2021ರ ಶುರುವಿನಿಂದಲೇ ಈ ರಾಶಿಯವರಿಗೆ ರಾಜಯೋಗ ಕೂಡಿ ಬರಲಿದೆ, ಅದೃಷ್ಟ ಕನಸುಗಳೆಲ್ಲಾ ನೆರವೇರುತ್ತವೆ

2021 ಮುಂದಿನ ವರ್ಷದಿಂದ ಯಾವ ಯಾವ ವ್ಯಕ್ತಿಗಳ ಭವಿಷ್ಯ ಹೇಗಿರುತ್ತದೆ. ಯಾವ ರಾಶಿ ಫಲಗಳು ಯಾರಿಗೆ ಅನುಕೂಲ, ಅದೃಷ್ಠ ಮತ್ತು ಅನಾನುಕೂಲ, ನಷ್ಟ ತಂದು ಕೊಡುತ್ತವೆ ಎಂದು ತಿಳಿಯಬೇಕಾದರೆ ಈ ವರದಿಯನ್ನು ಸಂಪೂರ್ಣವಾಗಿ ಓದಿ. ಮೊದಲನೆಯದಾಗಿ ಮೇಷ ರಾಶಿಯವರಿಗೆ ವರ್ಷದ ಆರಂಭದಲ್ಲಿ ಉತ್ತಮವಾಗಿದ್ದರು ಸಹ ವರ್ಷದ ಮಧ್ಯಂತರದಲ್ಲಿ ಕೊಂಚ ಹಣಕಾಸಿನ ಅನಾನುಕೂಲಗಳೇ ಹೆಚ್ಚಾಗಿದ್ದು ಮೇಷ ರಾಶಿಯವರಿಗೆ ಮುಂದಿನ ವರ್ಷ ಮಿಶ್ರಫಲ ದೊರೆಯುತ್ತದೆ ಎಂದು ಹೇಳಬಹದಾಗಿದೆ.

ವೃಷಭ: ವೃಷಭ ರಾಶಿಯವರಿಗೆ ನಿಮ್ಮ ಹಣಕಾಸಿನ ನಿರ್ವಹಣೆ ಮೇಲೆ ನಿಮ್ಮ ಆರ್ಥಿಕ ಪರಿಸ್ಥಿತಿ ನಿರ್ಧಾರ ವಾಗಲಿದೆ. ಆದಷ್ಟು ಇತಿ ಮಿತಿಯಲ್ಲಿ ಹಣದ ವ್ಯವಹಾರ ಮಾಡಿದರೆ ಉತ್ತಮ ಮತ್ತು ಖರ್ಚು ಕಡೆಮೆಯಾದಷ್ಟು ಸಮಸ್ಯೆ ನಿಮ್ಮನ್ನು ಭಾದಿಸುವುದಿಲ್ಲ.

ಮಿಥುನ ರಾಶಿಯವರಿಗೆ ನೀವು ಪ್ರಗತಿ ಹೊಂದಲು ಅಡ್ಡದಾರಿ ಹಿಡಿದರೆ ಆಪತ್ತು ಕಟ್ಟಿಟ್ಟ ಬುತ್ತಿಯಾಗಿದೆ. ಕೆಲವೊಮ್ಮೆ ಹಣಕಾಸಿನಲ್ಲಿ ಲಾಭ ನಷ್ಠ ಎರಡನ್ನೂ ನೋಡುವುದಾಗಿದೆ. ನೀವು ತೆಗೆದುಕೊಳ್ಳುವ ನಿರ್ಧಾರ ಸ್ಪಷ್ಟತೆಯಿಂದ ಕೂಡಿರಲಿ. ಕರ್ಕಾಟಕ ರಾಶಿಯವರು ಮುಂದಿನ ವರ್ಷದಿಂದ ನಿರೀಕ್ಷೆಗೂ ಮೀರಿದ ಧನಲಾಭ ನೋಡುತ್ತಾರೆ.ಆದಾಯದಲ್ಲಿ ದುಪ್ಪಟ್ಟು ಹೊಂದಿ ಆರ್ಥಿಕವಾಗಿ ಶಕ್ತಿವಂತರಾಗುವುದು ಖಚಿತ.

ಸಿಂಹ: ಸಿಂಹ ರಾಶಿಯವರಿಗೆ 2021 ಸಮಾಧಾನಕರ ವರ್ಷವಾಗಲಿದೆ, ಕೊಂಚ ನಷ್ಟ ಹೊಂದುವ ಸಂಭವವಿದ್ದರೂ ಸಹ ಖರ್ಚು ವೆಚ್ಚಗಳ ಕಡೆ ನಿಗಾ ವಹಿಸಿದರೆ ಉತ್ತಮವಾದ ವರ್ಷವಾಗಲಿದೆ. ಕನ್ಯಾ ರಾಶಿಯವರಿಗೆ ಮುಂದಿನ ವರ್ಷದ ಆರಂಭದಿಂದ ಮಧ್ಯಂತರ ವರ್ಷದವರಿಗೆ ಆರ್ಥಿಕ ಸಂಕಷ್ಠ ತದನಂತರ ಚೇತರಿಕೆ ಕಂಡು ಬರುತ್ತದೆ.

ತುಲಾ: ಈ ರಾಶಿಯವರಿಗೆ ಮುಂದಿನ ವರ್ಷ ಉತ್ತಮವಾಗಿದೆ. ಆದರೆ ಮಾತನಾಡ ಬೇಕಾದಾಗ ಕೊಂಚ ಎಚ್ಚರವಿರಲಿ, ಆರ್ಥಿಕ ಸ್ಥಿತಿಗತಿ ಆರಂಭದಲ್ಲಿ ಉತ್ತಮವಾಗಿದ್ದರು ಸಹ ಅಂತಿಮದಲ್ಲಿ ಏರುಪೇರಾಗುವ ಸಾಧ್ಯತೆ ಆದ್ದರಿಂದ ಹಣದ ಬಗ್ಗೆ ನಿಗಾ ವಹಿಸಿದರೆ ಉತ್ತಮ. ಯಾರ ಬಳಿಯೂ ಸಹ ಸಾಲ ಪಡೆಯದಿರುವುದು ಒಳಿತು.

ವೃಶ್ಚಿಕ: ಈ ರಾಶಿಯವರಿಗೆ ಮುಂದಿನ ವರ್ಷದ ಆರಂಭದಲ್ಲಿ ಅನಿರೀಕ್ಷಿತ ಖರ್ಚು ಮತ್ತು ಅನಾರೋಗ್ಯಕ್ಕೆ ಒಳಗಾಗುವ ಸಾಧ್ಯತೆ. ಆದರೆ ವರ್ಷಾಂತ್ಯದಲ್ಲಿ ಮನೆಯಲ್ಲಿ ಶುಭಕಾರ್ಯ ನಡೆಯುವುದು ನಂತರ ಉತ್ತಮ ವಾಗಿರುತ್ತದೆ.

ಧನಸ್ಸು: ನಿಮ್ಮ ಕಠಿಣ ಪರಿಶ್ರಮಕ್ಕೆ ತಕ್ಕ ಪ್ರತಿಫಲ ದೊರೆಯುತ್ತದೆ. 2021 ಅದೃಷ್ಟದ ವರ್ಷವಾಗಲಿದೆ.ವೇಗವಾಗಿ ಆರ್ಥಿಕ ಬೆಳವಣಿಗೆಯಾಗುತ್ತದೆ. ಶುಭಾರಂಭ ವರ್ಷದ ಅಂತ್ಯದಲ್ಲಿ ಪ್ರವಾಸ, ಖರ್ಚು ಸಾಧ್ಯತೆಯಿದೆ. ಮಕರ ರಾಶಿಯವರಿಗೆ ಮಿಶ್ರಫಲ. ಆರಂಭದ ದಿನಗಳಲ್ಲಿ ಲಾಭದಲ್ಲಿದ್ದರೂ ವರ್ಷದ ಅಂತಿಮದಲ್ಲಿ ಕೊಂಚ ನಷ್ಟ ಸಮಾಧಾನಕರ ವರ್ಷ ವಾಗಲಿದೆ.

ಕುಂಭ: ಕುಂಭ ರಾಶಿಯವರಿಗೆ ಹಣದ ಮುಖಾಂತರ ಸಂಕಷ್ಠ ಎದುರಾಗಲಿದೆ. ಆದ್ದರಿಂದ ಹಣದಲ್ಲಿ ಹೆಚ್ಚು ಎಚ್ಚರಿಕೆಯಿಂದ ಇರಬೇಕು ವ್ಯವಹಾರದಲ್ಲಿ ಮಾನಸಿಕ ಒತ್ತಡ, ಕಿರಿಕಿರಿ ಉಂಟಾಗುವ ಸಾಧ್ಯತೆಯಿದೆ. ಮೀನ ರಾಶಿಯವರಿಗೆ 2021 ಅದೃಷ್ಠದ ವರ್ಷವಾಗಲಿದೆ. ವರ್ಷದ ಮಧ್ಯ ಭಾಗದಲ್ಲಿ ಕೊಂಚ ಮಿಶ್ರ ಫಲ
ದೊರೆತರೂ ಸಹ ತಕ್ಷಣ ಚೇತರಿಸಿಕೊಂಡು ಆರ್ಥಿಕತೆ ವಿಚಾರದಲ್ಲಿ ಪ್ರಗತಿ ಕಾಣುವುದಾಗಿದೆ. 2021 ಉತ್ತಮವಾದ ವರ್ಷ ಎನ್ನಬಹುದಾಗಿದೆ.

%d bloggers like this: