3 ವಾರ ತಡವಾಗಿ ಬಂದರೂ ರಾಕಿ ಭಾಯ್ ಎದುರು ಹೀನಾಯ ಸೋಲು ಕಂಡ ಬಾಲಿವುಡ್ ನಟ

ಹಿಂದಿ ರಾಷ್ಟ್ರ ಭಾಷೆ ಎಂದು ದೇಶಾದ್ಯಂತ ಚರ್ಚೆಗೆ ಕಾರಣರಾದ ಬಾಲಿವುಡ್ ಸ್ಟಾರ್ ನಟ ಅಜಯ್ ದೇವಗನ್ ಅಭಿನಯದ ಸಿನಿಮಾಗೆ ಭಾರಿ ಸೋಲು ಕಂಡಿದೆ. ಈ ಸೋಲಿಗೆ ಕಾರಣ ಆದ ಸಿನಿಮಾ ಅಂದರೆ ಅದು ನಮ್ಮ ಕನ್ನಡದ ರಾಕಿಂಗ್ ಸ್ಟಾರ್ ಯಶ್ ಅಭಿನಯದ ಕೆಜಿಎಫ್ ಚಾಪ್ಟರ್2 ಚಿತ್ರ ಎಂಬುದು. ಹೌದು ಕಿಚ್ಚ ಸುದೀಪ್ ಅವರು ಸಿನಿಮಾ ಕಾರ್ಯಕ್ರಮವೊಂದರಲ್ಲಿ ಹಿಂದಿ ರಾಷ್ಟ್ರ ಭಾಷೆ ಅಲ್ಲ ಎಂದು ಪತ್ರಕರ್ತರೊಬ್ಬರ ಪ್ರಶ್ನೆಗೆ ಉತ್ತರ ನೀಡಿದ್ದರು. ಈ ಹೇಳಿಕೆಯನ್ನು ಬಾಲಿವುಡ್ ಸ್ಟಾರ್ ನಟ ಅಜಯ್ ದೇವಗನ್ ಅವರು ಸುದೀಪ್ ಅವರಿಗೆ ಹಿಂದಿ ರಾಷ್ಟ್ರ ಭಾಷೆ ಅಲ್ಲ ಅಂದ್ಮೇಲೆ ನೀವು ನಿಮ್ಮ ಕನ್ನಡದ ಚಿತ್ರಗಳನ್ನ ಹಿಂದಿ ಭಾಷೆಗೇಕೆ ಡಬ್ ಮಾಡ್ತೀರಾ ಎಂದು ಟೀಕೆ ಮಾಡಿದ್ರು. ತದ ನಂತರದಲ್ಲಿ ಕಿಚ್ಚ ಸುದೀಪ್ ಅವರು ಕೂಡ ಇದಕ್ಕೆ ಖಡಕ್ ಕೌಂಟರ್ ಕೊಟ್ಟರು. ಬಳಿಕ ತನ್ನ ತಪ್ಪಿನ ಅರಿವಾಗಿ ಅಜಯ್ ದೇವಗನ್ ಅವರು ಸುದೀಪ್ ಅವರ ಬಳಿ ಕ್ಷಮೆ ಕೂಡ ಕೇಳಿದ್ರು.

ಇದು ಅಜಯ್ ದೇವಗನ್ ಅವರಿಗೆ ಮುಜುಗರದ ಸಂಗತಿ ಅಂತಾನೇ ಹೇಳಲಾಯಿತು. ಇದೀಗ ಅಜಯ್ ದೇವಗನ್ ಅವರು ತಾವೇ ನಿರ್ದೇಶನ, ನಿರ್ಮಾಣ ಮಾಡಿ ಅಭಿನಯಿಸಿದ ರನ್ ವೇ34 ಚಿತ್ರಕ್ಕೆ ಭಾರಿ ಸೋಲಾಗಿದೆ. ಕಳೆದ ಏಪ್ರಿಲ್ 29ರಂದು ರಿಲೀಸ್ ಆದ ಈ ಚಿತ್ರ ಇದುವರೆಗೆ ಕೇವಲ ಏಳೂವರೆ ಕೋಟಿ ಮಾತ್ರ ಕಲೆಕ್ಷನ್ ಮಾಡಿದೆ. ಇದು ಯಾವ ಮಟ್ಟಿಗೆ ಅಂದರೆ ಹೀರೋಪಂತಿ2 ಚಿತ್ರದ ಗಳಿಕೆಗಿಂತ ಕೂಡ ಹೀನಾಯ ಕಲೆಕ್ಷನ್ ಮಾಡಿ ಅಜಯ್ ದೇವಗನ್ ಅವರ ರನ್ ವೇ 34 ಚಿತ್ರಕ್ಕೆ ಶೇಪ್ ಔಟ್ ಆಗಿದೆ. ಅಜಯ್ ದೇವಗನ್ ಅವರ ಈ ಚಿತ್ರ ಇಷ್ಟು ಕಡಿಮೆ ಗಳಿಗೆಗೆ ಕಾರಣ ನಮ್ಮ ಕನ್ನಡದ ಕೆಜಿಎಫ್2 ಸಿನಿಮಾ ಎಂಬುದು ಅಲ್ಲಿನ ಸಿನಿ ಪಂಡಿತರ ಅಭಿಪ್ರಾಯ. ರಾಕಿಂಗ್ ಸ್ಟಾರ್ ಯಶ್ ಅಭಿನಯದ ಕೆಜಿಎಫ್2 ಚಿತ್ರ ಮುಂಬೈನಲ್ಲಿ ಮಾತ್ರ ಅಲ್ಲ ಇಡೀ ಭಾರತೀಯ ಚಿತ್ರರಂಗದಲ್ಲಿ ಅಪಾರ ಜನಪ್ರಿಯತೆ ಗಳಿಸಿ ಬಾಕ್ಸ್ ಆಫೀಸ್ ಭರ್ಜರಿಯಾಗಿ ಕೋಟಿ ಕೋಟಿ ಲೂಟಿ ಮಾಡುತ್ತಿದೆ. ಒಟ್ಟಾರೆಯಾಗಿ ಅಜಯ್ ದೇವಗನ್ ಅವರ ರನ್ ವೇ 34 ಚಿತ್ರ ಕೆಜಿಎಫ್2 ಚಿತ್ರದ ಮುಂದೆ ಮಂಡಿಯೂರಿದೆ.

%d bloggers like this: