24 ಗಂಟೆಗೂ ಮೊದಲೇ ತಿರುಗಿ ಅಚ್ಚರಿ ಮೂಡಿಸಿದ ನಮ್ಮ ಭೂಮಿ

ಎಲ್ಲ ಜೀವಜಂತುಗಳಿಕೆ ಆಶ್ರಯ ನೀಡಿದ ನಮ್ಮ ಭೂಮಿ ಸೂರ್ಯನ ಸುತ್ತ ಸುತ್ತುತ್ತ ತಾನು ಸುತ್ತತ್ತದೆ ಎಂಬುದು ಚಿಕ್ಕ ಮಕ್ಕಳಿಗೂ ಕೂಡ ಗೊತ್ತಿರುವಂತಹ ಸಂಗತಿ. 1960 ರಿಂದ ಈಚೆಗೆ ನಮ್ಮ ಭೂಮಿಯ ಭ್ರಮಣ ಅವಧಿಯನ್ನು ಗಮನಿಸುವ ಪ್ರಕ್ರಿಯೆ ಆರಂಭವಾಗಿದೆ. ಬಹುತೇಕ ನಮ್ಮೆಲ್ಲರಿಗೂ ಗೊತ್ತಿರುವ ಹಾಗೆ ನಮ್ಮ ಭೂಮಿ ತನ್ನ ಸುತ್ತ ಸುತ್ತುವ ಇಪ್ಪತ್ನಾಲ್ಕು ಗಂಟೆಗಳಲ್ಲಿ ಒಂದೇ ಒಂದು ಸೆಕೆಂಡ್ ವ್ಯತ್ಯಾಸವಾದರೂ ಕೂಡ ಅದು ಭೂಮಂಡಲದಲ್ಲಿ ಯಾರು ಊಹಿಸಲಾರದ ರೀತಿಯಲ್ಲಿ ಪ್ರಭಾವ ಬೀರಲಿದೆ ಎಂದು ನಾವು ತಿಳಿದಿದ್ದೆವು. ಆದರೆ ಇದೆ ಜೂಲೈ 29 ರಂದು ನಮ್ಮ ಭೂಮಿ ತನ್ನ ಭ್ರಮಣ ಅವಧಿಯಾದ 24 ಗಂಟೆಗೂ ಮೊದಲೇ ತಿರುಗಿ ಇತಿಹಾಸದಲ್ಲಿ ಕಡಿಮೆ ದಿನವೆನಿಸಿದೆ.

ಹೌದು ಪ್ರತಿ ವರ್ಷ ಜುಲೈ 29 ರಂದು ನಮ್ಮ ಭೂಮಿಯ ಭ್ರಮಣ ಅವಧಿಯನ್ನು ವಿಶೇಷವಾಗಿ ಗಮನಿಸುತ್ತಾ ಬರಲಾಗುತ್ತಿದೆ. ಕಳೆದ ಬಾರಿ ಅಂದರೆ 2021 ರ ಜುಲೈ 29 ರಂದು 24 ಗಂಟೆಗಳ ಅವಧಿಗೆ ಮೊದಲೇ ಅಂದರೆ 1.47 ಮಿಲಿ ಸೆಕೆಂಡ್ ಮೊದಲೇ ತಿರುಗಿ ದಾಖಲೆ ಬರೆದಿತ್ತು. ಆದರೆ ಈ ಬಾರಿ ಅಂದರೆ 2022 ರ ಜುಲೈ 29 ನೇ ತಾರೀಕಿನಂದು 1.59 ಮಿಲಿ ಸೆಕೆಂಡ್ ಮೊದಲೇ ತಿರುಗಿ ತನ್ನ ಹಳೆಯ ದಾಖಲೆಯನ್ನು ಮುರಿದು ಹಾಕಿದೆ. ಆದರೆ ಭೂಮಿಯ ಈ ವಿಚಿತ್ರವಾದ ವರ್ತನೆಗೆ ಇನ್ನು ಸಹ ನಿಖರವಾದ ಕಾರಣಗಳು ತಿಳಿದು ಬಂದಿಲ್ಲ. ಒಂದು ವೇಳೆ ಇದು ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಾ ಹೋದರೆ ಆಗುವ ಅಡ್ಡ ಪರಿಣಾಮಗಳ ಬಗ್ಗೆಯೂ ಸಹ ಸಂಶೋಧನೆಗಳು ನಡೆಯುತ್ತಿವೆ.

%d bloggers like this: