ಯಾವುದೇ ವ್ಯಕ್ತಿ ಆಗಿರಲಿ ಒಂದು ವಿಷಯಕ್ಕಾಗಿ ಒಂದು ಅಥವಾ ಎರಡು ಅಬ್ಬಬ್ಬಾ ಎಂದರೆ ಮೂರು ನಾಲ್ಕು ಬಾರಿ ಪ್ರಯತ್ನಿಸಿ ಅದು ಆಗದೆ ಇದ್ದಾಗ ಅದನ್ನು ಕೈ ಬಿಡುವುದು ಸಹಜ. ಆದರೆ ಇಲ್ಲೊಬ್ಬ ವ್ಯಕ್ತಿ ತನಗೆ ಬೇಕಾದ ಹುದ್ದೆಯನ್ನು ಪಡೆಯಲು ಬರೋಬ್ಬರಿ 39 ಬಾರಿ ಪ್ರಯತ್ನಿಸಿ ಕೊನೆಗೆ 40 ನೆಯ ಬಾರಿಗೆ ಸಫಲಗೊಂಡು ಎಲ್ಲರೂ ಹುಬ್ಬರಿಸುವಂತೆ ಮಾಡಿದ್ದಾನೆ. ಹೌದು ಗೂಗಲ್ ಎಂದರೆ ವಿಶ್ವದ ಅತಿ ದೈತ್ಯ ಕಂಪೆನಿಗಳಲ್ಲಿ ಒಂದು. ನಮಗೆ ಏನೇ ಬೇಕಾದರೂ ತಕ್ಷಣವೆ ನಮಗೆ ನೆನಪಾಗುವುದು ಇದೆ ಗೂಗಲ್. ಇಂತಹ ದೈತ್ಯ ಕಂಪೆನಿಯಲ್ಲಿ ಹುದ್ದೆ ಪಡೆಯುವುದು ಎಂದರೆ ಸಾಮಾನ್ಯದ ಸಂಗತಿಯಲ್ಲ.

ಆದರೆ ಇದೆ ದೈತ್ಯ ಕಂಪೆನಿಯಲ್ಲಿ ಹುದ್ದೆ ಪಡೆಯಲೇಕೆಂಬ ಹಠ ಹೊಂದಿದ್ದ ವ್ಯಕ್ತಿಯ ಹೆಸರು ಟೈಲರ್ ಕೊಹೆನ್. ಹೌದು ಟೈಲರ್ ಕೊಹೇನ್ ಗೆ ಗೂಗಲ್ ಕಂಪೆನಿಯಲ್ಲಿ ಹುದ್ದೆ ಪಡೆಯುವ ಹೆಬ್ಬಯಕೆ ಇತ್ತು. ಆದರೆ ಗೂಗಲ್ ಇವರನ್ನು ಬರೋಬ್ಬರಿ 39 ಬಾರಿ ಫೆಲ್ ಮಾಡಿತ್ತು. ಆದರೆ ಈ ವ್ಯಕ್ತಿ ಪ್ರತಿ ಬಾರಿಯೂ ತಿರಸ್ಕೃತವಾದಗ ಧೈರ್ಯ ಕಳೆದುಕೊಳ್ಳದೆ ತನ್ನ ದಾರಿ ಬದಲಿಸದೆ ತನ್ನ ಇಷ್ಟದ ಉದ್ಯೋಗ ಪಡೆದೇ ತೀರಿದ್ದಾನೆ. 39 ಬಾರಿ ಸೋತರೂ ಎದೆಗುಂದದೆ ಈತ ಮಾಡಿದ ಸಾಧನೆ ಇದೀಗ ವಿಶ್ವಾದ್ಯಂತ ವೈರಲ್ ಆಗಿದೆ. ಹಾಗೂ ಈ ವ್ಯಕ್ತಿಯ ಹಠಕ್ಕೆ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಟೈಲರ್ ಈ ಮೂಲಕ ಸತತ ಪ್ರಯತ್ನ ಹಾಗೂ ತಾಳ್ಮೆಯಿಂದ ಏನನ್ನಾದರೂ ಪಡೆಯಲು ಸಾಧ್ಯ ಎಂಬ ಸಂದೇಶವನ್ನು ಸಾರಿದ್ದಾರೆ ಎಂದರೆ ತಪ್ಪಾಗಲಿಕ್ಕಿಲ್ಲ.