2021ಕ್ಕೆ ಈ ರಾಶಿಯವರಿಗೆ ಗುರುಬಲ ಕಡಿಮೆ ಇದೆ, ಸ್ವಲ್ಪ ಎಚ್ಚರದಿಂದ ಮುನ್ನಡೆಯಿರಿ

ಕನ್ಯಾ ರಾಶಿ ಅವರಿಗೆ 2021 ವರ್ಷ ಭವಿಷ್ಯ ಹೇಗಿರುತ್ತದೆ ಯಾರು ಕೂಡ ಊಹಿಸಲಾಗದ ವರ್ಷ 2021 ಅಷ್ಟರ ಮಟ್ಟಿಗೆ ಬದಲಾವಣೆ ತರುವಂತಹ ವರ್ಷವಾಗಿರುತ್ತದೆ. ಈ ರಾಶಿ ಚಕ್ರಗಳ ಆಧಾರದ ಮೇಲೆ ಕೆಲವರಿಗೆ ಅದೃಷ್ಟದ ಅವಕಾಶಗಳು ಕೂಡಿಬರುತ್ತದೆ. ಕನ್ಯಾ ರಾಶಿಯು ಪೃಥ್ವಿ ತತ್ವ ರಾಶಿ ಆಗಿರುತ್ತದೆ. ಈ ರಾಶಿಗೆ ಅಧಿಪತಿಯಾಗಿ ಬುಧ ಗ್ರಹ ಪ್ರಭಾವ ಬೀರುತ್ತದೆ. ಕನ್ಯಾರಾಶಿಯವರ ವೃತ್ತಿ ಜೀವನದಲ್ಲಿ ಏರುಪೇರು ಆಗುವ ಸಾಧ್ಯತೆ ಇದೆ. ಅದು ಸಹ ವರ್ಗಾವಣೆ ರೂಪದಲ್ಲಿ ಹೌದು ಯಾವುದೋ ಹಳೆಯ ಪ್ರಕರಣಗಳಿಗೆ ಸಂಬಂಧಿಸಿದಂತೆ ಉದ್ಯೋಗದಲ್ಲಿ ಅಮಾನತು ಆಗುವ ಸಂಭವಿರುತ್ತದೆ.

ವೈವಾಹಿಕ ಜೀವನದಲ್ಲಿ ನಿಮ್ಮ ಬಾಳ ಸಂಗಾತಿಯು ನಿಮಗೆ ಇಂತಹ ಸಮಯದಲ್ಲಿ ಬೆನ್ನೆಲುಬಾಗಿ ನಿಲ್ಲುತ್ತಾರೆ, ಈ ಕನ್ಯಾ ರಾಶಿಯವರ ವ್ಯಕ್ತಿತ್ವ, ಗುಣ ಲಕ್ಷಣಗಳನ್ನು ತಿಳಿಯುವುದಾದರೆ ಇವರು ತನ್ನ ಸೌಂದರ್ಯದಿಂದ ಎಲ್ಲರನ್ನು ಆಕರ್ಷಿಸುತ್ತಾರೆ. ಇತರರನ್ನು ಸೆಳೆಯುವಂತಹ ವ್ಯಕ್ತಿತ್ವ ಹೊಂದಿರುತ್ತಾರೆ. ಕನ್ಯಾ ರಾಶಿಯವರು ಸದಾ ಚಿರಯೌವ್ವನರಾಗಿ ಕಾಣುತ್ತಿರುತ್ತಾರೆ. ಎಷ್ಟೇ ವಯಸ್ಸಾದರೂ ಕೂಡ ಯುವಕರಂತೆ ಇರುತ್ತಾರೆ ಇದು ಇವರಿಗೆ ದೇವರು ಕೊಟ್ಟ ವರವಾಗಿರುತ್ತದೆ.

ಈ ರಾಶಿಯವರು ಗಾಂಭೀರ್ಯ ವ್ಯಕ್ತಿತ್ವ ವುಳ್ಳವರಾಗಿದ್ದು, ಮುಖದಲ್ಲಿಮುಗ್ದತೆಯನ್ನು ಉಳಿಸಿಕೊಂಡಿರುತ್ತಾರೆ. ಅದೇ ರೀತಿಯಾಗಿ ಇವರು ಇತರರಿಗೆ ದ್ರೋಹ, ಮೋಸ ಮಾಡಲು ಇಚ್ಚಿಸುವುದಿಲ್ಲ. ಇವರಿಗೆ ನಕರಾತ್ಮಕತೆಯು ಹೆಚ್ಚು ಕಾಡುತ್ತದೆ. ಯಾವುದೇ ಕೆಲಸದಲ್ಲಿಯೂ ಸ್ಪಷ್ಟವಾದ ನಿರ್ಧಾರ ಹೊಂದಿರುವುದಿಲ್ಲ. ಆ ಕೆಲಸ ಕಾರ್ಯಗಳು ಆಗುತ್ತೋ ಇಲ್ಲವೋ ಎಂಬ ರೀತಿಯಲ್ಲಿ ಧ್ವಂದ್ವ ನಿಲುವಿನಲ್ಲಿ ಇರುತ್ತಾರೆ.

ಕನ್ಯ ರಾಶಿಯವರಿಗೆ ಮುಂದಿನ 2021 ವರ್ಷದಲ್ಲಿ ಗ್ರಹ ಗತಿಗಳಲ್ಲಿ ಭಾರಿ ಬದಲಾವಣೆ ಆಗುತ್ತದೆ, ಶನಿಗ್ರಹವು ಐದನೇ ಮನೆಯಲ್ಲಿ ಸ್ಥಾನ ಅಲಂಕರಿಸಲಿದ್ದು, ಗುರು ಗ್ರಹವು ಕನ್ಯಾ ರಾಶಿಯ ಐದನೇ ಮನೆಯಿಂದ ಸಂಚರಿಸುವುದರಿಂದ ಕನ್ಯಾರಾಶಿಯ ವ್ಯಕ್ತಿಗಳಿಗೆ ಗುರುಬಲ ಕಳೆದು ಹೋಗುತ್ತದೆ.

ಕನ್ಯಾ ರಾಶಿಯವರಿಗೆ ಈ ಗುರುಬಲ ಮುಗಿಯುವುದರಿಂದ ಕೆಲವು ತೊಂದರೆಗಳನ್ನು ಎದುರಿಸಬೇಕಾಗುತ್ತದೆ, ವ್ಯಾಪರ ವ್ಯವಹಾರಗಳಲ್ಲಿ ಪಾಲುದಾರಿಕೆ ಹೊಂದಿರುವವರು ಹೊಸದಾಗಿ ಒಪ್ಪಂದ ಮಾಡಿಕೊಳ್ಳುವಾಗ ಆದಷ್ಟು ಎಚ್ಚರದಿಂದ ಬುದ್ದಿವಂತಿಕೆಯಿಂದ ವ್ಯವಹರಿಸಬೇಕು ಇಲ್ಲವಾದಲ್ಲಿ ಅಪಾರ ಕಟ್ಟಿಟ್ಟ ಬುತ್ತಿಯಾಗಿದೆ. ವಿಧ್ಯಾರ್ಥಿಗಳು ತಮ್ಮ ವಿಧ್ಯಾಭ್ಯಾಸದಲ್ಲಿ ಕಠಿಣ ಪರಿಶ್ರಮ ಅತ್ಯಗತ್ಯವಾಗಿದೆ. ನಿರ್ಲಕ್ಷ್ಯ ಮಾಡಿದರೆ ಸ್ಪರ್ಧಾತ್ಮಕ ಪರೀಕ್ಷೆ ಅಥವಾ ಇತರೆ ಯಾವುದೇ ಪರೀಕ್ಷೆಗಳಲ್ಲಿ ಯಶಸ್ಸಾಗುವುದಿಲ್ಲ.

ಇನ್ನು ಆರೋಗ್ಯದ ವಿಚಾರವಾಗಿ ನಿಮ್ಮ ಮಕ್ಕಳ ಆರೋಗ್ಯದಲ್ಲಿ ಏರುಪೇರಾಗುವ ಸಾಧ್ಯತೆ ಇದೆ, ಆದ್ದರಿಂದ ಮಕ್ಕಳ ಬಗ್ಗೆ ಗಮನವರಿಸಿ. ಇನ್ನು ವೈವಾಹಿಕ ಜೀವನಕ್ಕೆ ಸಂಬಂಧಿಸಿದಂತೆ ನೀವು ಅವಿವಾಹಿತರಿಗೆ ಕಂಕಣ ಬಲ ಕೂಡಿಬಂದಿದ್ದು ಮುಂದಿನ ವರ್ಷ ಮದುವೆ ಯಾಗುವ ಅವಕಾಶವಿದೆ. ನಿಮಗೆ ಆರ್ಥಿಕವಾಗಿ ಪ್ರಗತಿ ಕಾಣಲು ಒಳ್ಳೆಯ ಅವಕಾಶಗಳಿವೆ. ಹಣಗಳಿಸುವ ದಾರಿಗಳಿದ್ದರು ಸಹ ನಿಮಗೆ ಕುಟುಂಬದವರ ಅಸಹಕಾರದಿಂದ ನಿಮ್ಮ ವೃತ್ತಿ, ಉದ್ಯೋಗದಲ್ಲಿ ಅಡಚಣೆಗಳು ಕಾಡುತ್ತವೆ.

%d bloggers like this: