2021 ರಿಂದ ಈ ರಾಶಿಯವರಿಗೆ ‘ರಾಜಯೋಗ’ ಕೂಡಿಬರಲಿದೆ, ಯಶಸ್ಸು ನಿಮ್ಮ ಬೆನ್ನಹಿಂದೆಯೇ ಇರಲಿದೆ

ಮುಂದಿನ ವರ್ಷದಿಂದ ಈ ಐದು ರಾಶಿಗಳಿಗೆ ರಾಜಯೋಗ ಆರಂಭವಾಗುತ್ತದೆ. ಆ ರಾಶಿಗಳು ಕ್ರಮವಾಗಿ ವೃಷಭ, ಕರ್ಕಾಟಕ, ಕನ್ಯಾ, ಧನಸ್ಸು ಮತ್ತು ಮೀನ ಈ ರಾಶಿಗಳಿಗೆ ಸಂಬಂಧಪಟ್ಟಂತಹ ವ್ಯಕ್ತಿಗಳಿಗೆ 2021 ವರ್ಷದಿಂದ ರಾಜಯೋಗ ಕೂಡಿಬರಲಿದ್ದು ಜೀವನದ ಪಥ ಮತ್ತೊಂದು ದಿಕ್ಕಿಗೆ ಬದಲಾಗಿ ಪ್ರಗತಿಯತ್ತ ಸಾಗುತ್ತದೆ. ಇವರಿಗೆ ಭಾಗ್ಯೋದಯವಾಗಿ ವಾಹನ, ಮನೆ ಖರೀದಿ ಮಾಡುವ ಯೋಗವಿದೆ. ಹಲವಾರು ವರ್ಷಗಳಿಂದ ನೆನೆಗುದಿಗೆ ಬಿದ್ದಿದ್ದ ಕೆಲಸ ಕಾರ್ಯಗಳು ಮತ್ತೆ ವೇಗ ಪಡೆದುಕೊಂಡು ಕಾರ್ಯಕ್ಷೇತ್ತದಲ್ಲಿ ಯಶಸ್ವಿ ಪಯಣ ಆರಂಭವಾಗುತ್ತದೆ. ಇನ್ನು ಕೋರ್ಟು ಕಛೇರಿಗಳ ಕೆಲಸಗಳಲ್ಲಿ ಜಯ ವಾಗುವಂತಹ ಶುಭಫಲಗಳು ಈ ವೃಷಭರಾಶಿಯವರಿಗೆ ಲಭಿಸುತ್ತದೆ.

ಎರಡನೇಯದಾಗಿ ಕರ್ಕಾಟಕ ರಾಶಿಯವರಿಗೆ ಆರ್ಥಿಕ ಸಂಕಷ್ಠ ದೂರವಾಗಿ ಸುಖ, ಸಂತೋಷ ನೆಮ್ಮದಿಯಿಂದ ಜೀವನ ಸುಸ್ಥಿರ ವಾಗಿರುತ್ತದೆ. ಹೊರದೇಶ ಪ್ರಯಾಣ ಸಾಧ್ಯತೆಯಿದ್ದು ಉದ್ಯೋಗದಲ್ಲಿ ಬಡ್ತಿ ಪಡೆಯುವ ಯೋಗವಿದೆ. ಜೊತೆಗೆ ಜಮೀನು ಖರೀದಿ,ಮನೆ,ನಿವೇಶನ ಖರೀದಿ ಮಾಡುವುದಕ್ಕೆ ಮತ್ತು ವಿವಿಧ ಕ್ಷೇತ್ರದಲ್ಲಿ ಹೂಡಿಕೆ ಮಾಡುವುದಕ್ಕೆ ಸಕಾಲವಾಗಿದೆ. ಮೂರನೇಯ ರಾಜಯೋಗ ರಾಶಿಯಾದ ಕನ್ಯಾ ರಾಶಿಯವರು ವಿಶೇಷವಾದ ಚೈತನ್ಯವನ್ನು ಹೊಂದುತ್ತಾರೆ. ಕುಟುಝಬಗಳಲ್ಲಿ ನಡೆಯುತ್ತಿದ್ದ ವ್ಯಾಜ್ಯ ವ್ಯವಹಾರಗಳು ಪರಿಹಾರವಾಗಿ ಸುಖ ಸಂತೋಷ ಲಭಿಸುತ್ತದೆ.

ಇನ್ನು ವಿವಾಹದ ಭಾಗ್ಯವೂ ಕೂಡ ಲಭಿಸಲಿದ್ದು ವೈದ್ಯಕೀಯ ಕ್ಷೇತ್ರದಲ್ಲಿ ದುಡಿಯುತ್ತಿರುವವರಿಗೆ ವಿಶೇಷ ಸ್ಥಾನ ಮಾನ ಮನ್ನಣೆ ದೊರೆತು ಸಮಾಜದಲ್ಲಿ ಉನ್ನತ ಗೌರವ ಲಭಿಸುತ್ತದೆ. ನಾಲ್ಕನೇಯದಾಗಿ ಧನಸ್ಸು ರಾಶಿ ಯವರಿಗೂ ಕೂಡ ರಾಜಯೋಗವಿದ್ದು ತಮ್ಮ ಕೆಲಸ ಕಾರ್ಯಗಳಲ್ಲಿ ಅಭೂತಪೂರ್ವ ಯಶಸ್ಸು ದೊರೆಯಲಿದೆ. ಕೊಟ್ಟ ಸಾಲ ಮರಳಿ ಬರುವಂತದ್ದು, ದೇವಸ್ಥಾನ, ಆಶ್ರಯ ಮಂಟಪ ಧ್ಯಾನ ಮಂದಿರ ಕಟ್ಟಿಸುವಂತಹ ಪುಣ್ಯ ಕೆಲಸ ಕಾರ್ಯಗಳು ನೀಮ್ಮಿಂದ ಕೈಗುಡುವುದು. ಅಂತಿಮವಾಗಿ ಮೀನರಾಶಿಯವರಿಗೂ ಕೂಡ ಮುಂದಿನ ವರ್ಷ ರಾಜಯೋಗ ಲಭಿಸುತ್ತದೆ.

ಇವರಿಗೆ ಆರ್ಥಿಕವಾಗಿ ಅಧಿಕ ಲಾಭವಾಗಲಿದ್ದು ವೃತ್ತಿಯಲ್ಲಿ ಬಡ್ತಿ ಪಡೆಯುತ್ತಾರೆ, ವಿವಾಹದ ಯೋಗವು ಇದ್ದು ಸಮಾಜದಲ್ಲಿ ಸ್ಥಾನ, ಮಾನ ಗೌರವ ದೊರೆತು ಇನ್ನಷ್ಟು ಕೀರ್ತಿ ಪಡೆಯುತ್ತಾರೆ. ಈ ರಾಶಿಯವರಿಗೆ ಹೋಟೇಲ್ ಉದ್ಯಮ, ಸಿನಿಮಾ ಕ್ಷೇತ್ರಗಳು ನಿರೀಕ್ಷೆ ಮೀರಿ ಲಾಭದಾಯಕವಾಗಿದ್ದು ಇವರಿಗೆ ಕೀರ್ತಿ ಯಶಸ್ಸು ಲಭಿಸುತ್ತದೆ ಎಂದು ಈ ಐದುರಾಶಿಯವರಿಗೆ ಮುಂದಿನ ವರ್ಷದಿಂದ ರಾಜಯೋಗದ ಭವಿಷ್ಯ ನುಡಿದಿದ್ದಾರೆ ಜ್ಯೋತಿಷ್ಯಶಾಸ್ತ್ರಜ್ಞರು.

%d bloggers like this: