2021ಕ್ಕೆ ಈ 5 ರಾಶಿಯವರ ಚಕ್ರದಲ್ಲಿ ರಾಜಯೋಗ ಲಭ್ಯವಿದೆ, ಅವಕಾಶಗನ್ನೆಲ್ಲಾ ಉಪಯೋಗ ಮಾಡಿಕೊಳ್ಳಿ

ಮುಂದಿನ ವರ್ಷದಿಂದ ಅಂದರೆ 2021ರ ಅವಧಿಯಲ್ಲಿ ರಾಶಿ ಚಕ್ರದಲ್ಲಿರುವ ವಿವಿಧ ರಾಶಿಗಳು ರಾಜಯೋಗ ಪಡೆಯುವಂತಹ ಸಾಧ್ಯತೆ ಇದೆ. ಹಾಗಾದರೆ ಆ ರಾಶಿಗಳ ಬಗ್ಗೆ ತಿಳಿಯೋಣ. ಮೊದಲನೇಯದಾಗಿ ವೃಷಭರಾಶಿ, ಈ ರಾಶಿಯವರಿಗೆ ಸಮಾಜದಲ್ಲಿ ವಿಶೇಷವಾದ ಸ್ಥಾನಮಾನ, ಮನೆಯವರಿಂದ ನಿಮ್ಮ ಎಲ್ಲಾ ಕಾರ್ಯಗಳಿಗೆ ಪ್ರೋತ್ಸಾಹ ನೀಡುತ್ತಾರೆ. ವ್ಯಾಪಾರ ವ್ಯಹಹಾರಗಳಲ್ಲಿ ನಿರೀಕ್ಷೆಗೂ ಮೀರಿದ ಲಾಭವಾಗುತ್ತದೆ. ಒಟ್ಟಾರೆಯಾಗಿ ಸರ್ವತೋಮುಖ ಅಭಿವೃದ್ಧಿ ಕಾಣಲಿದೆ. ಜೊತೆಗೆ ಆಸ್ತಿ ಖರೀದಿ ಯೋಗ, ವಾಹನ ಖರೀದಿ ಯೋಗ ಲಭಿಸಲಿದೆ. ಅವಿವಾಹಿತರಿಗೆ ಮದುವೆಯ ಒಪ್ಪಂದ, ಮದುವೆಯಾಗಿ ವರ್ಷಾನುಗಳಿಂದ ಮಕ್ಕಳಾಗದೇ ಇರುವ ಜೋಡಿಗಳಿಗೆ ಸಂತಾನ ಯೋಗ ಪ್ರಾಪ್ತಿಯಾಗುತ್ತದೆ. ತೀರ್ಥಕ್ಷೇತ್ರ ಭೇಟಿ ಮಾಡುವ ಅವಕಾಶಯಿದೆ.

ನಿಮಗೆ ಹಿಂದಿರುಗಿ ಬರಬೇಕಾದ ಸಾಲಗಳು ವಾಪಸ್ ಬರುವುದರ ಜೊತೆಗೆ ಪಡೆದ ಸಾಲವನ್ನು ಹಿಂದಿರುಗಿಸಿ ನೀವು ಕೊಡುವುದು. ಕೋರ್ಟು ಕಚೇರಿ ವಿಚಾರದಲ್ಲಿ ಜಯ ಹಾಗು ವ್ಯಾಪಾರದಲ್ಲಿ ಅತ್ಯಧಿಕ ಲಾಭ ದೊರೆಯುತ್ತದೆ.

ಕರ್ಕಾಟಕ: ಈ ರಾಶಿಯವರಿಗೆ ಮುಂದಿನ ವರ್ಷದಿಂದ ಆರ್ಥಿಕವಾಗಿ ಚೇತರಿಕೆ ಕಾಣುತ್ತೀರಿ. ನಿಮಗೆ ಧನಲಾಭ, ಸಂಪತ್ತು ಅಭಿವೃದ್ಧಿ ಆಗುತ್ತದೆ. ಪಾಲುದಾರಿಕೆ ವ್ಯವಹಾರದಲ್ಲಿ ಅತ್ಯಧಿಕ ಲಾಭ ಉದ್ಯೋಗದಲ್ಲಿ ಬಡ್ತಿ ದೊರೆಯುತ್ತದೆ. ಸರ್ಕಾರಿ ಅಧಿಕಾರಿಗಳಿಗೆ ಬಡ್ತಿ ಸಿಗುವಂತಹ ಅವಕಾಶಯಿದೆ. ಮಿಷನರಿ ಉಪಕರಣಗಳ ವ್ಯವಹಾರದಿಂದ ನಿರೀಕ್ಷೆಗೂ ಮೀರಿ ಲಾಭವಾಗುತ್ತದೆ. ಸಿವಿಲ್ ಇಂಜಿನಿಯರಿಂಗ್ ಮತ್ತು ಸಿನಿಮಾ, ಹೋಟೇಲ್ ಉದ್ಯಮದಲ್ಲಿ ಯಶಸ್ಸು ಕಾಣುವಿರಿ ಮತ್ತು ವಿದ್ಯಾರ್ಥಿಗಳಿಗೆ ಒಳ್ಳೆಯ ಭವಿಷ್ಯವಿದೆ.

ಮೂರನೆಯದಾಗಿ ಕನ್ಯಾರಾಶಿ: ಈ ಕನ್ಯಾರಾಶಿಯವರಿಗೆ ವಿಶೇಷವಾದ ಸ್ಥಾನಮಾನ ಪಡೆಯುವುದು ಮತ್ತು ಮಕ್ಕಳಿಲ್ಲದವರಿಗೆ ಸಂತಾನ ಯೋಗ ಬರುತ್ತದೆ. ಕಟ್ಟಡ ನಿರ್ಮಾಣ, ಗೃಹಪಯೋಗಿ ವಸ್ತು ಖರೀದಿ, ಕೃಷಿ ಜಮೀನು ಖರೀದಿ ಮಾಡುವಂತಹ ಯೋಗವಿದೆ. ಅಲಂಕಾರಿಕ ವಸ್ತು ಖರೀದಿ, ಆಸ್ತಿ ಸಂಪಾದನೆ, ಜಮೀನು ಖರೀದಿಗೆ ಸೂಕ್ತ ಸಮಯವಾಗಿದೆ. ಇನ್ನು ಖಾಸಗಿ ವಲಯದಲ್ಲಿ ಕೆಲಸ ಮಾಡುವಂತ ಉದ್ಯೋಗಿಗಳಿಗೆ ಉನ್ನತ ಮಟ್ಟದ ಅಧಿಕಾರಿಗಳಿಂದ ಪ್ರಶಂಸೆ ದೊರೆಯುತ್ತದೆ. ಕೋರ್ಟ್ ಕಚೇರಿ ಕೆಲಸಗಳಲ್ಲಿ ಜಯ. ಮನೆಯಲ್ಲಿ ಸುಖ ಶಾಂತಿ ನೆಮ್ಮದಿ ಪ್ರಾಪ್ತವಾಗುತ್ತದೆ. ಪಾಲುದಾರಿಕೆ ವ್ಯವಹಾರಗಳಲ್ಲಿ ನೀರೀಕ್ಷೆಗಿಂತ ವರಮಾನ ಸಿಗುವುದು. ಹಣಕಾಸಿನ ಸಮಸ್ಯೆ ನಿವಾರಣೆಯಾಗಿ ಆರ್ಥಿಕ ಚೇತರಿಕೆ, ಧಾರ್ಮಿಕ ಮಂಟಪ, ಕಲ್ಯಾಣ ಮಂಟಪ ಕಟ್ಟಿಸುವ ಅವಕಾಶವಾಗಿದೆ.

ಧನಸ್ಸು ರಾಶಿ: ಈ ರಾಶಿಯವರಿಗೆ ಹಣಕಾಸು ಸಮಸ್ಯೆ ನಿವಾರಣೆಯಾಗುತ್ತದೆ, ಹಿಂದೆ ಕೆಲಸ ಮಾಡುತ್ತಿದ್ದ ಕಂಪನಿಯಲ್ಲಿ ಕೀರ್ತಿ ಲಭಿಸುತ್ತದೆ. ಆಸ್ತಿಪಾಸ್ತಿ ಸಂಪಾದನೆ ಮಾಡುವ ಯೋಗವಿದೆ. ಸರ್ಕಾರಿ ಕೆಲಸ ಇಚ್ಛೆವುಳ್ಳವರಿಗೆ ಅವಕಾಶವಿದೆ. ಇಷ್ಟು ವರ್ಷ ಕಾದಿರುವ ನಿಮ್ಮ ಕನಸಿನ ಉನ್ನತ ಸ್ಥಾನಕ್ಕೆ ಪ್ರಮೋಷನ್ ದೊರೆಯುತ್ತದೆ.

ಮೀನ ರಾಶಿ: ಶುಭಕರ ದಿನಗಳಾಗಿವೆ ಆರ್ಥಿಕ ವಿಚಾರದಲ್ಲಿ ಲಾಭದಾಯಕ ಎಲ್ಲಾ ಕ್ಷೇತ್ರದಲ್ಲಿಯೂ ಯಶಸ್ಸು ದೊರೆಯುತ್ತದೆ. ಮನೆಯಲ್ಲಿ ಶಾಂತಿ ನೆಲೆಸುತ್ತದೆ. ನಿಮ್ಮ ಎಲ್ಲಾ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಸಿಗುತ್ತದೆ. ಆಸ್ತಿ ಖರೀದಿ ಯೋಗವಿದೆ. ಕೃಷಿ ಜಮೀನು ಖರೀದಿ, ಕೃಷಿ ಉಪಕರಣಗಳ ಖರೀದಿ ಇರುವಂತದ್ದು. ಸತಿಪತಿ ಕಲಹಗಳು ದೂರವಾಗಿ ಕುಟುಂಬದಲ್ಲಿ ಸುಖ ಶಾಂತಿ ನೆಮ್ಮದಿ ದೊರೆಯುತ್ತದೆ. ಮೀನ ರಾಶಿಯವರು ಸಿನಿಮಾ, ರಾಜಕೀಯ, ಹೋಟೇಲ್ ಉದ್ಯಮದಲ್ಲಿ ತೊಡಗಿಸಿಕೊಂಡಿದ್ದರೆ ಅಧಿಕ ಲಾಭವಾಗಿ ಯಶಸ್ಸು ದೊರೆಯುತ್ತದೆ. ಒಟ್ಟಾರೆಯಾಗಿ ಮುಂದಿನ ವರ್ಷದಲ್ಲಿ ಈ ಐದು ರಾಶಿಯವರಿಗೆ ರಾಜಯೋಗ ಲಭಿಸುತ್ತದೆ ಜ್ಯೋತಿಷ್ಯಶಾಸ್ತ್ರಜ್ಞರು ತಿಳಿಸುತ್ತಾರೆ.

%d bloggers like this: