2021 ರಲ್ಲಿ ಈ ರಾಶಿಯವರಿಗೆ ಗೊಂದಲ, ಹಣಕಾಸಿನ ಸಮಸ್ಯೆಗಳು ಕಾಡಲಿವೆ ಆದರೆ ಪರಿಹಾರ ಇದೆ

2021ರ ವರ್ಷ ಭವಿಷ್ಯದಲ್ಲಿ ಕುಂಭ ರಾಶಿಯವರಿಗೆ ಯಾವ ರೀತಿಯ ಶುಭ ಅಶುಭ ಫಲಗಳು ದೊರೆಯುತ್ತವೆ ಎಂದು ತಿಳಿಯುವುದಾದರೆ ಈ ವರ್ಷ ಭವಿಷ್ಯ ಅಂದಾಕ್ಷಣ ಈ ನಾಲ್ಕು ಗ್ರಹಗಳ ಆಧಾರದ ಮೇಲೆ ಜಾತಕ ಭವಿಷ್ಯ ನುಡಿಯುತ್ತಾರೆ. ಗುರು ಗ್ರಹ, ಶನಿ, ರಾಹು, ಕೇತು ಗ್ರಹಗಳು ರಾಶಿಗಳ ಮೇಲೆ ಯಾವ ರೀತಿಯಾದ ಪ್ರಭಾವ ಬೀರುತ್ತದೆ ಎಂಬುದನ್ನು ತಿಳಿಯಬೇಕಾಗಿದೆ. ಈ ವರ್ಷ ಭವಿಷ್ಯದಲ್ಲಿ ಈ ನಾಲ್ಕು ಗ್ರಹಗಳು ಏಕೆ ಮಹತ್ವ ಪಡೆಯುತ್ತವೆ, ಏಕೆಂದರೆ ಈ ಗುರು ಗ್ರಹವು ವರ್ಷಕ್ಕೊಮ್ಮೆ ತನ್ನ ಸ್ಥಾನವನ್ನು ಬದಲಾಯಿಸುತ್ತದೆ. ಶನಿ ಗ್ರಹವು ಎರಡೂವರೆ ವರ್ಷಕ್ಕೆ ಒಮ್ಮೆ ತನ್ನ ಸ್ಥಾನವನ್ನು ಬದಲಾಯಿಸುತ್ತದೆ. ರಾಹು ಕೇತು ಗ್ರಹಗಳು ಒಂದುವರೆ ವರ್ಷಕ್ಕೊಮ್ಮೆ ತನ್ನ ಸ್ಥಾನವನ್ನು ಬದಲಾಯಿಸುತ್ತವೆ.

ಈ ಗ್ರಹಗಳು ಕುಂಭ ರಾಶಿಯ ಮೇಲೆ ಯಾವ ರೀತಿಯ ಪ್ರಭಾವ ಬೀರುತ್ತದೆ ಎಂಬುದನ್ನು ತಿಳಿಯೋಣ. ಈ ಕುಂಭ ರಾಶಿಯವರಿಗೆ ಹನ್ನೊಂದನೆ ಮನೆಯಲ್ಲಿ ಗುರು ಗ್ರಹ ಇರುವುದರಿಂದ ಅಂದರೆ ಪರಮನೀಚ ಸ್ಥಾನದಲ್ಲಿ ಗುರು ಇರುವುದರಿಂದ, ಕುಟುಂಬ ಸ್ಥಾನ, ಲಾಭ ಸ್ಥಾನದ ಅಧಿಪತಿ ಆಗಿರುವ ಗುರುವು ಪರಮನೀಚ ಸ್ಥಾನದಲ್ಲಿ ಇರುವುದರಿಂದ ಕುಂಭ ರಾಶಿಯವರಿಗೆ ವಿಶೇಷವಾದ ಫಲಗಳು ದೊರೆಯುವುದಿಲ್ಲ.

ಜೀವನದ ಕೆಲವು ಮಹತ್ವದ ನಿರ್ಧಾರಗಳಲ್ಲಿ ಭಾರಿ ಗೊಂದಲ, ಹಣಕಾಸಿನ ತೊಂದರೆ, ಅನಾವಶ್ಯಕವಾದ ಆಪಾದನೆ, ವಾದ ವಿವಾದಗಳು ಏರ್ಪಡುತ್ತವೆ. ಕುಂಭ ರಾಶಿಯವರು ಇತರರಿಗೆ ಸಹಾಯ ಮಾಡಲು ಹೋಗಿ ಅಪಾಯವನ್ನು ಎದುರಿಸಬೇಕಾದ ಸಂದರ್ಭ, ಸನ್ನಿವೇಶಗಳು ಏರ್ಪಡುತ್ತವೆ.

ಹಾಗಂತ ಕುಂಭ ರಾಶಿಯವರಿಗೆ ವರ್ಷಪೂರ್ತಿ ಅಶುಭ ಅಂತ ಹೇಳಲಾಗುತ್ತಿಲ್ಲ. ಏಪ್ರಿಲ್ 6 ರಿಂದ ಸೆಪ್ಟೆಂಬರ್ 14 ನೇ ತಾರೀಖಿನವರೆಗೆ ಅದ್ಭುತವಾದ ಸಂಗತಿಗಳು ನಡೆಯುತ್ತವೆ, ಉದ್ಯೋಗದಲ್ಲಿ ವಿಪುಲ ಅವಕಾಶಗಳಿರುತ್ತವೆ. ವ್ಯಾಪಾರ, ವ್ಯವಹಾರದಲ್ಲಿ ದಲ್ಲಿ ಪ್ರಗತಿ ಕಾಣುತ್ತಾರೆ. ವಿದೇಶಿ ಪ್ರಯಾಣ ಮಾಡುವ ಅವಕಾಶವಿರುತ್ತದೆ, ಜೊತೆಗೆ ಮನೆ ಕಟ್ಟುವ ಯೋಗ ಬರುತ್ತದೆ ಆದ್ದರಿಂದ ಈ ಸಮಯವನ್ನು ಆದಷ್ಟು ಸದುಪಯೋಗ ಪಡಿಸಿಕೊಳ್ಳಬೇಕು ಎಂದು ತಿಳಿಸುತ್ತಾರೆ.

ಈ ರಾಶಿಯವರಿಗೆ ಶನಿ ಗ್ರಹವು ಅಧಿಪತಿಯಾಗಿರುವುದರಿಂದ ಅಧಿಕ ಖರ್ಚು, ಸಾಲಭಾದೆ ಹೆಚ್ಚಾಗಬಹುದು ಅದರ ಜೊತೆಗೆ ವಿಧ್ಯಾರ್ಥಿಗಳಿಗೆ ಪ್ರಗತಿ ಕಂಡು ಬರುತ್ತದೆ. ಇನ್ನು ನಾಲ್ಕನೇಯ ಮನೆಯಲ್ಲಿ ಅಂದರೆ ಸುಖ ಸ್ಥಾನದಲ್ಲಿ ರಾಹು ಇರುವುದರಿಂದ ಸಕಾರಾತ್ಮಕ ಮತ್ತು ಧನಾತ್ಮಕ ಎರಡೂ ವಿಚಾರಗಳು ಸಹ ಸಂಭವಿಸುತ್ತವೆ.

ಇನ್ನು ಕೇತುಗ್ರಹ ಕರ್ಮದಲ್ಲಿ ಅಂದರೆ ಹತ್ತನೇ ಮನೆಯಲ್ಲಿ ಕೇತುಗ್ರಹ ಇರುವುದರಿಂದ ಉದ್ಯೋಗದಲ್ಲಿ ಪ್ರಗತಿ ಬೆಳವಣಿಗೆ ಇರುತ್ತದೆ. ದೈವಬಲ ಹೆಚ್ಚಾಗುತ್ತದೆ, ಆದರೆ ಫೆಬ್ರವರಿ 22 ರಿಂದ ಸೆಪ್ಟೆಂಬರ್ 14 ರವರೆಗೆ ಜಾಗೃತಿ ವಹಿಸಬೇಕು. ವಾಹನವನ್ನು ನಿಧಾನವಾಗಿ ಚಲಾಯಿಸಬೇಕು, ಅನಾವಶ್ಯಕವಾಗಿ ಇನ್ನೊಬ್ಬರ ವಿಚಾರಕ್ಕೆ ತಲೆಹಾಕಬಾರದು. ಇನ್ನು ದೋಷ ಪರಿಹಾರಕ್ಕಾಗಿ ರಾಹು ಗ್ರಹಕ್ಕೆ ಸಂಬಂಧ ಪಟ್ಟಂತಹ ಮಂತ್ರ ಪಠಿಸಬಹುದು ಮತ್ತು ಈಶ್ವರನ ಜ್ಯೋತಿರ್ಲಿಂಗ ದರ್ಶನ ಮಾಡಿದರೆ ಒಳಿತಾಗುತ್ತದೆ. ರಾಮೇಶ್ವರ, ಶ್ರೀಶೈಲ, ಉಜ್ಜಯಿನಿ, ಕಾಶಿಯಂತಹ ಪುಣ್ಯಕ್ಷೇತ್ರಗಳಿಗೆ ಭೇಟಿ ಕೊಡುವುದರಿಂದ ನಿಮ್ಮ ಸಮಸ್ಯೆಗಳು ಪರಿಹಾರ ವಾಗುತ್ತದೆ ಎಂದು ಜ್ಯೋತಿಷ್ಯಶಾಸ್ತ್ರಜ್ಞರು ತಿಳಿಸಲಾಗಿದೆ.

%d bloggers like this: