3 ವರ್ಷಗಳಿಂದ ಯಾವುದೇ ಚಿತ್ರ ಮಾಡದಿದ್ದರೂ ಸಹ 450 ಕೋಟಿ ಗಳಿಸಿದ ಖ್ಯಾತ ನಟಿ

ರಬ್ ನೇ ಬನಾದಿ ಜೋಡಿ ಚಿತ್ರದ ಮೂಲಕ ಬಾಲಿವುಡ್ ಗೆ ಎಂಟ್ರಿ ಕೊಟ್ಟ ಕರ್ನಾಟಕದ ಬೆಡಗಿ ಅನುಷ್ಕಾ ಶರ್ಮಾ ಇದುವರೆಗೂ ಹಲವು ಹಿಟ್ ಚಿತ್ರಗಳನ್ನು ನೀಡಿದ್ದಾರೆ. ಸದ್ಯಕ್ಕೆ ಮಗಳು ವಮಿಕಾಳ ಆರೈಕೆಯಲ್ಲಿ ಬ್ಯುಸಿ ಆಗಿರುವ ಅನುಷ್ಕಾ, ಸಿನಿಮಾಗಳಿಂದ ದೂರ ಉಳಿದಿದ್ದಾರೆ. ಅನುಷ್ಕಾ ಅವರು ನಟನೆಯಿಂದ ದೂರ ಉಳಿದರು ಸಿನಿಮಾ ನಿರ್ಮಾಣದಲ್ಲಿ ಬಿಸಿಯಾಗಿದ್ದಾರೆ. ಹೌದು ಅನುಷ್ಕಾ ಮತ್ತು ಅವರ ಸಹೋದರ ಕರ್ನೇಶ್ ಶರ್ಮಾ ಇಬ್ಬರು ಒಟ್ಟಾಗಿ 2013 ರಲ್ಲಿ ಕ್ಲೀನ್ ಸ್ಲೇಟ್ ಫಿಲಂಸ್ ಎಂಬ ನಿರ್ಮಾಣ ಸಂಸ್ಥೆ ಹುಟ್ಟುಹಾಕಿದರು. ಈಗ ಇಬ್ಬರೂ ಸೇರಿ ಈ ಸಂಸ್ಥೆಯನ್ನು ನಡೆಸುತ್ತಿದ್ದಾರೆ. ಈ ನಿರ್ಮಾಣ ಸಂಸ್ಥೆಯಿಂದ ಒಟ್ಟು ಎಂಟು ಸಿನಿಮಾಗಳನ್ನು ಮಾಡುವ ಸಾಹಸಕ್ಕೆ ಇವರಿಬ್ಬರು ಕೈಹಾಕಿದ್ದಾರೆ.

ಅಮೆಜಾನ್ ಪ್ರೈಮ್ ಹಾಗೂ ನೆಟ್ಫ್ಲಿಕ್ಸ್ ಸಂಸ್ಥೆ ಜೊತೆ ಒಪ್ಪಂದ ಏರ್ಪಟ್ಟಿದೆ ಎಂದು ತಿಳಿದುಬಂದಿದೆ. ಮುಂದಿನ 18 ತಿಂಗಳಲ್ಲಿ ಒಟ್ಟು 8 ಸಿನಿಮಾಗಳನ್ನು ಮಾಡಲು ಒಪ್ಪಂದ ಏರ್ಪಟ್ಟಿದೆ. ಕ್ಲೀನ್ ಸ್ಲೇಟ್ ಫಿಲಂಸ್ ಅಡಿಯಲ್ಲಿ ಎನ್ ಎಚ್ 10, ಪರಿ, ಪಾತಾಲ್ ಲೋಕ್, ಬುಲ್ ಬುಲ್ ಮುಂತಾದ ಪ್ರಾಜೆಕ್ಟ್ ಗಳು ನಿರ್ಮಾಣ ಆಗಿದೆ. ಈ ನಿರ್ಮಾಣ ಸಂಸ್ಥೆಯಿಂದ ಆಗುತ್ತಿರುವ 8 ಸಿನಿಮಾಗಳಿಂದ ಅನುಷ್ಕಾ ಶರ್ಮಾ ಅವರಿಗೆ ಬರೋಬ್ಬರಿ 450 ಕೋಟಿ ರೂಪಾಯಿ ಸಿಗಲಿದೆ ಎಂದು ವರದಿಯಾಗಿದೆ. ಈ ವಿಚಾರ ತಿಳಿದು ಅವರ ಅಭಿಮಾನಿಗಳು ಥ್ರಿಲ್ ಆಗಿದ್ದಾರೆ.

ಅನುಷ್ಕಾ ಶರ್ಮಾ ಅವರು ನಟನೆಯಿಂದ ದೂರ ಉಳಿದರು ಸಹಿತ ಸಿನಿಮಾಗಳಿಂದ ದೂರ ಉಳಿದಿಲ್ಲ. ಕೋವಿಡ್ ಸಮಯದಿಂದ ಇಲ್ಲಿಯವರೆಗೂ ಸ್ವಲ್ಪ ಬ್ರೇಕ್ ತೆಗೆದುಕೊಂಡಿದ್ದ ಅನುಷ್ಕಾ ಅವರು ಸದ್ಯಕ್ಕೆ ಚಕ್ದ ಎಕ್ಸ್ಪ್ರೆಸ್ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಕ್ರಿಕೆಟರ್ ಜೋಲನ್ ಗೋಸ್ವಾಮಿ ಅವರ ಜೀವನಾಧಾರಿತ ಸಿನಿಮಾ ಇದಾಗಿದ್ದು ನೆಟಫ್ಲಿಕ್ಸ್ ನಲ್ಲಿ ಈ ಸಿನಿಮಾ ತೆರೆಗೆ ಬರುತ್ತಿದೆ. ಅನುಷ್ಕಾ ಮತ್ತು ವಿರಾಟ್ ಅವರು ತಮ್ಮ ಮಗಳು ವಮಿಕ ಅವರ ಚಿತ್ರವನ್ನು ಇದುವರೆಗೂ ಹೊರಗಿನ ಜಗತ್ತಿಗೆ ತೋರಿಸಿರಲಿಲ್ಲ.

ಆದರೆ ಜನವರಿ 23ರಂದು ನಡೆದ ಭಾರತ ಹಾಗೂ ದಕ್ಷಿಣ ಆಫ್ರಿಕಾ ಏಕದಿನ ಸರಣಿಯ ಮೂರನೇ ಪಂದ್ಯದ ವೇಳೆ, ಅನುಷ್ಕಾ ಅವರ ಗಮನಕ್ಕೆ ಬಾರದಂತೆ ವಮಿಕ ಅವರ ವಿಡಿಯೋ ಪ್ರದರ್ಶಿಸಲಾಯಿತು. ಇದರ ಬಗ್ಗೆ ಪ್ರತಿಕ್ರಿಯೆ ನೀಡಿದ ಅನುಷ್ಕಾ, ಎಲ್ಲರಿಗೂ ಹಾಯ್ ನಿನ್ನೆ ಸ್ಟೇಡಿಯಂನಲ್ಲಿ ನಮ್ಮ ಮಗಳ ಫೋಟೋವನ್ನು ಸೆರೆಹಿಡಿಯಲಾಯಿತು ಮತ್ತು ಅದನ್ನು ವೈರಲ್ ಮಾಡಲಾಗಿದೆ. ನಮಗೆ ಗೊತ್ತಿಲ್ಲದಂತೆಯೇ ಅದನ್ನು ಚಿತ್ರಿಸಲಾಗಿದೆ. ನಮ್ಮನ್ನು ಕ್ಯಾಮೆರಾದಲ್ಲಿ ಸೆರೆಹಿಡಿಯುವುದು ನಮಗೆ ಗೊತ್ತಿರಲಿಲ್ಲ. ಮಗಳ ವಿಚಾರದಲ್ಲಿ ನಮ್ಮ ನಿರ್ಧಾರ ಮತ್ತು ಮನವಿ ಮೊದಲಿನಂತೆಯೇ ಇದೆ ಎಂದು ಸೋಶಿಯಲ್ ಮೀಡಿಯಾ ದಲ್ಲಿ ಬರೆದುಕೊಂಡಿದ್ದಾರೆ.

%d bloggers like this: