2021 ರಲ್ಲಿ ಈ ರಾಶಿಯವರ ಬಹಳಷ್ಟು ಕನಸುಗಳು ಈಡೇರಲಿವೆ, ಸ್ವಲ್ಪ ಪ್ರಯತ್ನ ಹಾಕಿ

ವೃಷಭ ರಾಶಿಯ ವರ್ಷ ಭವಿಷ್ಯವು ಅದೃಷ್ಟ ಶಾಲಿಯಾಗಿದೆ, ಕೃತಿಕಾ ನಕ್ಷತ್ರದ 2,3 ಮತ್ತು 4ನೇ ಪಾದ ಒಳಗೊಂಡ ಜೊತೆಗೆ ಈ ರೋಹಿಣಿ ನಕ್ಷತ್ರ ಮತ್ತು ಮೃಗಶಿರ ನಕ್ಷತ್ರದ1 ಮತ್ತು 2ನೇ ಪಾದವೊಂದಿದ್ದರೆ ಇವರನ್ನು ವೃಷಭ ರಾಶಿಗೆ ಸೇರಿದವರು ಎಂದು ರಾಶಿ ಚಕ್ರದಲ್ಲಿ ಹೇಳುತ್ತೇವೆ. ಇನ್ನು ವೃಷಭ ರಾಶಿಯವರು 2021ರಲ್ಲಿ ನೀವು ಕೈಗೊಂಡ ಎಲ್ಲಾ ಕೆಲಸ ಕಾರ್ಯಗಳಲ್ಲಿ ಯಶಸ್ಸು ಸಾಧಿಸುತ್ತೀರಿ. ನೀವು ಮೂಲತಃ ಉಪಕಾರ ಮನೋಭಾವದವರಾದ ಕಾರಣ ಕಷ್ಟದಲ್ಲಿರುವವರಿಗೆ ಸಹಾಯ ಮಾಡುತ್ತೀರಿ. ಜೊತೆಗೆ ನಿಮಗೆ ಹಣಕಾಸಿನ ವಿಚಾರದಲ್ಲಿ ಹೆಚ್ಚಿನ ಪ್ರಗತಿ ಕಂಡು ಬರುತ್ತದೆ.

ನಿಮ್ಮ ಕುಟುಂಬದಲ್ಲಿ ಭಿನ್ನಮತ ಬರದಿರಲು ಕೋಪದಿಂದ ವರ್ತಿಸದೇ ಆದಷ್ಟು ತಾಳ್ಮೆಯಿಂದ ವರ್ತಿಸಿ. ಅತಿ ಖರ್ಚು ಮಾಡಲೇಬೇಡಿ ಇದರಿಂದ ನಿಮಗೆ ಆರ್ಥಿಕ ಮುಗ್ಗಟ್ಟು ಎದುರಾಗುವ ಸಾಧ್ಯತೆ ಇರುತ್ತದೆ.

ಸಮಾಜಲ್ಲಿ ನಿಮಗೆ ಗೌರವ, ಸ್ಥಾನಮಾನ, ಮನ್ನಣೆ ದೊರೆತು ನಿಮ್ಮ ಕೀರ್ತಿ ಹೆಚ್ಚಾಗಲಿದೆ, ನಿಮಗೆ ಆತ್ಮೀಯರು ಹೆಚ್ಚಾಗುತ್ತಾರೆ ಇದರಿಂದ ನಿಮಗೆ ನೀವು ಇಚ್ಚಿಸಿದ ಗುರಿಯನ್ನು ಬೇಗ ತಲುಪಲು ಸಹಕಾರಿಯಾಗಲಿದೆ. ಆರೋಗ್ಯದ ವಿಚಾರವಾಗಿ ಹೇಳುವುದಾದರೆ ಅನಾರೊಗ್ಯದಿಂದ ಬಳಲುತ್ತಿರುವವರು ಕೊಂಚ ಚೇತರಿಕೆ ಕಂಡು ಪ್ರಗತಿ ಕಾಣಬಹುದಾಗಿದೆ. ನೀವು ಮುಟ್ಟಿದ್ದೆಲ್ಲಾ ಚಿನ್ನವಾಗುವಂತಹ ಸುಸಂಧರ್ಭ ಇದಾಗಿದ್ದು ನಿಮ್ಮ ಅದೃಷ್ಟ ದ್ವಿಗುಣ ಗೊಳ್ಳುತ್ತದೆ.

ನೀವು ಕಂಡಂತಹ ಎಲ್ಲಾ ಕನಸುಗಳು ನನಸಾಗುತ್ತದೆ ನೀವು ಮಾಡಿದ ಪೂರ್ವ ಪುಣ್ಯದಂತೆ ಸಕಲ ವಿಧದಲ್ಲೂ ಅನುಕೂಲ ಪಡೆಯಲಿದ್ದಾರೆ. ನಿಮಗೆ ತಿಳಿಯದ ವಿಷಯದಲ್ಲಿ ಯಾವುದೇ ಕಾರಣಕ್ಕೂ ತಲೆ ಹಾಕಬೇಡಿ ಇದರಿಂದ ನಿಮಗೆ ಮಾನಹಾನಿ ಆಗುವ ಸಾಧ್ಯತೆ ಹೆಚ್ಚಾಗಿರುತ್ತದೆ. ಕೆಲವೊಂದು ವಿಚಾರಗಳ ಬಗ್ಗೆ ನೀವು ತೆಗೆದುಕೊಳ್ಳುವ ನಿರ್ಧಾರದಲ್ಲಿ ಗುರುಹಿರಿಯರ ಸಲಹೆಗಳು ಅಗತ್ಯವಾಗಿರಲಿ ಇದು ನಿಮಗೆ ದಾರಿ ದೀಪ ವಾಗಲಿದೆ, ಇಷ್ಟು ವರ್ಷ ನೆನೆಗುದಿಗೆ ಬಿದ್ದಿದ್ದ ಕೆಲಸ ಕಾರ್ಯಗಳು ಮತ್ತೆ ಚಾಲನೆ ಪಡೆದುಕೊಳ್ಳಲಿವೆ. ನಿಮ್ಮ ಶತ್ರುಗಳು ಮಿತ್ರರಾಗುತ್ತಾರೆ ಹಾಗು ನಿಮ್ಮ ಕಾರ್ಯಕ್ಷೇತ್ರದಲ್ಲಿ ನೀವು ಊಹಿಸಲಾಗದಷ್ಟು ಪ್ರಗತಿ ಕಾಣುತ್ತೀರಿ ಮತ್ತು ಅಭೂತಪೂರ್ವ ಮೆಚ್ಚುಗೆಯನ್ನು ಪಡೆಯುತ್ತೀರಿ.

ನಿಮಗೆ ಮುಂದಿನ ವರ್ಷದಲ್ಲಿ 2021 ವಿದೇಶದಲ್ಲಿ ಉನ್ನತ ವ್ಯಾಸಂಗ ಮಾಡುವಂತಹ ಯೋಗವು ಸಹ ಲಭಿಸಲಿದ್ದು ನಿಮಗೆ ಬರುವ ಸಮಸ್ಯೆಗಳ ಪರಿಹಾರಕ್ಕಾಗಿ ಪ್ರತಿ ಬುಧವಾರ, ಶುಕ್ರವಾರ, ಶನಿವಾರ ದಂದು ತಪ್ಪದೆ ಶ್ರೀ ಲಕ್ಷ್ಮಿಯ ಅಷ್ಟೋತ್ತರಗಳನ್ನು ಪಠಿಸಿದರೆ ಒಳ್ಳೆಯದಾಗುತ್ತದೆ. ಇನ್ನು ನಿಮ್ಮ ಶುಭ ಸಂಖ್ಯೆಗಳನ್ನು ನೋಡುವುದಾದರೆ 1,5,6,8 ಶುಭ ದಿನಗಳನ್ನು ನೋಡುವುದಾದರೆ ಶುಕ್ರವಾರ, ಬುಧವಾರ, ಶನಿವಾರ ಇನ್ನೂ ನಿಮ್ಮ ಅದೃಷ್ಟದ ರತ್ನಗಳು ವಜ್ರ ಪಚ್ಚೆ, ನೀಲ ಅದೃಷ್ಟದ ಶುಭಫಲದ ಬಣ್ಣಗಳು ನೀಲಿ ಮತ್ತು ಬಿಳಿ ಬಣ್ಣದಾಗಿರುತ್ತದೆ.

%d bloggers like this: