ಬ್ರಿಸ್ಟಿನ್ ನಲ್ಲಿ ನಡೆಯುತ್ತಿರುವ ಬಾರ್ಡರ್ ಗವಾಸ್ಕರ್ ಟೆಸ್ಟ್ ಸರಣಿಯ ಕೊನೆಯ ಪಂದ್ಯದಲ್ಲಿ ಭಾರತ ತಂಡದ ವೇಗಿ ಬೌಲರ್ ಮೊಹಮ್ಮದ್ ಸಿರಾಜ್ ಮಿಂಚಿಂಗ್!ಸಿರಾಜ್ ಮೊದಲು ವಿಕೆಟ್ ಪಡೆದದ್ದು ಈ ನಾಲ್ಕನೇಯ ಟೆಸ್ಟ್ ನ ಮೊದಲ ಇನ್ನಿಂಗ್ಸ್ ಲ್ಲಿ, ಅದಾದ ಬಳಿಕ ಸಿರಾಜ್ ಅವರ ಬೌಲಿಂಗ್ ಎದುರಾಳಿ ಆಸ್ಟ್ರೇಲಿಯಾ ತಂಡಕ್ಕೆ ನಡುಕವನ್ನು ಹುಟ್ಟಿಸಿತ್ತು. ಮೊಹಮ್ಮದ್ ಸಿರಾಜ್ ಒಟ್ಟಾರೆಯಾಗಿ ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಮೂರು ಪಂದ್ಯಗಳಿಂದ ಬರೋಬ್ಬರಿ 13 ವಿಕೆಟ್ಗಳನ್ನು ಪಡೆದು ರೆಕಾರ್ಡ್ ಮಾಡಿದ್ದಾರೆ. ಸಿರಾಜ್ ಮಾಡಿದ 19.5 ಓವರ್ಗಳಲ್ಲಿ ಕೇವಲ 73 ರನ್ ನೀಡಿ ಪ್ರಥಮ ಐದು ವಿಕೆಟ್ ಪಡೆದಿದ್ದಾರೆ.

ಇನ್ನು ಸಿರಜ್ ಟೆಸ್ಟ್ ಸರಣಿನಲ್ಲಿ ಆಡುತ್ತಿರುವುದು ಇದೇ ಮೊದಲು, ಆದರೂ ಕೂಡ ಆಸ್ಟ್ರೇಲಿಯಾದ ವಿರುದ್ದದ ಪ್ರಪ್ರಥಮ ಸರಣಿಯಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ಭಾರತೀಯ ಬೌಲಿಂಗ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಜೊತೆಗೆ ಕ್ರಿಕೆಟ್ ಕ್ಷೇತ್ರದ ಬೌಲಿಂಗ್ ವಿಭಾಗದಲ್ಲಿ ವಿಶೇಷವಾಗಿ ಗಮನ ಸೆಳೆದಿದ್ದಾರೆ. ಈ ಹಿಂದೆ ಅಂದರೆ ಬರೋಬ್ಬರಿ 29 ವರ್ಷಗಳ ಹಿಂದೆ ಕ್ರಿಕೆಟಿಗ ಜಾವಗಲ್ ಶ್ರೀನಾಥ್ ಅವರು ಆಸ್ಟ್ರೇಲಿಯಾದಲ್ಲಿ ಟೆಸ್ಟ್ ಕ್ರಿಕೆಟ್ ಪಾದಾರ್ಪಣೆ ಮಾಡಿ, ಅತಿ ಹೆಚ್ಚು ವಿಕೆಟ್ ಪಡೆದ ಹೆಗ್ಗಳಿಕೆಯ ದಾಖಲೆ ನಿರ್ಮಾಣ ಮಾಡಿದ್ದರು. ಇದೀಗ ಸಿರಾಜ್ ಅವರು ಮೊದಲ ಟೆಸ್ಟ್ ಕ್ರಿಕೆಟ್ ಸರಣಿಯಲ್ಲಿ 13 ವಿಕೆಟ್ ಪಡೆದು ಆ ದಾಖಲೆಯನ್ನು ಬ್ರೇಕ್ ಮಾಡಿದ್ದಾರೆ.

ಜಾವಗಲ್ ಶ್ರೀನಾಥ್ ಆಸ್ಟ್ರೇಲಿಯಾದಲ್ಲಿ ನಡೆದ ಮೊದಲ ಟೆಸ್ಟ್ ಸರಣಿಯಲ್ಲಿ 10 ವಿಕೆಟ್ ಪಡೆದುಕೊಂಡು ನಿರ್ಮಾಣ ಮಾಡಿದ ದಾಖಲೆಯನ್ನು 29 ವರ್ಷಗಳ ಬಳಿಕ ಸಿರಾಜ್ ಆ ರೆಕಾರ್ಡ್ ಅನ್ನು ಬ್ರೇಕ್ ಮಾಡಿ ಶ್ರೀನಾಥ್ ಅವರ ದಾಖಲೆಯನ್ನು ಸೈಡ್ ಹೊಡೆದಿದ್ದಾರೆ. ಮೊಹಮ್ಮದ್ ಸಿರಾಜ್, ಭಾರತ ತಂಡದ ಮಾಜಿ ಆಟಗಾರ ಶ್ರೀಶಾಂತ್ ನಂತರ ಸಿಕ್ಕ ವೇಗದ ಬೌಲರ್ ಎಂದು ಹೇಳಬಹುದು. ಆಸಿಸ್ ನಲ್ಲಿ ಸದ್ಯ ನಡೆಯುತ್ತಿರುವ ಟೆಸ್ಟ್ ಕ್ರಿಕೆಟ್ ನಲ್ಲಿ ಸಿರಾಜ್ ಎರಡನೇ ಮತ್ತು ಮೂರನೇಯ ಪಂದ್ಯದಲ್ಲಿ ಏಳು ವಿಕೆಟ್ ಪಡೆದು, ನಂತರ ನಾಲ್ಕನೇಯ ಟೆಸ್ಟ್ ಪಂದ್ಯದಲ್ಲಿ ಆರು ವಿಕೆಟ್ ಉರುಳಿಸಿ ಭಾರತ ತಂಡದ ಯಶಸ್ವಿ ಬೌಲರ್ ಎಂದು ಗುರುತಿಸಿಕೊಂಡಿದ್ದಾರೆ.