2021 ರಲ್ಲಿ ಈ ರಾಶಿಯವರಿಗೆ ನಿರೀಕ್ಷೆಗೂ ಮೀರಿ ಧನಲಾಭ

ವೃಷಭ ರಾಶಿಯವರಿಗೆ ಈ 2021 ವರ್ಷದಲ್ಲಿ ಶುಭ ಸಮಾಚಾರಗಳ ಜೊತೆಗೆ ವೃತ್ತಿ ಬದುಕಲ್ಲಿ ಭಾರಿ ಏರಿಳಿತ ಕಂಡು ಬರುತ್ತದೆ, ವೃತ್ತಿಜೀವನ ದೃಷ್ಠಿಯಿಂದ ನೋಡುವುದಾದರೆ ಇವರಿಗೆ ಉದ್ಯೋಗದಲ್ಲಿ ತಾವು ಬಯಸಿದ ಕಡೆ ವರ್ಗಾವಣೆ ಮಾಡಿದರು ಕೂಡ ಇವರಿಗೆ ಜವಬ್ದಾರಿ ಒತ್ತಡ ಹೆಚ್ಚಾಗುತ್ತದೆ. ಒಂದೆಡೆ ನಿರೀಕ್ಷೆಗೂ ಮೀರಿದ ಧನಲಾಭ ಮತ್ತೊಂದೆಡೆ ಅನಾರೋಗ್ಯದಿಂದಾಗಿ ಯಾವ ಸುಖವನ್ನು ಅನುಭವಿಸಲಾಗದ ಪರಿಸ್ಥಿತಿ ಉಂಟಾಗುತ್ತದೆ. ಆರ್ಥಿಕವಾಗಿ ಕೆಲವು ತಿಂಗಳನ್ನು ಹೊರತುಪಡಿಸಿದರೆ ಉಳಿದಂತೆಹಣಕಾಸಿನ ಪರಿಸ್ಥಿತಿ ಉತ್ತಮವಾಗಿರುತ್ತದೆ‌. ಜನವರಿ ಮತ್ತು ಏಪ್ರಿಲ್ ತಿಂಗಳ ಆರಂಭದ 14 ದಿನಗಳು ಮತ್ತು ಮೇ, ಜುಲೈ ಕೊನೆಯ ವಾರ ಹಾಗೂ ಸೆಪ್ಟೆಂಬರ್ ತಿಂಗಳಲ್ಲಿ ವೃಷಭ ರಾಶಿಯವರಿಗೆ ಹಣದ ಒಳಹರಿವು ಹೆಚ್ಚಾಗಿರುತ್ತದೆ. ಆದರೆ ಇದೇ ಹಣಕಾಸು ವಿಚಾರವಾಗಿ ಸೋದರರಲ್ಲಿ ಮನಸ್ತಾಪ ಜಗಳಗಳು ಏರ್ಪಡುತ್ತದೆ. ಕೌಟುಂಬಿಕಜೀವನದಲ್ಲಿ ಒತ್ತಡದಂಪತಿಗಳಲ್ಲಿ ವಿರಸ ಉಂಟಾಗುವ ಸಾದ್ಯತೆ ಇರುತ್ತದೆ. ಆದ್ದರಿಂದ ಹೆಚ್ಚು ವಾದ ಮಾಡಲು ಹೋಗಬೇಡಿ.

ಇನ್ನು ಶೈಕ್ಷಣಿಕ ದೃಷ್ಟಿಯಿಂದ ನೀವು ಹೆಚ್ಚು ಓದಿನ ಕಡೆ ಗಮನವಹಿಸಬೇಕು, ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸುತ್ತಿರುವ ಅಭ್ಯರ್ಥಿಗಳಿಗೆ ಮಾರ್ಗದರ್ಶನ ಕೊರತೆ ಉಂಟಾಗಬಹುದು. ಆದ್ದರಿಂದ ನಿಮ್ಮ ಓದಿಗೆ ಅನುಕೂಲ ವಾಗುವಂತಹ ಉತ್ತಮವಾದ ಗೆಳೆಯರನ್ನು ಆಯ್ಕೆ ಮಾಡಿಕೊಳ್ಳಿ. ಇನ್ನು ಪಿತ್ರಾರ್ಜಿತ ಆಸ್ತಿಯ ಪಡೆಯಲು ಕೊಂಚ ಅಡಚಣೆಯಾಗುತ್ತದೆ. ನಿಮ್ಮ ತಂದೆಯ ಜೊತೆಗೆ ಆಸ್ತಿಯ ವಿಚಾರವಾಗಿ ಮನಸ್ತಾಪ ಏರ್ಪಡುತ್ತದೆ.ಆದಷ್ಟು ತಾಳ್ಮೆ ಸಂಯಮದಿಂದ ವರ್ತಿಸಿ ಇಲ್ಲವಾದರೆ ಅನಾವಶ್ಯಕ ಸಮಸ್ಯೆಗಳನ್ನು ಎದುರಿಸ ಬೇಕಾಗುತ್ತದೆ.

ಒಟ್ಟಾರೆಯಾಗಿ ವೃಷಭ ರಾಶಿಯವರ ಈ ವರ್ಷ ಭವಿಷ್ಯ ನೋಡುವುದಾದರೆ ಇವರು ತಮ್ಮ ವ್ಯಕ್ತಿತ್ವ ಸ್ವಭಾವವನ್ನು ಬದಲಾಯಿಸಿಕೊಳ್ಳಬೇಕಿದೆ, ಯಾರ ಮೇಲೆಯೂ ಕೂಡ ಕೋಪ ಮಾಡಿಕೊಳ್ಳಬೇಡಿ. ಇದರಿಂದ ಅನಾನುಕೂಲವೇ ಹೆಚ್ಚಾಗಿದೆ.ಜೀವನದ ಮಹತ್ವ ನಿರ್ಧಾರಗಳ ಬಗ್ಗೆ ಹಿರಿಯರ ಸಲಹೆ ಸೂಚನೆ ಪಡೆಯಿರಿ.

ನಿಮ್ಮ ಸಂಗಾತಿಗೆ ನಿಷ್ಠರಾಗಿರಿ ವಿವಾಹ ಆಚೆಗಿನ ಸಂಬಂಧ ಬೆಳೆಸಬೇಡಿ ಇದರಿಂದ ನಿಮ್ಮ ಸಾಂಸಾರಿಕ ಜೀವನ ಹಾಳಾಗುತ್ತದೆ, ಇನ್ನು ವೃಷಭರಾಶಿಯ ಕೆಲವರಿಗೆ ವರ್ಷದ ಅಂತ್ಯ ಸೆಪ್ಟೆಂಬರ್ ನಿಂದ ಉದ್ಯೋಗದಲ್ಲಿ ಬಡ್ತಿ ಪಡೆಯುವ ಅವಕಾಶವಿದ್ದು ಉನ್ನತ ಮಟ್ಟದ ಅಧಿಕಾರ ದೊರೆಯುತ್ತದೆ. ಕೆಲವು ಸಮಸ್ಯೆ ದೋಷ ಪರಿಹಾರಗಳಿಗೆ ಪ್ರತಿ ಮಂಗಳವಾರ ಗಣಪತಿ ಆರಾಧನೆ ಮಾಡಿದರೆ ಒಳಿತಾಗುತ್ತದೆ‌.

%d bloggers like this: