ಕನ್ನಡದ ಸ್ಟಾರ್ ನಿರ್ದೇಶಕನ ಚಿತ್ರದಲ್ಲಿ ಬಹುಭಾಷಾ ಖ್ಯಾತ ನಟಿ! ಹೌದು ದಕ್ಷಿಣ ಭಾರತದ ಪ್ರಸಿದ್ದ ನಟರಾದ ಕಮಲ್ ಹಾಸನ್ ಅವರ ಪುತ್ರಿಯಾದ ಶೃತಿಹಾಸನ್ ಹುಟ್ಟುಹಬ್ಬದಂದು ಸಲಾರ್ ಚಿತ್ರತಂಡದಿಂದ ಭರ್ಜರಿ ಗಿಫ್ಟ್ ಪಡೆದಿದ್ದಾರೆ. ಟಾಲಿವುಡ್ ಬಿಗ್ ಸ್ಟಾರ್ ಪ್ರಭಾಸ್ ನಟಿಸುತ್ತಿರುವ ಸಲಾರ್ ಚಿತ್ರಕ್ಕೆ ಶೃತಿಹಾಸನ್ ಆಯ್ಕೆಯಾಗಿದ್ದಾರೆ. ಶೃತಿಹಾಸನ್ ಅವರ ಹುಟ್ಟುಹಬ್ಬಕ್ಕೆ ಶುಭ ಕೋರಿದ ಪ್ರಭಾಸ್ ನಿಮ್ಮ ಜೊತೆಯಲ್ಲಿ ಅಭಿನಯಿಸುವುದಕ್ಕೆ ನಾನು ಉತ್ಸುಕನಾಗಿದ್ದೇನೆ ಎಂದು ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಬರೆದುಕೊಂಡಿದ್ದಾರೆ. ಇನ್ನು ಈ ಸಲಾರ್ ಚಿತ್ರ ಕನ್ನಡದ ಯಶಸ್ವಿ ಖ್ಯಾತ ನಿರ್ಮಾಪಕರಾದ ವಿಜಯ್ ಕಿರಂಗದೂರ್ ಅವರ ಹೊಂಬಾಳೆ ಫಿಲಂಸ್ ಬ್ಯಾನರ್ ಅಡಿಯಲ್ಲಿ ಈ ಸಲಾರ್ ಚಿತ್ರ ನಿರ್ಮಾಣವಾಗುತ್ತಿದ್ದು, ಕೆಜಿಎಫ್ ಚಿತ್ರದ ಸೂತ್ರಧಾರ ಪ್ರಶಾಂತ್ ನೀಲ್ ಈ ಚಿತ್ರವನ್ನು ನಿರ್ದೇಶನ ಮಾಡುತ್ತಿದ್ದಾರೆ.

ಸಲಾರ್ ಚಿತ್ರದ ಮುಹೂರ್ತ ಕಾರ್ಯಕ್ರಮ ಆರಂಭವಾದಾಗಿನಿಂದ ಈ ಚಿತ್ರದ ನಾಯಕಿ ಯಾರು ಎಂಬುದು ಎಲ್ಲರಿಗೂ ಕುತೂಹಲಕಾರಿ ವಿಷಯವಾಗಿತ್ತು, ಇದೀಗ ಇದಕ್ಕೆ ಪೂರ್ಣವಿರಾಮ ಬಿದ್ದಿದೆ. ಇನ್ನು ಸಲಾರ್ ಚಿತ್ರ ಪ್ರಶಾಂತ್ ನೀಲ್ ಅವರ ಮೊಟ್ಟಮೊದಲ ತೆಲುಗು ಭಾಷೆಯ ಚಿತ್ರವಾಗಿದ್ದು, ಈ ಚಿತ್ರವು ಕೂಡ ಕೆಜಿಎಫ್ ಸಿನಿಮಾದಂತೆಯೇ ಅದ್ದೂರಿಯಾಗಿ ಮೂಡಿಬರಲು ಎಲ್ಲಾ ತಯಾರಿ ಮಾಡಿಕೊಳ್ಳಲಾಗುತ್ತಿದೆ. ಭಾರತೀಯ ಚಿತ್ರರಂಗದ ಪ್ರಖ್ಯಾತ ನಟಿ ಶೃತಿ ಹಾಸನ್ ಅವರ ಹುಟ್ಟು ಹಬ್ಬದಂದೇ ಸಲಾರ್ ಚಿತ್ರಕ್ಕೆ ನಾಯಕಿಯಾಗಿ ಆಯ್ಕೆ ಮಾಡಿರುವುದು ಅವರಿಗೆ ಭರ್ಜರಿ ಗಿಫ್ಟ್ ಸಿಕ್ಕಿದಂತೆ ಆಗಿದೆ. ಇದರಿಂದ ಅವರ ಅಭಿಮಾನಿಗಳು ಕೂಡ ಖುಷಿಯಾಗಿದ್ದಾರೆ. ಆದರೆ ಇತ್ತ ಕನ್ನಡಾಭಿಮಾನಿಗಳು ಅವರಿಗೆ ಕನ್ನಡ ಚಿತ್ರರಂಗಕ್ಕೆ ಸ್ವಾಗತ ಎಂದು ಟ್ಯಾಗ್ ಮಾಡಿ ಟ್ರೋಲ್ ಮಾಡುತ್ತಿದ್ದಾರೆ.

ಇದಕ್ಕೆ ಪ್ರಮುಖವಾದ ಕಾರಣವಿದೆ ಕಳೆದ ಬಾರಿ ದೃವಸರ್ಜಾ ಅಭಿನಯದ ಪೊಗರು ಚಿತ್ರದಲ್ಲಿ ಶೃತಿಹಾಸನ್ ನಾಯಕಿಯಾಗಿ ಅಭಿನಯಿಸುತ್ತಿದ್ದಾರೆ ಎಂಬ ಸುದ್ದಿ ಕೇಳಿಬಂದಿತ್ತು. ಆದರೆ ಅದು ಸುಳ್ಳು ಎಂದು ತಿಳಿಯಿತು, ಇದರ ಬೆನ್ನಲ್ಲೇ ನಟಿ ಶೃತಿಹಾಸನ್ ಅವರು ನಾನು ಕನ್ನಡ ಚಿತ್ರದಲ್ಲಿ ನಟಿಸುತ್ತಿಲ್ಲ, ಆ ರೀತಿಯ ಆಲೋಚನೆಯೂ ಕೂಡ ನನಗಿಲ್ಲ ಎಂದು ಮೂರು ವರ್ಷಗಳ ಹಿಂದೆ ಟ್ವೀಟ್ ಮಾಡಿದ್ದರು. 2017ರಲ್ಲಿ ಮಾಡಿದ್ದ ಈ ಟ್ವೀಟ್ ಅನ್ನು ಇಟ್ಟುಕೊಂಡು ಸೋಶಿಯಲ್ ಮೀಡಿಯಾದಲ್ಲಿ ಕನ್ನಡ ಚಿತ್ರರಂಗಕ್ಕೆ ಸ್ವಾಗತ ಎಂದು ಕನ್ನಡಿಗರು ಟ್ರೋಲ್ ಮಾಡುತ್ತಿದ್ದಾರೆ. ಒಟ್ಟಾರೆಯಾಗಿ ಕನ್ನಡದ ನಿರ್ದೇಶಕನೊಬ್ಬ ಟಾಲಿವುಡ್ ನಲ್ಲಿ ಮಿಂಚುತ್ತಿರುವುದು ಕನ್ನಡಿಗರಿಗೆ ಹೆಮ್ಮೆಯ ವಿಷಯವಾಗಿದೆ ಎನ್ನಬಹುದು. ಮೂರು ವರ್ಷಗಳ ಹಿಂದೆ ಶ್ರುತಿ ಹಾಸನ್ ಅವರು ಕನ್ನಡ ಚಿತ್ರಗಳನ್ನು ಮಾಡುವುದಿಲ್ಲ ಎಂದು ಅಸಡ್ಡೆ ತೋರಿಸಿದ್ದಕ್ಕೆ ಇಂದು ಟ್ವಿಟ್ಟರ್ ಅಲ್ಲಿ ಕನ್ನಡಿಗರು ಶ್ರುತಿ ಹಾಸನ್ ಅವರಿಗೆ ಮಂಗಳಾರತಿ ಮಾಡಿದ್ದಾರೆ.