2021ರ ಐಪಿಎಲ್ ಅಲ್ಲಿ ಆರ್ಸಿಬಿಯ ಈ ಪ್ರಮುಖ ಆಟಗಾರರೆಲ್ಲಾ ಹೊರಕ್ಕೆ

2021 ಭಾರತೀಯ ಪ್ರೀಮಿಯರ್ ಲೀಗ್ ಪಂದ್ಯದ ಆಟಗಾರರ ಹರಾಜು ಪ್ರಕ್ರಿಯೆ ಆರಂಭವಾಗುವ ಮುನ್ನವೇ ಅಸಮರ್ಥ ಆಟಗಾರರಿಗೆ ಕೊಕ್ ಕೊಡಲು ಆಯ್ಕೆ ಸಮಿತಿ ನಿರ್ಧರಿಸಿದೆ ಎನ್ನಲಾಗಿದೆ. ಇನ್ನು ಈ ಹರಾಜು ಪ್ರಕಿಯೆಯು ಫೆಬ್ರವರಿ 11 ರಿಂದ ಆರಂಭವಮಾಡುವ ಸಾಧ್ಯತೆಯಿದೆ. ಇನ್ನು ಎಂಟು ತಂಡಗಳ ಆಟಗಾರರ ಪಟ್ಟಿಯನ್ನು ಬಿಡುಗಡೆ ಗೊಳಿಸಲು ಆಯಾ ಫ್ರಾಂಚೈಸಿಗಳಿಗೆ ಜನವರಿ 21 ರವರೆಗೆ ಕಾಲಾವಕಾಶ ನೀಡಲಾಗಿದೆ. ಕಳೆದ 2020 ನಲ್ಲಿ ನಡೆದ 13ನೇ ಆವೃತ್ತಿಯ ಐಪಿಎಲ್ ಪಂದ್ಯದಲ್ಲಿ ವಿರಾಟ್ ಕೊಹ್ಲಿ ನಾಯಕತ್ವದ ಆರ್.ಸಿ.ಬಿ ತಂಡ ಪ್ಲೇ ಆಫ್ ತಲುಪುವುದಕ್ಕೆ ಸೀಮಿತಗೊಂಡು ಫೈನಲ್ನಿಂದ ಹೊರಬಿದ್ದಿತ್ತು. ಆ ಸಂಧರ್ಭದಲ್ಲಿ ಕೊಹ್ಲಿ ನಾಯಕತ್ವದ ಬಗ್ಗೆ ಅಪಸ್ವರ ಕೇಳಿಬಂದಿತ್ತು, ಜೊತೆಗೆ ತಂಡದಲ್ಲಿ ಒಂದಷ್ಟು ಆಟಗಾರರನ್ನು ತೆಗೆಯಬೇಕು ಎಂಬ ಅಭಿಪ್ರಾಯವು ಕೂಡ ಸಾರ್ವಜನಿಕ ವಲಯದಲ್ಲಿ ಕೇಳಿಬಂದಿದ್ದವು. ಇದೆಲ್ಲಾ ಕಾರಣಗಳಿಂದಾಗಿ 2021 14ನೇ ಆವೃತ್ತಿಯ ಐಪಿಎಲ್ ನಲ್ಲಿ ಆರ್ಸಿಬಿ ತಂಡದ ಒಂದಷ್ಟು ಆಟಗಾರರನ್ನು ಬದಲಾವಣೆ ಮಾಡುವ ಸಾಧ್ಯತೆಯಿದೆ ಎನ್ನಲಾಗಿದೆ.

ಆರ್ಸಿಬಿ ತಂಡದಲ್ಲಿ ಮತ್ತೆ ಮುಂದುವರಿಯುವ ಸಾಧ್ಯತೆ ಯಿರುವ ಆಟಗಾರರು ವಿರಾಟ್ ಕೊಹ್ಲಿ, ಮೊಹಮ್ಮದ್ ಸಿರಾಜ್, ದೇವದತ್ ಪಡಿಕ್ಕಲ್, ಯಜುವೇಂದ್ರ
ಚಾಹಲ್, ನವದೀಪ್ ಶೈನಿ, ಶಿವಂದುಬೆ, ವಾಷಿಂಗ್ ಟನ್ ಸುಂದರ್ ಆರ್ಸಿಬಿ ತಂಡದಲ್ಲಿ ಮುಂದುವರಿದರೆ, ಸೌತ್ ಆಫ್ರಿಕಾದ ಕಿಸ್ ಮಾರೀಸ್, ಇಂಗ್ಲೆಂಡ್ ನ ಮೊಯಿನ್ ಅಲಿ, ಆಸೀಸ್ ನಾಯಕ ಅರನ್ ಫಿಂಚ್, ಗುರುಕೀರತ್ ಸಿಂಗ್, ಮುಂದಿನ ಆರ್ಸಿಬಿ ಪಂದ್ಯದಲ್ಲಿ ಮುಂದುವರಿಯುವ ಅವಕಾಶ ಕಡಿಮೆ ಎಂದು ಹೇಳಲಾಗುತ್ತಿದೆ.

ಇನ್ನು ದಕ್ಷಿಣ ಆಫ್ರಿಕಾದ ವೇಗಿ ಡೇಲ್ ಸ್ಟೇನ್ ಮುಂದಿನ ಐಪಿಎಲ್ ಪಂದ್ಯದಲ್ಲಾ ಆಟ ಆಡುವುದಿಲ್ಲ ಎಂದು ಅವರೇ ಸ್ವತಃ ಹೇಳಿದ್ದರು. ಪಾರ್ಥೀವ್ ಪಾಟೀಲ್, ಎಲೋನ್, ಇಸುರು ಉದಾನ, ಕೇನ್ ರಿಚರ್ಡ್ಸಸನ್, ಜೋಶ್ ಫಿಲಿಪ್ ಕೂಡ ಪಂದ್ಯದಲ್ಲಿ ಆಡಬಹುದಾಗಿದೆ. ಆದರೆ ಕನ್ನಡಿಗ ಪವನ್ ದೇಶ್ ಪಾಂಡೆ ಮತ್ತು ಪವನ್ ನೇಗಿ ಅವರ ಬಗ್ಗೆ ಆರ್ಸಿಬಿ ಅನುಮಾನ ವ್ಯಕ್ತ ಪಡಿಸಿದ್ದಾರೆ.ವಿರಾಟ್ ಕೊಹ್ಲಿಯ ನೇತೃತ್ವದ್ಲಲಿ ಆರ್ಸಿಬಿ ತಂಡ ಸತತವಾಗಿ ಮುಗ್ಗುರಿಸಿದೆ, ಆದ್ದರಿಂದ 14ನೇ ಆವೃತ್ತಿಯ ಐಪಿಎಲ್ ಪಂದ್ಯ ಎಲ್ಲಿ ನಡೆಯಬಹುದು ಎಂಬುದು ಗೊತ್ತಿಲ್ಲವಾದ್ದರಿಂದ ಆರ್ಸಿಬಿ ತಂಡದಲ್ಲಿರುವ ನ್ಯುನತೆಯನ್ನು ಸರಿಪಡಿಸಲು ಆರಂಭಿಕ ಜೋಡಿ, ಮಧ್ಯಮ ಕ್ರಮಾಂಕದ ಆಟಗಾರರನ್ನು ಸೂಕ್ತವಾಗಿ ಆಯ್ಕೆ ಮಾಡಿ ಆರ್ಸಿಬಿ ತಂಡವನ್ನು ಬಲಿಷ್ಟಗೊಳಿಸುವ ಪ್ರಯತ್ನ ಮಾಡಲಾಗುತ್ತಿದೆ.

%d bloggers like this: