್ಮ ಶತ್ರುಗಳು ಸಂಪೂರ್ಣ ನಿರ್ಮೂಲನೆಯಾಗುತ್ತಾರೆ ನಿಮಗೆ ಧನ ಪ್ರಾಪ್ತಿಯಾಗುತ್ತದೆ.

ಇನ್ನು ಗುರುಬಲ ಪ್ರಭಾವ ಬೀರುವಂತಹ ಕೊನೆಯ ರಾಶಿ ಮೀನ ರಾಶಿಯಾಗಿದ್ದು ಈ ರಾಶಿಯ ಅಧಿಪತಿ ಗುರು ವಾಗಿರುವುದರಿಂದ ಶುಭ ಫಲ ದೊರೆಯಲಿದ್ದು, ಗುರು ಏಕಾದಶ ಸ್ಥಾನದಲ್ಲಿ ಸಂಚಾರ ಮಾಡುತ್ತಿರುವುದರಿಂದ ನಿಮಗೆ ಅಧಿಕ ಲಾಭವಾಗುತ್ತದೆ. ತೀಕ್ಷ್ಣವಾದ ಬುದ್ಧಿಯನ್ನು ಪಡೆಯುತ್ತೀರಿ ಅಂದರೆ ಸೂಕ್ಷ್ಮತೆ ಹೆಚ್ಚಾಗಿ ಚಾಣಚಕ್ಯತೆ ಯಿಂದ ಕೆಲಸ ನಿರ್ವಹಿಸುತ್ತೀರಿ. ಬಡವರು ಶ್ರೀಮಂತರಾಗುತ್ತಾರೆ ಶ್ರೀಮಂತರಿಗೆ ಧೈರ್ಯ ಆತ್ಮ ವಿಶ್ವಾಸ ಹೆಚ್ಚಾಗುತ್ತದೆ. ನಿಮ್ಮ ಕ್ಷೇತ್ರಗಳಲ್ಲಿ ನೀವು
ಪ್ರಖ್ಯಾತಿ ಪಡೆಯುವ ಅವಕಾಶ ಇರುತ್ತದೆ. ನಿಮಗೆ ಅಷ್ಟ ಐಶ್ವರ್ಯಗಳು ಲಭಿಸಿ ಆರ್ಥಿಕವಾಗಿ ಬಲಿಷ್ಠರಾಗುವಿರಿ. ಹಲವು ಮಂದಿ ಸನ್ಮಿತ್ರರು ನಿಮಗೆ ಸಿಗುತ್ತಾರೆ.
ಒಟ್ಟಾರೆಯಾಗಿ ಈ ಐದು ರಾಶಿಯವರಿಗೆ ಗುರುಬಲ ದೊರೆತು ಯೋಗಾಯೋಗಗಳು ಈ ರಾಶಿಯ ವ್ಯಕ್ತಿಗಳಿಗೆ ಲಭಿಸುತ್ತದೆ ಎಂದು ಜ್ಯೋತಿಷ್ಯಶಾಸ್ತ್ರಜ್ಞರು ತಿಳಿಸುತ್ತಾರೆ.