2021ರ ವರ್ಷ ಈ ರಾಶಿಯವರಿಗೆ ಶುಭಫಲ, ಶ್ರಮಕ್ಕೆ ತಕ್ಕ ಪ್ರತಿಫಲ ದೊರೆಯಲಿದೆ

2021ರ ವರ್ಷದಲ್ಲಿ ರಾಶಿಚಕ್ರಗಳಲ್ಲಿ ಪ್ರಥಮ ರಾಶಿಯಾದ ಮೇಷ ರಾಶಿಯವರಿಗೆ ವರ್ಷದ ಮದ್ಯಂತರದಿಂದ ಶುಭ ಫಲಗಳು ಲಭಿಸುತ್ತವೆ. ಸರ್ಕಾರಿ ಉದ್ಯೋಗ ಪಡೆಯುವ ಕನಸನ್ನು ಹೊಂದಿರುವ ಅಭ್ಯರ್ಥಿಗಳಿಗೆ ಅದೃಷ್ಟ ಒದಗಿ ಬರಲಿದೆ. ಬೆಳ್ಳಿ ಬಂಗಾರ ವ್ಯಾಪಾರಿಗಳಿಗೆ ಲಾಭವಾಗುತ್ತದೆ. ರೈತಾಪಿ ವರ್ಗದವರಿಗೆ ಧನ ಪ್ರಾಪ್ತಿ ಯಾಗುತ್ತದೆ. ನಿಮ್ಮ ಶ್ರಮಕ್ಕೆ ತಕ್ಕ ಪ್ರತಿಫಲ ದೊರೆಯುತ್ತದೆ. ದೂರದ ದೆಶಗಳಿಗೆ ಪ್ರಯಾಣ ಮಾಡುವ ಯೋಗವಿದೆ, ಇನ್ನು ಲೋಹದ ವಸ್ತುಗಳನ್ನು ಮಾರಾಟ ಮಾಡುವ ವ್ಯಕ್ತಿಗಳಿಗೆ ಉತ್ತಮ ಧನಲಾಭ. ಜೊತೆಗೆ ಮೆಕ್ಯಾನಿಕಲ್ ಇಂಜಿನಿಯರ್ ಗಳಿಗೆ ಅನಿರಿಕ್ಷಿತ ಧನಲಾಭ ಆಗುತ್ತದೆ. ಆದರೆ ಏಪ್ರಿಲ್ ತಿಂಗಳ 6 ರವರೆಗೆ ಅಶುಭಕರ ಸಂಗತಿಗಳು ಎದುರಾಗುತ್ತವೆ. ಮನಸ್ಸಿನಲ್ಲಿ ಚಂಚಲತೆ ಎದುರಾಗುತ್ತದೆ. ಮನರಂಜನೆ ಕ್ಷೇತ್ರವಾದ ಸಿನಿಮಾ ನಟ ನಟಿಯರಿಗೆ ಈ ಸಮಯದಲ್ಲಿ ಅಪವಾದಗಳು, ಆರ್ಥಿಕ ನಷ್ಟಗಳು ಎದುರಾಗಲಿದೆ.

ಉಚ್ಚ ಸ್ಥಾನದಲ್ಲಿ ಸೂರ್ಯಗ್ರಹ ಇರುವುದರಿಂದ ಅನೇಕ ಸಮಸ್ಯೆ, ತೊಂದರೆ ತಾಪತ್ರಯಗಳು ಎದುರಾಗುತ್ತವೆ. ಸಕಲ ದೋಷ ಪರಿಹಾರಕ್ಕಾಗಿ ಸೂರ್ಯ ನಮಸ್ಕಾರ ಮಾಡಿ. ಜೊತೆಗೆ ನವಗ್ರಹ ಶಾಂತಿ ಮಾಡಿಸಿವುದರಿಂದ ನಿಮ್ಮ ಸಮಸ್ಯೆ ತೊಂದರೆ ತಾಪತ್ರಯಗಳಿಂದ ಮುಕ್ತಿಗೊಳ್ಳಬಹುದಾಗಿದೆ. ಇನ್ನು ಸೂರ್ಯ ನಮಸ್ಕಾರ ಮಾಡುವಾಗ ವಿವಾಹಿತರು ದಂಪತಿ ಸಮೇತ ಛಾಯಾ ಸಂಜ್ಞಾ ಸಮೇತ ಸೂರ್ಯ ನಾರಯಣಾಯ ನಮಃ ಎಂಬ ಮಂತ್ರ ಪಠನೆ ಮಾಡುವುದರಿಂದ ಒಳಿತಾಗುತ್ತದೆ. ಸಾಧ್ಯವಾದರೆ ಬಡವರಿಗೆ, ಅನಾಥರಿಗೆ ವಸ್ತ್ರದಾನ ಮಾಡಿ ನಿಮ್ಮ ದೋಷಗಳಿಗೆ ಕೊಂಚ ಪರಿಹಾರ ಕಂಡುಕೊಳ್ಳ ಬಹುದಾಗಿದೆ ಎಂದು ಜ್ಯೋತಿಷ್ಯ ಶಾಸ್ತ್ರದಲ್ಲಿ ತಿಳಿಸಲಾಗಿದೆ.

%d bloggers like this: