2023 ರ ವಿಶ್ವಕಪ್ ಬಳಿಕ ಯುವ ಆಟಗಾರನ ನಿವೃತ್ತಿ ಎಂಬ ಅಚ್ಚರಿ ಹೇಳಿಕೆ ಕೊಟ್ಟ ರವಿಶಾಸ್ತ್ರಿ

ಇತ್ತೀಚಿಗೆ ತಾನೇ ಪ್ರಸಕ್ತ ಕ್ರಿಕೆಟ್ ಜಗತ್ತಿನ ಅತ್ಯುತ್ತಮ ಆಲ್ರೌಂಡರ್ಗಳಲ್ಲಿ ಒಬ್ಬರಾದ ಇಂಗ್ಲೆಂಡ್ ತಂಡದ ಬೆನ್ ಸ್ಟೋಕ್ಸ್ ದಿಡೀರಣೆ ಏಕದಿನ ಕ್ರಿಕೆಟ್ಗೆ ನಿವೃತ್ತಿ ಘೋಷಿಸಿ ಎಲ್ಲರ ಅಚ್ಚರಿಗೆ ಕಾರಣವಾದರು. ಇದೀಗ ಭಾರತದ ಕ್ರಿಕೆಟ್ ನಲ್ಲಿ ಈಗ ತಾನೇ ಉನ್ನತಿಯ ಒಂದೊಂದೇ ಮೆಟ್ಟಿಲು ಏರುತ್ತಿರುವ ಈ ಖ್ಯಾತ ಆಟಗಾರ 2023 ರ ವರ್ಲ್ಡ್ ಕಪ್ ಬಳಿಕ ಏಕದಿನ ಪಂದ್ಯಗಳಿಂದ ನಿವೃತ್ತಿ ಆಗುತ್ತಾರೆ ಎಂದು ಭಾರತ ಕ್ರಿಕೆಟ್ ತಂಡದ ಮಾಜಿ ಕೋಚ್ ರವಿ ಶಾಸ್ತ್ರಿ ಅಭಿಪ್ರಾಯ ಪಟ್ಟಿದ್ದಾರೆ. ಹೌದು ಆ ಆಟಗಾರ ಬೇರೆ ಯಾರು ಅಲ್ಲ, ಸದ್ಯಕ್ಕೆ ಕ್ರಿಕೆಟಿನ ಎಲ್ಲ ಫಾರ್ಮ್ಯಾಟ್ ಗಳಲ್ಲಿ ಅದ್ಭುತ ಪ್ರದರ್ಶನ ತೋರುತ್ತಿರುವ ಭಾರತದ ಖ್ಯಾತ ಆಲ್ ರೌಂಡರ್ ಹರ್ದಿಕ್ ಪಾಂಡ್ಯ.

ಸದ್ಯಕ್ಕೆ ಹರ್ದಿಕ್ ಪಾಂಡ್ಯ ಭಾರತ ಕ್ರಿಕೆಟ್ ತಂಡದ ಪ್ರಮುಖ ಅಸ್ತ್ರ ಎಂದರೆ ತಪ್ಪಾಗಲಿಕ್ಕಿಲ್ಲ. ಬ್ಯಾಟಿಂಗ್ ಹಾಗೂ ಬೌಲಿಂಗ್ ಎರಡರಲ್ಲೂ ತಂಡಕ್ಕೆ ಬಹಳ ಪರಿಣಾಮಕಾರಿಯಾಗಿ ಕೊಡುಗೆ ನೀಡಬಲ್ಲ ಆಟಗಾರ ಈ ಹರ್ದಿಕ್ ಪಾಂಡ್ಯ. ಹೀಗಿರುವಾಗ ಮಾಜಿ ಕೋಚ್ ರವಿ ಶಾಸ್ತ್ರಿ ಅವರು ನೀಡಿರುವ ಹೇಳಿಕೆ ನಿಜಕ್ಕೂ ಎಲ್ಲರಲ್ಲೂ ಅಚ್ಚರಿಗೆ ಕಾರಣವಾಗಿದೆ. ಈ ಕುರಿತು ಮಾತನಾಡಿದ ರವಿ ಶಾಸ್ತ್ರಿ ಅವರು ಹರ್ದಿಕ್ ಪಾಂಡ್ಯ ಅವರು ಟಿ ಟ್ವೆಂಟಿ ಕ್ರಿಕೆಟ್ ಕಡೆಗೆ ಸಾಕಷ್ಟು ಗಮನವನ್ನು ಕೇಂದ್ರೀಕರಿಸಿದ್ದಾರೆ. ಮುಂದಿನ ವರ್ಷ ವಿಶ್ವಕಪ್ ಇರುವ ಕಾರಣ ಅವರು ಸದ್ಯದ ಮಟ್ಟಿಗೆ ಏಕದಿನ ಪಂದ್ಯಗಳನ್ನು ಆಡುತ್ತಿದ್ದಾರೆ. ವಿಶ್ವಕಪ್ ಕೊನೆಗೊಂಡ ಬಳಿಕ ಅವರು ಏಕದಿನ ಪಂದ್ಯಗಳಿಂದ ನಿವೃತ್ತಿ ಘೋಷಿಸುತ್ತಾರೆ ಎಂದು ಬಲವಾಗಿ ಅಭಿಪ್ರಾಯಪಟ್ಟಿದ್ದಾರೆ.

%d bloggers like this: